ಸಿಯೋಲ್ (ದಕ್ಷಿಣ ಕೊರಿಯಾ): ಸ್ಯಾಮ್ಸಂಗ್ ಗ್ಯಾಲಾಕ್ಸಿ ಬಡ್ಸ್ 2 ಪ್ರೋ ಹೆಸರಿನ ಮತ್ತೊಂದು ಪವರ್ಫುಲ್ ಇಯರ್ ಬಡ್ಸ್ ಮಾರುಕಟ್ಟೆಗೆ ಪರಿಚಯಿಸಿದೆ. ವೈರ್ಲೆಸ್ ಆದ ಬಡ್ಸ್ 2 ಪ್ರೋ ಈ ಹಿಂದಿನ ಇಯರ್ಬಡ್ಸ್ಗಿಂತಲೂ ಶೇ.15 ರಷ್ಟು ಚಿಕ್ಕದಾಗಿದೆ. ಇದು ಭಾರತದ ಮಾರುಕಟ್ಟೆಗಳಲ್ಲಿ ಆ.26 ರಿಂದ ಲಭ್ಯವಿರಲಿದೆ.
ಈ ಬಡ್ಸ್ ಅನ್ನು ಗಾಳಿಯು ಹೊರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಇದಕ್ಕಾಗಿ ರಂಧ್ರ ಮತ್ತು ನಳಿಕೆಯನ್ನು ರೂಪಿಸಲಾಗಿದೆ. ಹೊರಗಿನ ಶಬ್ದ ಕಡಿಮೆ ಮಾಡಲು ಮೂರು ಮೈಕ್ ಸಿಸ್ಟಂ ಮತ್ತು ವಿಸ್ತರಿತ ವಿಂಡ್ಶೀಲ್ಡ್ ಅನ್ನು ಹೊಂದಿದೆ. ಅತ್ಯುತ್ತಮ ಧ್ವನಿ ನಿಯಂತ್ರಕವನ್ನು ಹೊಂದಿದೆ. 24 ಬಿಟ್ ಹೈ-ಫೈ ಶಬ್ದ ಮತ್ತು ಪ್ರತಿ ಬಡ್ 10 ಎಂಎಂ ಡ್ರೈವರ್‌ಗಳನ್ನು ಹೊಂದಿದೆ.
ಪ್ರತಿ ಬಡ್ಸ್ 61 ಎಂಎಎಚ್ ಬ್ಯಾಟರಿ ಶಕ್ತಿ ಹೊಂದಿದೆ. ಇವುಗಳನ್ನು 8 ಗಂಟೆಯವರೆಗೂ ಬಳಸಬಹುದಾಗಿದೆ. ಪ್ಲೇಬ್ಯಾಕ್ ಆಗಿ 5 ಗಂಟೆಗಳವರೆಗೆ ಬಳಕೆಗೆ ಬರುತ್ತವೆ. ಇದರ ಚಾರ್ಜಿಂಗ್ ಕೇಸ್ 515 mAh ಬ್ಯಾಟರಿ ಯುಎಸ್ಬಿ ಸಿ ಪೋರ್ಟ್ ಅನ್ನು ಹೊಂದಿದೆ. ಒಟ್ಟು ಪ್ಲೇಬ್ಯಾಕ್ ಸಮಯವನ್ನು 29 ಗಂಟೆಗಳವರೆಗೆ ವಿಸ್ತರಿಸುತ್ತದೆ.
ನೀರಿನಲ್ಲಿ ಬಿದ್ದರೂ ಇದು ತಡೆಕೊಳ್ಳುವ ಸಾಮರ್ಥ್ಯ ಹೊಂದಿದ್ದು, 5.3 ವೇಗದ ಬ್ಲೂಟೂರ್ ಸಂಪರ್ಕ, ಎಕೆಜಿ ಟ್ಯೂನಿಂಗ್ ಇದರ ವಿಶೇಷವಾಗಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ ಬಡ್ಸ್ಗಳ ನಿಖರ ಬೆಲೆ ತಿಳಿದಿಲ್ಲವಾದರೂ ಇದು 8 ಸಾವಿರದವರೆಗೂ ಇರಲಿದೆ ಎಂದು ಅಂದಾಜಿಸಲಾಗಿದೆ.
ಇದು ಗ್ರ್ಯಾಫೈಟ್, ವೈಟ್ ಮತ್ತು ಬೋರಾ ಪರ್ಪಲ್ನ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಮುಂಗಡವಾಗಿ ಆರ್ಡರ್ ಮಾಡಲು ಅವಕಾಶವಿದ್ದು, ಆಗಸ್ಟ್ 26 ರಂದು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಕಂಪ್ಯೂಟರ್, ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್ಫೋನ್ಗಳಿಗೆ ಇವುಗಳನ್ನು ಬಳಸಬಹುದು.
ಓದಿ: ನೀವು ಅನ್ಲಾಕ್ ಪಿನ್ ಮರೆತಿದ್ದೀರಾ? ಹಾಗಾದರೆ ಹೀಗೆ ಮಾಡಿ!