ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಓಟಿಟಿ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್, ಜನಪ್ರಿಯ ಮಹಿಳಾ-ಮೊದಲ ಡೇಟಿಂಗ್ ಅಪ್ಲಿಕೇಶನ್ ಬಂಬಲ್ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ. ಈ ಮೂಲಕ ಜನಪ್ರಿಯ ಟಿವಿ ಕಾರ್ಯಕ್ರಮಗಳೊಂದಿಗೆ ಸಂಪರ್ಕ ಸಾಧಿಸಲು ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿವೆ. ಜನಪ್ರಿಯ ನೆಟ್‌ಫ್ಲಿಕ್ಸ್ ಪ್ರದರ್ಶನದ ಕುರಿತು ಬಳಕೆದಾರರಿಗೆ ಪ್ರಶ್ನೆಯನ್ನು ಕೇಳುವ 'ನೆಟ್‌ಫ್ಲಿಕ್ಸ್ ನೈಟ್ಸ್ ಇನ್' ತನ್ನ ಸಾಪ್ತಾಹಿಕ ಇನ್-ಆಪ್ ಪ್ರಶ್ನೆ ಆಟ ಬಿಡುಗಡೆ ಮಾಡಿದೆ, ಬಂಬಲ್ ನೆಟ್‌ಫ್ಲಿಕ್ಸ್ ಮತ್ತು ಚಿಲ್ ಎಂಬ ಹೊಸ ರಸಪ್ರಶ್ನೆ ಆಟದಲ್ಲಿ, ಪ್ರತಿ ಪ್ರಶ್ನೆಗೆ ಯಾರು ಸರಿಯಾಗಿ ಉತ್ತರಿಸಬಹುದು ಎಂಬುದನ್ನು ನೋಡಲು ಬಳಕೆದಾರರು ಪರಸ್ಪರ ಸ್ಪರ್ಧೆ ನಡೆಸಬಹುದಾಗಿದೆ.
ಇತ್ತೀಚಿನ ಬಂಬಲ್ ಆ್ಯಪ್ನ ಸಮೀಕ್ಷೆಯಲ್ಲಿ ಸುಮಾರು 78 ಪ್ರತಿಶತ ಬಳಕೆದಾರರು ಟಿವಿ ಮತ್ತು ಚಲನಚಿತ್ರಗಳಲ್ಲಿ ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವವರು, ಈ ಆಟಗಳಲ್ಲಿ ಚರ್ಚಿಸುವುದು ಸುಲಭವಾಗಿರುತ್ತದೆ ಎಂದು ಹೇಳಿದ್ದರು. ಇದಲ್ಲದೆ, ಸಮೀಕ್ಷೆಯಲ್ಲಿ ಭಾಗವಹಿಸುವವರಲ್ಲಿ 72 ಪ್ರತಿಶತದಷ್ಟು ಜನರು ತಾವು ಹೊರಗೆ ಹೋದಾಗ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರು. ನೆಟ್‌ಫ್ಲಿಕ್ಸ್ ನೈಟ್ಸ್ ಇನ್ ಜನವರಿ 30 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 13 ರಂದು ಕೊನೆಗೊಳ್ಳಲಿದೆ.
ಈ ರಸಪ್ರಶ್ನೆ ಆಟವು ಯುಎಸ್, ಕೆನಡಾ ಮತ್ತು ಯುಕೆ ಯಲ್ಲಿನ ಬಂಬಲ್ ಬಳಕೆದಾರರಿಗೆ ಲಭ್ಯವಿರುತ್ತದೆ. ಎಮಿಲಿ ಇನ್ ಪ್ಯಾರಿಸ್, ಸ್ಟ್ರೇಂಜರ್ ಥಿಂಗ್ಸ್, ಸ್ಕ್ವಿಡ್ ಗೇಮ್, ಸೈಲಿಂಗ್ ಸನ್‌ಸೆಟ್, ಲವ್ ಈಸ್ ಬ್ಲೈಂಡ್ ಮತ್ತು 'ಔಟರ್ ಬ್ಯಾಂಕ್ಸ್' ಇವು ಪ್ರತಿ ಸೋಮವಾರ ರಸಪ್ರಶ್ನೆ ಪ್ರಶ್ನೆಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಪ್ರದರ್ಶನಗಳಾಗಿವೆ. ಬಳಕೆದಾರರು ಈ ಪ್ರದರ್ಶನಗಳ ಬಗ್ಗೆ ಜ್ಞಾನವಿದ್ದರೇ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭ.
ಪ್ರತಿ ಪ್ರಶ್ನೆಗೆ ಉತ್ತರಿಸಿದ ನಂತರ, ಸರಿಯಾದ ಉತ್ತರವನ್ನು ಬಹಿರಂಗಪಡಿಸಲಾಗುವುದಿಲ್ಲ. ನಾವು ಎನ್ನಾದರು ತಿಳಿದುಕೊಳ್ಳುವಾಗ ಅ ಬಗ್ಗೆ ಹುಡುಕಲು ಪ್ರಯತ್ನಿಸುವುದು ಮಾನವ ಸ್ವಭಾವವಾಗಿದೆ. ಇದು ನಿಮ್ಮನ್ನು ಕೂತುಹಲನನ್ನಾಗಿ ಮಾಡುತ್ತದೆ ಮತ್ತು ಈ ಕುರಿತು ತಿಳಿದುಕೊಳಲು ಇತರರೊಂದಿಗೆ ಸಂಭಾಷಣೆಗಳಿಗೆ ಕಾರಣವಾಗುತ್ತದೆ ಎಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಕೆಟಿಂಗ್ ಪಾಲುದಾರಿಕೆಯ ಉಪಾಧ್ಯಕ್ಷ ಮ್ಯಾಗ್ನೋ ಹೆರಾನ್ ಹೇಳಿದರು.
ಓಟಿಟಿಯಲ್ಲಿ ಬರುತ್ತಿರು ಟಿವಿ ಶೋ, ಸಿನಿಮಾಗಳು: ಪ್ರಸುತ್ತ ಜನರು ಚಿತ್ರಮಂದಿರದ ಜೊತೆ ಜೊತೆಗೆ ಓಟಿಟಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮಿಷ್ಟದ ಮನರಂಜನೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ಓಟಿಟಿ ಪ್ಲಾಟ್ಫಾರ್ಮ್ಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಝೀ5, ಹಾಟ್‌ಸ್ಟಾರ್, ಸೋನಿ ಲಿವ್ ಮುಂತಾದವುಗಳಲ್ಲಿ ಈ ವಾರ ಬರುತ್ತಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ.
'ಬ್ಲ್ಯಾಕ್ ಸನ್ಶೈನ್ ಬೇಬಿ' ಇದು ಸಾಕ್ಷ್ಯಚಿತ್ರವಾಗಿದ್ದು, ಹಿಂದಿ ಭಾಷೆಯಲ್ಲಿದೆ. ಜನವರಿ 24 ಅಂದರೆ ನಾಳೆಯಿಂದ ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. 'ಅಗೈನ್ಸ್ಟ್ ದಿ ರೋಪ್ಸ್' ಟಿವಿ ಶೋ ಆಗಿದ್ದು, ಸ್ಪಾನಿಶ್ ಭಾಷೆಯಲ್ಲಿದೆ. ಜನವರಿ 25 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಾಗಲಿದೆ. 'ಅಯಾಲಿ' ಟಿವಿ ಶೋ ಝೀ 5 ನಲ್ಲಿ ನೋಡಲು ಜನವರಿ 26 ರಿಂದ ಸಿಗಲಿದೆ. ಇದು ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲೂ ಇರಲಿದೆ.
'ಡಾನಿಯಲ್ ಸ್ಪೆಲ್ಬೌಂಡ್ ಸೀಸನ್ 2' ಟಿವಿ ಶೋ ಇಂಗ್ಲೀಷ್ ಭಾಷೆಯಲ್ಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 26 ರಿಂದ ನೋಡಬಹುದಾಗಿದೆ. 'ಡಿಯರ್ ಇಷ್ಕ್' ಟಿವಿ ಶೋ ಆಗಿದ್ದು ಹಿಂದಿ ಭಾಷೆಯಲ್ಲಿದೆ. ಜನವರಿ 26 ರಿಂದ ಹಾಟ್‌ಸ್ಟಾರ್ ನಲ್ಲಿ ಸಿಗಲಿದೆ. ಹಿಂದಿ ಭಾಷೆಯ ಟಿವಿ ಶೋ 'ಜಾನ್ಬಾಜ್ ಹಿಂದೂಸ್ತಾನ್ ಕೆ' ಝೀ 5 ನಲ್ಲಿ ಜನವರಿ 26 ರಿಂದ ನೋಡಬಹುದು.
ಇದನ್ನೂ ಓದಿ:BharOS.. ಮೊದಲ ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್: ಏನಿದರ ವಿಶೇಷತೆ?