ನವದೆಹಲಿ: ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಬ್ರ್ಯಾಂಡ್ ನಥಿಂಗ್ ಬುಧವಾರ ತನ್ನ ಫೋನ್ (2) ಗಾಗಿ ಆಂಡ್ರಾಯ್ಡ್ 14 ರಿಂದ ಕಾರ್ಯನಿರ್ವಹಿಸಲ್ಪಡುವ ಓಎಸ್ 2.5 ಓಪನ್ ಬೀಟಾ 1ನ್ನು ಅಪ್‌ಡೇಟ್ ಮಾಡಲಾಗಿದೆ ಎಂದು ಪ್ರಕಟಿಸಿದೆ.
"ಜುಲೈನಲ್ಲಿ OS 2.0 ಅನ್ನು ಬಿಡುಗಡೆ ಮಾಡಿದ ನಂತರ, OS 2.5 ನಥಿಂಗ್‌ನಲ್ಲಿ ಅತ್ಯಂತ ಮಹತ್ವದ ಅಪ್‌ಡೇಟ್ ಮಾಡಲಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನುಭವವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮತ್ತು ವೈಯಕ್ತಿಕವಾಗಿಸಲು ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ಈ ಅಪ್ಡೇಟ್ ಮಾಡಲಾಗಿದೆ " ಎಂದು ನಥಿಂಗ್ ತನ್ನ ಪ್ರಕಟಣೆಯಲ್ಲಿ ಹೇಳಿದೆ .
"ಇನ್ನೂ ಹೆಚ್ಚು ಪರಿಪೂರ್ಣವಾದ ನವೀಕರಣವನ್ನು ನೀಡಲು, ಫೋನ್ (2) ನಲ್ಲಿ ಬೀಟಾ ಪರೀಕ್ಷೆ ನಡೆಸಲಾಗಿದೆ. ನಮ್ಮ ಹೊಸ ಸುಧಾರಣೆಗಳಿಗೆ ಆರಂಭಿಕ ಪ್ರವೇಶವನ್ನು ಪಡೆಯಲು ಬೀಟಾ 1 ಅನ್ನು ಒಪನ್ ಮಾಡಿ" ಎಂದೂ ಹೇಳಿದೆ.
ಹೊಸ ಅಪ್‌ಡೇಟ್ ಏನೆಲ್ಲ ಇದೆ: ಹೊಸ ಫೋಟೋಗಳ ವಿಜೆಟ್ ಹೊಂದಿದ್ದು, ನಿಮ್ಮ ಹೋಮ್ ಸ್ಕ್ರೀನ್ ಮತ್ತು ಲಾಕ್ ಸ್ಕ್ರೀನ್ ಎರಡರಲ್ಲೂ ನಿಮ್ಮ ಮೆಚ್ಚಿನ ಫೋಟೋಗಳನ್ನು ಪ್ರದರ್ಶಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಹೊಸ ಸ್ಕ್ರೀನ್‌ಶಾಟ್ ಎಡಿಟರ್ ಮತ್ತು ಮೆನು, ಹೆಚ್ಚು ಸುಧಾರಿತ ಎಡಿಟಿಂಗ್ ವೈಶಿಷ್ಟ್ಯಗಳು ಮತ್ತು ತ್ವರಿತ ಅಳಿಸುವಿಕೆಗೆ ಅವಕಾಶ ನೀಡಲಾಗಿದೆ. ಹಿಂಭಾಗದ ನವೀಕರಿಸಿದ ವಿನ್ಯಾಸ ನಥಿಂಗ್ಸ್ ಸ್ಟೈಲ್‌ಗೆ ಹೆಚ್ಚು ಅನುಗುಣವಾಗಿರಲು ಗೆಸ್ಚರ್, ಕ್ಲೀನರ್ ಹೋಮ್ ಸ್ಕ್ರೀನ್ ನೋಟಕ್ಕಾಗಿ ಹೊಸ ಘನ ಬಣ್ಣದ ವಾಲ್‌ಪೇಪರ್‌ಗಳನ್ನು ನೀಡಲಾಗಿದೆ.
ಇದಲ್ಲದೇ, ಯಾವುದೇ ಓಪನ್ ಬೀಟಾದೊಂದಿಗೆ ಈ ಆವೃತ್ತಿಯು ಅಂತಿಮವಲ್ಲ ಮತ್ತು ಸಾಫ್ಟ್‌ವೇರ್ ಅಸ್ಥಿರತೆಯ ಸಾಧ್ಯತೆಯೂ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಬೀಟಾದಲ್ಲಿ ಈಗಾಗಲೇ ದಾಖಲಾದ ಬಳಕೆದಾರರು ಸೆಟ್ಟಿಂಗ್‌ಗಳು > ಸಿಸ್ಟಮ್ > ಸಿಸ್ಟಮ್ ಅಪ್‌ಡೇಟ್ ಮೂಲಕ ನವೀಕರಿಸಿಕೊಳ್ಳಬಹುದಾಗಿದೆ.
"ನಾವು ನಂತರದ ದಿನಾಂಕದಲ್ಲಿ ಫೋನ್ (1) ಮತ್ತು ಫೋನ್ (2) ಸಾಧನಗಳಿಗೆ ಪೂರ್ಣ Android 14 ರೋಲ್‌ಔಟ್‌ನಲ್ಲಿ ನವೀಕರಿಸಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ಒಎಸ್ನೊಂದಿಗೆ ಫೋನ್ನ ಕಾರ್ಯಕ್ಷಮತೆ, ಫೋನ್ನ ಔಟ್ ಲುಕ್, ಬ್ಯಾಟರಿ, ಚಾರ್ಜಿಂಗ್ ವೇಗ, ಸಾಫ್ಟ್‌ವೇರ್ ಅಪ್ಡೇಟ್ ಮಾಡಲಾಗಿದೆ. ಹೆಚ್ಚು-ಹೈಪ್ ಮಾಡಿದ ಗ್ಲಿಫ್ ಎಲ್ಇಡಿಗಳನ್ನು ಸಹ ನವೀಕರಿಸಲಾಗಿದೆ. ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿಷಯದಲ್ಲಿ ಫೋನ್ ಹೆಚ್ಚು ಗ್ರಾಹಕ ಸ್ನೇಹಿ ಮಾಡಲಾಗಿದೆ.
ಇದನ್ನು ಓದಿ