ETV Bharat / science-and-technology

ಮರಳಿ ಗೂಡಿಗೆ: ಹೊಸ ಮಂಡಳಿಯೊಂದಿಗೆ ಓಪನ್​ಎಐಗೆ ಸ್ಯಾಮ್​ ಆಲ್ಟಮನ್​ - ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಲ್ಲಾ

Sam Altman: ಹಲವು ಸುತ್ತಿನ ಮಾತುಕತೆ ಮತ್ತು ಸ್ಯಾಮ್​ ಬೇಡಿಕೆ ಮನ್ನಣೆ ನೀಡಿದ ಓಪನ್​ ಎಐ ಇದೀಗ ಹೊಸ ಮಂಡಳಿಯೊಂದಿಗೆ ಅವರನ್ನು ಕರೆ ತರಲು ಸಜ್ಜಾಗಿದೆ.

Sam Altman returning to ChatGPT with new board

author img

By ETV Bharat Karnataka Team

Published : Nov 22, 2023, 2:03 PM IST

ಸ್ಯಾನ್​ ಫ್ರಾನ್ಸಿಸ್ಕೋ: ಟೆಕ್​​ ಜಗತ್ತಿನಲ್ಲಿ ಕಳೆದ ಒಂದು ವಾರದಿಂದ ಜಾಗತಿಕವಾಗಿ ಸದ್ದು ಮಾಡುತ್ತಿರುವ ಹೆಸರು ಸ್ಯಾಮ್​ ಆಲ್ಟ್​ಮನ್​​. ಓಪನ್​ಎಐನಿಂದ ವಜಾಗೊಂಡಿದ್ದ ಚಾಟ್​ಜಿಪಿಟಿ ಸೃಷ್ಟಿಕರ್ತ ಆಲ್ಟಮನ್​ ಇದೀಗ ಮತ್ತೆ ತಮ್ಮ ಗೂಡಿಗೆ ಮರಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವಾರದಲ್ಲಿ ಅವರು ಹೊಸ ಮಂಡಳಿಯೊಂದಿಗೆ ತಮ್ಮ ಓಪನ್​ ಎಐ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ.

ಸ್ಯಾಮ್​ ಆಲ್ಟಮನ್​ ಓಪನ್​ಎಐ ಮಂಡಳಿ ನಡುವಿನ ಹಗ್ಗ ಜಗ್ಗಾಟ ಕೊನೆಯ ಹಂತದಲ್ಲಿದೆ. ಅವರನ್ನು ಮರಳಿ ತರುವ ಎಲ್ಲಾ ಯತ್ನಕ್ಕೆ ಮಂಡಳಿಯ ನಿರ್ದೇಶಕರು ಪ್ರಯತ್ನಿಸಿದ್ದರು. ಇದೀಗ ಹೊಸ ಮಂಡಳಿ ರಚನೆ ಮಾಡುವ ಮೂಲಕ ಅವರನ್ನು ಮತ್ತೆ ಸಂಸ್ಥೆಗೆ ಸ್ವಾಗತಿಸಲಾಗುತ್ತಿದೆ.

ಹೊಸ ಮಂಡಳಿಯೊಂದಿಗೆ ಬರಲಿರುವ ಆಲ್ಟಮನ್​: ವರದಿಗಳ ಅನುಸಾರ, ಕ್ವಾರ ಸಿಇಒ ಆ್ಯಡಂ ಡಿ ಎಂಜೆಲೊ, ಓಪನ್​ ಎಐನ ಪ್ರಸ್ತುತ ಸದಸ್ಯರು ಮತ್ತು ಆಲ್ಟಮನ್​ ಮತ್ತು ಇತರೆ ಮಂಡಳಿ ಸದಸ್ಯರ ಜೊತೆಗೆ ಚರ್ಚೆಗಳು ಮುಂದುವರೆದಿವೆ. ಮಂಡಳಿ ಮತ್ತು ಆಲ್ಟಮನ್​ ಕಂಪನಿಗೆ ಮರಳುವ ಸಂಭಾವ್ಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದ್ದು, ಆಲ್ಟಮನ್​ ಹೊಸ ಮಂಡಳಿ ನಿರ್ದೇಶಕರಾಗಿ ಮತ್ತೆ ಬರುವ ಸಾಧ್ಯತೆ ಇದೆ ಎಂದು ಬ್ಲೂಮ್​ಬರ್ಗ್​​ ವರದಿ ಮಾಡಿದೆ.

ಅಂದರಂತೆ ಎಕ್ಸ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ಸಂಸ್ಥೆ, ಓಪನ್​ಎಐಗೆ ಮರಳುವ ಹೊಸ ಒಪ್ಪಂದ ಕುರಿತು ಸ್ಯಾಮ್​ ಅವರೊಂದಿಗೆ ಮಾತನಾಡಲಾಗಿದೆ. ಅದರ ಅನುಸಾರ ಹೊಸ ಮಂಡಳಿಯಲ್ಲಿ ಲ್ಯಾರಿ ಸಮರ್ಸ್​, ಆ್ಯಡಂ ಡಿ ಎಂಜೆಲೊ, ಬ್ರೆಟ್​ ಟೈಲರ್​ಯೊಂದಿಗೆ ಸ್ಯಾಮ್​ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತು ಅಂತಿಮ ಚರ್ಚೆ ಸಾಗಿದೆ ಎಂದು ಪೋಸ್ಟ್​​ ಮಾಡಿದ್ದಾರೆ.

ಆಲ್ಟಮನ್​ ಅವರನ್ನು ಮತ್ತೆ ಸಂಸ್ಥೆಗೆ ಕರೆತರಬೇಕು ಎಂದು ಮಂಡಳಿ ಮೇಲೆ ತ್ರೈವ್​ ಕಾಪಿಟಲಲ್​, ಖೋಸ್ಲಾ ವೆಂಚರ್​, ಟೈಜಗರ್​ ಗ್ಲೋಬಲ್​ ಮ್ಯಾನೇಜ್​ಮೆಂಟ್​​ ಸೇರಿದಂತೆ ಚಾಟ್​ ಜಿಪಿಟಿ ಅಭಿವೃದ್ಧಿಯ ಸಿಬ್ಬಂದಿ ಒತ್ತಾಯಿಸಿದ್ದರು. ಇತ್ತ ಆಲ್ಟಮನ್​ ತಾವು ಮತ್ತೆ ಸಂಸ್ಥೆಗೆ ಮರಳಬೇಕು ಎಂದರೆ, ಓಪನ್​ಎಐ ಆಡಳಿತದ ಮಂಡಳಿಯಲ್ಲಿ ಗಮನಾರ್ಹ ಬದಲಾವಣೆ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಐ ಲವ್​ ಓಪನ್​ಎಐ: ಸ್ಯಾಮ್​ ಮತ್ತೆ ಓಪನ್​ಎಐಗೆ ಮರಳುವ ನಿರ್ಧಾರ ಕುರಿತು ಎಕ್ಸ್​​ನಲ್ಲಿ ಕೂಡ ತಿಳಿಸಿದ್ದಾರೆ. ನಾನು ಓಪನ್​ಎಐ ಪ್ರೀತಿಸುತ್ತೇನೆ. ನಾನು ಓಪನ್​ಎಐಗೆ ಮರಳುತ್ತಿದ್ದು, ಮೈಕ್ರೋಸಾಫ್ಟ್​ನೊಂದಿಗೆ ತಮ್ಮ ಸಹಭಾಗಿತ್ವ ಅಭಿವೃದ್ಧಿಯನ್ನು ಬಲಗೊಳಿಸುವುದಾಗಿ ತಿಳಿಸಿದ್ದರು.

ಓಪನ್​​​ ಎಐದಿಂದ ವಜಾಗೊಳ್ಳುತ್ತಿದ್ದಂತೆ ಸ್ಯಾಮ್​ ಆಲ್ಟಮನ್​ ಅವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಂಡ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಲ್ಲಾ, ತಮ್ಮ ಸಂಸ್ಥೆ ಎಲ್ಲಾ ಓಪನ್​ಎಐಗೆ ಹೊಸ ಯೋಜನೆಯ ಭಾಗವಾಗಿಸಿ ಸ್ಥಾನ ಕಲ್ಪಿಸುವ ಭರವಸೆಯನ್ನು ನೀಡಿದ್ದರು. ಆದರೆ, ಆಲ್ಟಮನ್​ ಓಪನ್​ಎಐಗೆ ಮತ್ತೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕುಲು ಸಾಧ್ಯವಿಲ್ಲ ಎಂದು ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ತಿಳಿಸಿದ್ದರು. ಇದೀಗ ಅವರು ತಮ್ಮ ಮಾತೃ ಸಂಸ್ಥೆಗೆ ಮರಳುತ್ತಿರುವ ನಿರ್ಧಾರವನ್ನು ನಾದೆಲ್ಲಾ ಗೌರವಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಓಪನ್​ಎಐ ತೊರೆದು ಮೈಕ್ರೋಸಾಫ್ಟ್​ ಸೇರುವ ಬೆದರಿಕೆಯೊಡ್ಡಿದ 500ಕ್ಕೂ ಹೆಚ್ಚಿನ ಸಿಬ್ಬಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.