ETV Bharat / science-and-technology

ನಿಮ್ಮ ಮೌನ ಆಲೋಚನೆಗಳನ್ನು ಓದಿ ಹೇಳುತ್ತೆ ಈ ಹೊಸ ಎಐ ತಂತ್ರಜ್ಞಾನ! - ಮೆದುಳಿನ ಸಂಕೇತ

ಮನಸ್ಸಿನ ಮೌನ ಆಲೋಚನೆಗಳನ್ನು ಓದಿ ಅದನ್ನು ಪಠ್ಯವಾಗಿ ಪರಿವರ್ತಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸಂಶೋಧಕರು ತಯಾರಿಸಿದ್ದಾರೆ.

New portable, non-invasive AI system turns thoughts into text

author img

By ETV Bharat Karnataka Team

Published : Dec 13, 2023, 12:18 PM IST

ಸಿಡ್ನಿ : ನೀವು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಸ್ಕ್ರೀನ್ ಮೇಲೆ ಬರೆದು ತೋರಿಸುವ ಕೃತಕ ಬುದ್ಧಿಮತ್ತೆ (ಎಐ) ಸಾಫ್ಟ್​ವೇರ್ ಒಂದನ್ನು ಆಸ್ಟ್ರೇಲಿಯಾದ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ಚಿಕ್ಕ ಗಾತ್ರದ್ದಾಗಿದ್ದು, ನಿಮ್ಮ ಖಾಸಗಿತನಕ್ಕೆ ಧಕ್ಕೆ ತರದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಮೌನ ಆಲೋಚನೆಗಳನ್ನು ಡಿಕೋಡ್ ಮಾಡಿ ಅವನ್ನು ಪಠ್ಯವಾಗಿ ಪರಿವರ್ತಿಸುತ್ತದೆ. ಪಾರ್ಶ್ವವಾಯು ಸೇರಿದಂತೆ ಅನಾರೋಗ್ಯ ಅಥವಾ ಗಾಯದಿಂದಾಗಿ ಮಾತನಾಡಲು ಸಾಧ್ಯವಾಗದ ಜನರ ಸಂವಹನಕ್ಕೆ ಈ ತಂತ್ರಜ್ಞಾನ ಸಹಾಯ ಮಾಡಬಹುದು.

ಇದು ಬಯೋನಿಕ್ ಆರ್ಮ್ ಅಥವಾ ರೋಬೋಟ್ ಕಾರ್ಯಾಚರಣೆಯಂತಹ ಮಾನವ ಮತ್ತು ಯಂತ್ರಗಳ ನಡುವೆ ತಡೆರಹಿತ ಸಂವಹನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಸಿಡ್ನಿ ವಿಶ್ವವಿದ್ಯಾಲಯದ (ಯುಟಿಎಸ್) ಗ್ರ್ಯಾಫೀನ್ಎಕ್ಸ್-ಯುಟಿಎಸ್ ಮಾನವ-ಕೇಂದ್ರಿತ ಕೃತಕ ಬುದ್ಧಿಮತ್ತೆ ಕೇಂದ್ರದ ಸಂಶೋಧಕರು ಇಂಥ ಆವಿಷ್ಕಾರ ಜಗತ್ತಿನಲ್ಲೇ ಮೊದಲನೆಯದು ಎಂದು ಹೇಳಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದ್ದವರು ಎಲೆಕ್ಟ್ರೋಎನ್ಸೆಫಲೋಗ್ರಾಮ್ (ಇಇಜಿ) ಬಳಸಿ ತಮ್ಮ ನೆತ್ತಿಯ ಮೂಲಕ ಮೆದುಳಿನ ವಿದ್ಯುತ್ಕಾಂತೀಯ ಚಟುವಟಿಕೆಗಳನ್ನು ದಾಖಲಿಸುವ ಕ್ಯಾಪ್ ಧರಿಸಿದ್ದರು. ನಂತರ ಅವರು ತಮಗೆ ನೀಡಲಾದ ಪಠ್ಯವನ್ನು ಮೌನವಾಗಿ ಓದಿದರು.

ಇಇಜಿ ತರಂಗವನ್ನು ಮಾನವ ಮೆದುಳಿನಿಂದ ನಿರ್ದಿಷ್ಟ ಗುಣಲಕ್ಷಣಗಳು ಮತ್ತು ಮಾದರಿಗಳನ್ನು ಸೆರೆಹಿಡಿಯುವ ವಿಭಿನ್ನ ಘಟಕಗಳಾಗಿ ವಿಂಗಡಿಸಲಾಗಿದೆ. ಸಂಶೋಧಕರು ಅಭಿವೃದ್ಧಿಪಡಿಸಿದ ಡಿವೇವ್ ಎಂಬ ಎಐ ಮಾದರಿಯಿಂದ ಇದನ್ನು ಮಾಡಲಾಗುತ್ತದೆ. ದೊಡ್ಡ ಪ್ರಮಾಣದ ಇಇಜಿ ಡೇಟಾದಿಂದ ಕಲಿಯುವ ಮೂಲಕ ಡಿವೇವ್ ಇಇಜಿ ಸಂಕೇತಗಳನ್ನು ಪದಗಳು ಮತ್ತು ವಾಕ್ಯಗಳಾಗಿ ಭಾಷಾಂತರಿಸುತ್ತದೆ.

"ಈ ಸಂಶೋಧನೆಯು ಕಚ್ಚಾ ಇಇಜಿ ತರಂಗಗಳನ್ನು ನೇರವಾಗಿ ಭಾಷೆಗೆ ಭಾಷಾಂತರಿಸುವ ಬಹುದೊಡ್ಡ ಆವಿಷ್ಕಾರವಾಗಿದೆ." ಎಂದು ಗ್ರ್ಯಾಫೀನ್ಎಕ್ಸ್-ಯುಟಿಎಸ್ ಎಚ್ಎಐ ಕೇಂದ್ರದ ನಿರ್ದೇಶಕ ಪ್ರೊಫೆಸರ್ ಸಿ.ಟಿ. ಲಿನ್ ಹೇಳಿದರು.

ಮೆದುಳಿನ ಸಂಕೇತಗಳನ್ನು ಭಾಷೆಗೆ ಭಾಷಾಂತರಿಸುವ ಹಿಂದಿನ ತಂತ್ರಜ್ಞಾನದಲ್ಲಿ ಮೆದುಳಿನಲ್ಲಿ ಎಲೆಕ್ಟ್ರೋಡ್​ಗಳನ್ನು ಅಳವಡಿಸಬೇಕಿತ್ತು ಹಾಗೂ ಇದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಉದಾಹರಣೆಗೆ ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ಅಥವಾ ಎಂಆರ್​ಐ ಯಂತ್ರದಲ್ಲಿ ಸ್ಕ್ಯಾನಿಂಗ್. ಇದು ಕ್ಲಿಷ್ಟಕರವಾಗಿದ್ದು, ದುಬಾರಿಯೂ ಹೌದು. ಹೀಗಾಗಿ ಇದನ್ನು ದೈನಂದಿನ ಜೀವನದಲ್ಲಿ ಬಳಸುವುದು ಕಷ್ಟ.

ಈ ವಿಧಾನಗಳು ಕಣ್ಣಿನ ಟ್ರ್ಯಾಕಿಂಗ್ ನಂತಹ ಹೆಚ್ಚುವರಿ ಸಾಧನಗಳಿಲ್ಲದೆ ಮೆದುಳಿನ ಸಂಕೇತಗಳನ್ನು ಪದ ಮಟ್ಟದ ವಿಭಾಗಗಳಾಗಿ ಪರಿವರ್ತಿಸಲು ಹೆಣಗಾಡುತ್ತವೆ. ಇದು ಈ ವ್ಯವಸ್ಥೆಗಳ ಪ್ರಾಯೋಗಿಕ ಅನ್ವಯವನ್ನು ನಿರ್ಬಂಧಿಸುತ್ತದೆ.

ಆದರೆ ಹೊಸ ತಂತ್ರಜ್ಞಾನವನ್ನು ಕಣ್ಣಿನ ಟ್ರ್ಯಾಕಿಂಗ್ ನೊಂದಿಗೆ ಅಥವಾ ಇಲ್ಲದೆ ಬಳಸಲು ಸಾಧ್ಯ. ಹೊಸ ಸಂಶೋಧನೆಯನ್ನು 29 ಜನರನ್ನು ಪರೀಕ್ಷೆಗೊಳಪಡಿಸಿ ನಡೆಸಲಾಯಿತು. ಇದರರ್ಥ ಇದು ಒಂದು ಅಥವಾ ಇಬ್ಬರು ವ್ಯಕ್ತಿಗಳ ಮೇಲೆ ಮಾತ್ರ ಪರೀಕ್ಷಿಸಲಾದ ಹಿಂದಿನ ಡೀಕೋಡಿಂಗ್ ತಂತ್ರಜ್ಞಾನಕ್ಕಿಂತ ಹೆಚ್ಚು ದೃಢವಾದ ಮತ್ತು ಹೊಂದಿಕೊಳ್ಳುವ ರೀತಿಯ ತಂತ್ರಜ್ಞಾನವಾಗುವ ಸಾಧ್ಯತೆಯಿದೆ. ಏಕೆಂದರೆ ಇಇಜಿ ತರಂಗಗಳು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಭಿನ್ನವಾಗಿರುತ್ತವೆ.

ಇದನ್ನೂ ಓದಿ : ಪ್ರತಿ 10ರಲ್ಲಿ 7 ಹದಿಹರೆಯದವರು ನಿತ್ಯ ಯೂಟ್ಯೂಬ್ ನೋಡ್ತಾರೆ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.