ETV Bharat / science-and-technology

ಬೆಜೋಸ್​​ರ ಬ್ಲೂ ಒರಿಜಿನ್ ರಾಕೆಟ್​ನಲ್ಲಿ​ 'ಮಂಗಳ ಸೈನ್ಸ್​ ಮಿಷನ್'​​ ಉಡಾವಣೆಗೆ ನಾಸಾ ನಿರ್ಧಾರ

author img

By

Published : Feb 10, 2023, 3:43 PM IST

ಮಂಗಳನ ಅಧ್ಯಯನಕ್ಕೆ ಬೆಜೋಸ್​ರ ನ್ಯೂ ಗ್ಲೆನ್ ಬಾಹ್ಯಾಕಾಶ ಉಡಾವಣಾ ವಾಹಕ ಬಳಸಲು ನಾಸಾ ತೀರ್ಮಾನಿಸಿದೆ.

ಬೆಜೋಸ್​​ರ ಬ್ಲೂ ಒರಿಜಿನ್ ರಾಕೆಟ್​ನಲ್ಲಿ​ ಮಂಗಳ ಸೈನ್ಸ್​ ಮಿಷನ್​​ ಉಡಾವಣೆಗೆ ಮುಂದಾದ ನಾಸಾ
nasa-to-launch-mars-science-mission-on-bezos-run-blue-origins-rocket

ವಾಷಿಂಗ್ಟನ್​: ಜೆಫ್ ಬೆಜೋಸ್ ನಡೆಸುತ್ತಿರುವ ಬ್ಲೂ ಒರಿಜಿನ್‌ನ ನ್ಯೂ ಗ್ಲೆನ್ ಬಾಹ್ಯಾಕಾಶ ಉಡಾವಣಾ ವಾಹಕದ ಮೂಲಕ ಮಂಗಳ ಗ್ರಹಕ್ಕೆ ಸೈನ್ಸ್​ ಮಿಷನ್ ಅನ್ನು ಉಡಾವಣೆ ಮಾಡುವುದಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಘೋಷಿಸಿದೆ. ನಾಸಾ ಮಾರ್ಸ್​ ಸೈನ್ಸ್​ ಮಿಷನ್​ ಲಾಂಚ್​ ಅನ್ನು ಬ್ಲೂ ಒರಿಜಿನ್​ನ ನ್ಯೂ ಗ್ಲೆನ್​ ಒಪ್ಪಂದ ಭಾಗವಾಗಿ ಎಸ್ಕೇಪ್ ಮತ್ತು ಪ್ಲಾಸ್ಮಾ ಆಕ್ಸಿಲರೇಶನ್ ಮತ್ತು ಡೈನಾಮಿಕ್ಸ್ ಎಕ್ಸ್‌ಪ್ಲೋರರ್ಸ್-ಎಸ್ಕಾಪಡೆ (ESCAPADE) ನೀಡಿದೆ ಎಂದ ತಿಳಿಸಲಾಗಿದೆ.

ಎಸ್ಕಾಪಟೆ ಪ್ಲಾನೆಟರಿ ಎಕ್ಸ್‌ಪ್ಲೋರೇಶನ್ ಕಾರ್ಯಕ್ರಮಕ್ಕಾಗಿ ನಾಸಾದ ಸ್ಮಾಲ್ ಇನ್ನೋವೇಟಿವ್ ಮಿಷನ್ಸ್‌ನ ಭಾಗವಾಗಿದೆ. ಇದು ಮಂಗಳ ಗ್ರಹದ ಮ್ಯಾಗ್ನೆಟೋಸ್ಪಿಯರ್ ಅನ್ನು ಅಧ್ಯಯನ ಮಾಡಲು ಎರಡು ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯಾಗಿದೆ. ಎಸ್ಕಾಪಡೆ ಒಂದು ಅವಳಿ ಬಾಹ್ಯಾಕಾಶ ನೌಕೆ ವರ್ಗ ಡಿ ಮಿಷನ್ ಆಗಿದ್ದು, ಅದು ಮಂಗಳದ ವಿಶಿಷ್ಟ ಹೈಬ್ರಿಡ್ ಮ್ಯಾಗ್ನೆಟೋಸ್ಪಿಯರ್ ಮೂಲಕ ಸೌರ ಗಾಳಿ ಶಕ್ತಿ ವರ್ಗಾವಣೆಯನ್ನು ಅಧ್ಯಯನ ಮಾಡುತ್ತದೆ.

ಮಂಗಳನ ಅಧ್ಯಯನಕ್ಕೆ ಒಪ್ಪಂದ: ನಾಸಾ ಮಂಗಳ ಪರಿಶೋಧನಾ ಕಾರ್ಯಾಚರಣೆಗಳನ್ನು ಈ ಎಸ್ಕಾಪಡೆ ಹೊಂದಿದೆ. ಈ ಯೋಜನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ನಾಸಾದ ಉಡಾವಣಾ ಸೇವೆಗಳ ಕಾರ್ಯಕ್ರಮವು ಮಂಗಳದ ಕಾಂತಗೋಳವನ್ನು ಅಧ್ಯಯನ ಮಾಡುವ ಉಪಕರಣಗಳನ್ನು ಪ್ರಾರಂಭಿಸಲು ನ್ಯೂ ಗ್ಲೆನ್ ಅನ್ನು ಆಯ್ಕೆ ಮಾಡಿದೆ. ಈ ಯೋಜನೆಗೆ ಗಗನಯಾತ್ರಿ ಜಾನ್ ಗ್ಲೆನ್ ಅವರ ಹೆಸರನ್ನು ಇಡಲಾಗಿದೆ. ನ್ಯೂ ಗ್ಲೆನ್ ವಾಣಿಜ್ಯ ಉಪಗ್ರಹಗಳು ಮತ್ತು ರಾಷ್ಟ್ರೀಯ ಭದ್ರತಾ ಪೇಲೋಡ್‌ಗಳನ್ನು ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಭಾಗಶಃ ಮರುಬಳಕೆ ಮಾಡಬಹುದಾದ ಹೆವಿ-ಲಿಫ್ಟ್ ರಾಕೆಟ್ ಆಗಿದೆ.

ವಿಎಡಿಆರ್​ ಜೊತೆ ಒಪ್ಪಂದ: 2022 ಜನವರಿ 26 ರಂದು ನಾಸಾ ಐದು ವರ್ಷಗಳ ಅವಧಿಯ ಕಾರ್ಯಕ್ಷಮತೆಯೊಂದಿಗೆ ವಿಎಡಿಆರ್​​ ಉಡಾವಣಾ ಸೇವೆಗಳ ಅನಿರ್ದಿಷ್ಟ ವಿತರಣಾ ಅನಿರ್ದಿಷ್ಟ ಪ್ರಮಾಣ (IDIQ) ಒಪ್ಪಂದ ಮಾಡಿದೆ. ವೆಜೋಸ್​​ ಏರೋಸ್ಪೇಸ್ ಕಂಪನಿಯು ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಎಲ್ಲಾ ನಾಗರಿಕ, ವಾಣಿಜ್ಯ ಮತ್ತು ರಕ್ಷಣಾ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳು ಮತ್ತು ಬಾಹ್ಯಾಕಾಶ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭವಿಷ್ಯವನ್ನು ರಚಿಸಲು ಕೆಲಸ ಮಾಡುತ್ತಿದೆ. ವಿಎಡಿಆರ್​ ಮೂಲಭೂತವಾಗಿ ಖಾಸಗಿ ಬಾಹ್ಯಾಕಾಶ ಉಡಾವಣಾ ವಾಹನಗಳ ಖಾಸಗಿ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಕಡಿಮೆ-ವೆಚ್ಚದ ನಾಸಾ ವಿಜ್ಞಾನ ಕಾರ್ಯಾಚರಣೆಗಳನ್ನು ಸಾಬೀತುಪಡಿಸದ ದಾಖಲೆ ಮತ್ತು ಹೆಚ್ಚಿನ ವೈಫಲ್ಯದ ಹೊಸ ರಾಕೆಟ್‌ಗಳಿಗೆ ನಿಯೋಜಿಸುತ್ತದೆ.

ಏನಿದು ಬ್ಲೂ ಒರಿಜಿನ್‌?: ಗಗನಯಾತ್ರಿಗಳನ್ನು ನ್ಯೂ ಶೆಪರ್ಡ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿಸುವುದು, ಮರುಬಳಕೆ ಮಾಡಬಹುದಾದ ದ್ರವ ರಾಕೆಟ್ ಎಂಜಿನ್‌ಗಳನ್ನು ಉತ್ಪಾದಿಸುವುದು, ನ್ಯೂ ಗ್ಲೆನ್‌ನೊಂದಿಗೆ ಕಕ್ಷೆಯ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸುವುದು, ಮುಂದಿನ ಪೀಳಿಗೆಯ ಬಾಹ್ಯಾಕಾಶ ಆವಾಸಸ್ಥಾನಗಳನ್ನು ನಿರ್ಮಿಸುವುದು ಮತ್ತು ಚಂದ್ರನ ಮೇಲ್ಮೈಗೆ ಹಿಂತಿರುಗುವುದು ಸೇರಿವೆ. ವಿಎಡಿಆರ್​​ ಕಾರ್ಯಕ್ರಮದ ಅಡಿಯಲ್ಲಿ ಉಡಾವಣೆಗೆ ಗರಿಷ್ಠ ಸಂಭವನೀಯ ಬೆಲೆ 300 ಮಿಲಿಯನ್ ಡಾಲರ್​ ಎಂದು ನಾಸಾ ಹೇಳಿದೆ. ಬಾಹ್ಯಾಕಾಶ ಸಂಸ್ಥೆಯು ಎಸ್ಕಾಪಡೆ ಒಪ್ಪಂದದ ಮೌಲ್ಯವನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಬ್ಲೂ ಒರಿಜಿನ್ ಕೂಡ ಹಣಕಾಸಿನ ವಿವರ ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಇಸ್ರೋದಿಂದ ಸಣ್ಣ ಉಪಗ್ರಹ ಉಡಾವಣಾ ವಾಹಕ ಎಸ್​ಎಸ್​ಎಲ್​ವಿ-ಡಿ2 ಯಶಸ್ವಿ ಉಡಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.