ನವದೆಹಲಿ: ಒಂದೆಡೆ ಕೊರೊನಾ ವ್ಯಾಕ್ಸಿನೇಷನ್ ವೇಗವಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ ಕೊರೊನಾ ವ್ಯಾಕ್ಸಿನೇಷನ ತೆಗೆದುಕೊಳ್ಳಲು ಜನರು ಹಿಂದೇಟು ಹಾಕಿದ್ದಾರೆ. ಲಸಿಕೆಗಳಲ್ಲಿ ಅದರಲ್ಲೂ ಫೈಜರ್ ಮತ್ತು ಮೊಡೆರ್ನಾ ಪುರುಷರ ವೀರ್ಯಗಳ ಸಂಖ್ಯೆ ಮೇಲೆ ಪರಿಣಾಮ ಬೀರುತ್ತವೆ ಎಂಬ ಆರೋಪದಿಂದಾಗಿ ಲಸಿಕೆ ತೆಗೆದುಕೊಳ್ಳುವುದರಿಂದ ದೂರ ಉಳಿಯುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಎಂಬುದು ತಜ್ಞರ ವಾದವಾಗಿದೆ.
ಎಂಆರ್ಎನ್ಎ (Messenger RNA) ಲಸಿಕೆಗಳಾದ ಫೈಜರ್ ಮತ್ತು ಮೊಡೆರ್ನಾ ಲಸಿಕೆಗಳ ಮೇಲೆ ಅಧ್ಯಯನ ನಡೆಸಿದ ತಜ್ಞರು ಈ ವ್ಯಾಕ್ಸಿನ್ಗಳನ್ನು ತೆಗೆದುಕೊಳ್ಳುವುದರಿಂದ ಇಂಥಹ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎರಡು ಡೋಸ್ ತೆಗೆದುಕೊಂಡ ಪುರುಷರ ವೀರ್ಯಾಣುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ.
ಲಸಿಕೆಗಳ ಮೇಲಿನ ಅಪನಂಬಿಕೆಯೇ ಇಂಥಹ ಎಲ್ಲಾ ಗಾಳಿ ಸುದ್ದಿ ಹರಡಲು ಕಾರಣ ಎಂದು ಅಮೆರಿಕದ ಮಿಯಾಮಿ ವಿಶ್ವ ವಿದ್ಯಾಲಯದ ಹೇಳಿದ್ದು, ಜೆಎಎಂಎ ಜರ್ನಲ್ನಲ್ಲಿ ಈ ವಿಚಾರವನ್ನು ಪ್ರಸ್ತುತಪಡಿಸಿದ್ದಾರೆ.
WHO ಸಂಶೋಧನೆ..
ಫೈಜರ್ ಮತ್ತು ಮೊಡೆರ್ನಾ ಲಸಿಕೆಗಳ ಮೇಲೆ ವಿಶ್ವ ಆರೋಗ್ಯ ಸಂಘಟನೆ ಕೂಡಾ ಸಂಶೋಧನೆ ನಡೆಸಿದ್ದು, 18ರಿಂದ 50 ವರ್ಷದೊಳಗಿನ 45 ಮಂದಿ ಮೇಲೆ ಈ ಪ್ರಯೋಗ ನಡೆದಿತ್ತು. ವ್ಯಾಕ್ಸಿನೇಷನ್ ನೀಡಿದ 70 ದಿನಗಳ ನಂತರ ಅವರನ್ನು ಎರಡರಿಂದ ಏಳು ದಿನಗಳ ಕಾಲ ಉಪವಾಸವಿರಿಸಿ, ವೀರ್ಯದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಇದನ್ನೂ ಓದಿ: ಬಂಧುಗಳ ಬಲಿ ಪಡೆದ ಕೋವಿಡ್: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ವೀರ್ಯದ ಮಾದರಿಗಳನ್ನು ಪರಿಶೀಲನೆ ನಡೆಸಿದಾಗ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮೊದಲು ಅಥವಾ ನಂತರ ವೀರ್ಯದ ಪ್ರಮಾಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬ ಸತ್ಯವನ್ನು ಈ ವೇಳೆ ಕಂಡುಕೊಂಡಿದ್ದರು.