ಮುಂಬೈ: ಜಾಗತಿಕ ತಂತ್ರಜ್ಞಾನದ ಬ್ರಾಂಡ್ ಆಗಿರುವ ಒನ್ ಪ್ಲಸ್ ಮಡಚಬಹುದಾದ (ಫೋಲ್ಡಬಲ್) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಭಾರತದಲ್ಲಿ 1,39,999ಕ್ಕೆ ಈ ಮಡಚಬಹುದಾದ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದೇ ಅಕ್ಟೋಬರ್ 27ರಂದು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಒನ್ ಪ್ಲಸ್ ಗ್ರಾಹಕರು 'ಒನ್ ಪ್ಲಸ್ ಓಪನ್' ಮಡುಚಬಹುದಾದ ಫೋನ್ ಖರೀದಿಸಬಹುದಾಗಿದೆ. ಇದು ವಾಯೇಜರ್ ಕಪ್ಪು ಮತ್ತು ಎಮರ್ಲ್ಡ್ ಡಸ್ಕ್ ಬಣ್ಣದಲ್ಲಿ ಲಭ್ಯವಿದೆ ಎಂದು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ
ಒನ್ ಪ್ಲಸ್ ಗ್ರಾಹಕರು ಈ ಹೊಸ ಮಡುಚಬಹುದಾದ ಫೋನ್ ಅನ್ನು ಪ್ರೀ ಬುಕ್ಕಿಂಗ್ ಮಾಡುವ ಮೂಲಕವೂ ಪಡೆಯಬಹುದಾಗಿದ್ದು, ಮುಂಗಡ ಕಾಯ್ದಿರುಸುವಿಕೆ ಅಕ್ಟೋಬರ್ 19 ರಿಂದ ಅಂದರೆ ನಿನ್ನೆಯಿಂದಲೇ ಆರಂಭವಾಗಿದೆ. ಶೀಘ್ರದಲ್ಲಿ ಕೊಳ್ಳುವವರು 13 ಸಾವಿರದವರೆಗೆ ಲಾಭವನ್ನು ಕೂಡ ಪಡೆಯಬಹುದಾಗಿದೆ.
ಹೀಗಿದೆ ಫೀಚರ್ಸ್: ಈ ಕುರಿತು ತಿಳಿಸಿರುವ ಒನ್ಪ್ಲಸ್ನ ಸಿಒಒ ಮತ್ತು ಅಧ್ಯಕ್ಷ, ಒನ್ಪ್ಲಸ್ ಓಪನ್ ಬಿಡುಗಡೆ ಮಾಡುವ ಮೂಲಕ ಜಗತ್ತಿನಾನಂದ್ಯಂತ ನಾವು ಇದೀಗ ಮಡುಚಬಹುದಾದ ಫೋನ್ ಅನುಭವವನ್ನು ಗ್ರಾಹಕರಿಗೆ ನೀಡಲು ಉತ್ಸಾಹವನ್ನು ಹೊಂದಿದ್ದೇವೆ. ಇದು ಮಡುಚಬಹುದಾದ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಮಡುಚಬಡುದಾದ ಫೋನ್ ಮೂರು ಮುಖ್ಯ ಕ್ಯಾಮೆರಾ ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾ 48ಮೆಗಾ ಪಿಕ್ಸೆಲ್ ಜೊತೆಗೆ ಒಐಎಸ್ ಇರಲಿದೆ. ಜೊತೆಗೆ 64ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಜೊತೆಗೆ 6ಎಕ್ಸ್ ಸೆನ್ಸಾಲ್ ಲೊಸ್ಲೆಸ್ ಜೂಮ್ ಮತ್ತು ಒಐಎಸ್ ಹೊಂದಿರಲಿದೆ. 48 ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮೆರಾ ಜೊತೆಗೆ ಆಟೋಫೋಕಸ್ ಇರಲಿದೆ.
ಫೋಲ್ಡಬಲ್ನಲ್ಲೂ ಕೂಡ ಎರಡು ಸೆಲ್ಪಿ ಕ್ಯಾಮೆರಾ ಇದ್ದು, ಇದರ ಮುಖ್ಯ ಡಿಸ್ಪ್ಲೈ ಅಲ್ಲಿ 20 ಎಂಪಿ ಸೆನ್ಸಾರ್ ಮತ್ತು 32 ಎಂಪಿ ಕ್ಯಾಮೆರಾ ಕವರ್ ಸ್ಕ್ರೀನ್ನಲ್ಲಿರಲಿದೆ.
ಇನ್ನು ಇದರ ಕವರ್ ಸ್ಕ್ರೀನ್ 6.31 ಇಂಚ್ ಜೊತೆಗೆ 20:09 ರೆಷಿಯೊದಲ್ಲಿದೆ. ಇದರ ಪರದೆ ಯ ಇಮ್ಮರ್ಶನ್ ಅನ್ನು ಹೆಚ್ಚಿಸಲು, ಬಳಕೆದಾರರು 7.82-ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಮುಖ್ಯ ಡಿಸ್ಪ್ಲೇ ಮೂಲಕ ಪಡೆಯಬಹುದಾಗಿದೆ.
ಇದಕ್ಕಿಂತ ಹೆಚ್ಚಾಗಿ ಇದು ಡಾಲ್ಬಿ ವಿಶನ್ ವಿಡಿಯೋಗೆ ಪ್ಲೇಬ್ಯಾಕ್ಗೆ ಬೆಂಬಲಿಸುತ್ತದೆ. ಅಲ್ಟ್ರಾ ಇಮ್ಮರ್ಸಿವ್ ಆಧುನಿಕ ಮನರಂಜನೆ ಮತ್ತು ಗುಣಮಟ್ಟದ ಆಡಿಯೊದೊಂದಿಗೆ ಸೆಳೆಯುತ್ತದೆ. ಜೊತೆಗೆ ಮೂರು ಸ್ಪೀಕರ್ ಸೆಟ್ ಅಪ್ ಅನ್ನು ಇದು ಹೊಂದಿದೆ.
ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನರೇಷನ್ 2 ಮೊಬೈಲ್ ಪ್ಲಾಟ್‌ಫಾರ್ಮ್, 16 ಜಿಬಿ ರ್ಯಾಮ್ ಮತ್ತು 512 ಜಿಬಿ ಸ್ಟೋರೆಜ್ ಹೊಂದಿದೆ. ಓಪನ್ ವೈ-ಫೈ 7 ಔಟ್ ಬಾಕ್ಸ್ ಮತ್ತು ಡ್ಯುಯಲ್ 5ಜಿ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿದೆ.
ಇದನ್ನೂ ಓದಿ: ಒಂದೇ ಫೋನಿನಲ್ಲಿ 2 ವಾಟ್ಸ್ಆ್ಯಪ್ ಖಾತೆ ಲಾಗಿನ್: ಬಳಸುವುದು ಹೇಗೆ?