ಕೇಪ್ ಕ್ಯಾನವೆರಲ್: ಫ್ಲೋರಿಡಾ ಕರಾವಳಿಗೆ ನಕೋಲ್ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯಿದ್ದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಚಂದ್ರನ ಅಂಗಳಕ್ಕೆ ರಾಕೆಟ್ ಉಡಾವಣೆಯನ್ನು ಮತ್ತೆ ಮುಂದೂಡಿದೆ. ಇಂಧನ ಸೋರಿಕೆಯಿಂದಾಗಿ ಅಗಸ್ಟ್‌ನಲ್ಲಿ ನಾಸಾಗೆ ಎರಡು ಬಾರಿ ಹಿನ್ನಡೆಯಾಗಿತ್ತು. ಆದರೆ ಇದೀಗ ಚಂಡಮಾರುತ ಭೀತಿಯಿಂದಾಗಿ ಉಡಾವಣೆಯು ಮುಂದಿನ ಬುಧವಾರದವರೆಗೆ ವಿಳಂಬಗೊಳ್ಳಲಿದೆ. ಆದರೂ ಪರಿಸ್ಥಿತಿಗೆ ಅನುಗುಣವಾಗಿ, ಭಾರಿ ಗಾಳಿ-ಮಳೆಯನ್ನು ತಡೆದುಕೊಳ್ಳುವಂತೆ ರಾಕೆಟ್ ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ: ನಾಸಾದ ಚಂದ್ರನ ರಾಕೆಟ್ಗೆ ಮತ್ತೊಂದು ವಿಘ್ನ: ನವೆಂಬರ್ವರೆಗೆ ಉಡಾವಣೆ ಅಸಂಭವ