ವಾಷಿಂಗ್ಟನ್: ಚಂದ್ರನ ಮೇಲ್ಮೈನಲ್ಲಿರುವ ತಗ್ಗು ಪ್ರದೇಶವಾದ ಮೇರ್ ಕ್ರಿಸಿಯಂನಲ್ಲಿ ನೀರಿನ ಅಂಶವಿರುವ ಕುರಿತು ಸಂಶೋಧನೆ ನಡೆಸಲು ಹಾಗೂ ಇದಕ್ಕೆ ಸಂಪನ್ಮೂಲಗಳನ್ನು ಒದಗಿಸುವ ದೃಷ್ಟಿಯಿಂದ ಫೈರ್‌ಫ್ಲೈ ಏರೋಸ್ಪೇಸ್ ಸಂಸ್ಥೆಗೆ ನಾಸಾ $ 93.3 ಮಿಲಿಯನ್ ಹಣವನ್ನು ನೀಡಿದೆ.
ಈ ಮೂಲಕ ನಾಸಾ ಚಂದ್ರನ ಮೇಲೆ ಮಾನವ ಕಾರ್ಯಾಚರಣೆಗಳಿಗೆ ಸಿದ್ಧವಾಗಲು ಸಹಾಯ ಮಾಡುತ್ತಿದೆ. ಈ ಒಂದು ಮೊತ್ತವು ನಾಸಾದ ಕಮರ್ಷಿಯಲ್ ಲುನಾರ್ ಪೇಲೋಡ್ ಸೇವೆಗಳ (ಸಿಎಲ್ಪಿಎಸ್) ಉಪಕ್ರಮದ ಒಂದು ಭಾಗವಾಗಿದೆ. ಚಂದ್ರನ ಮೇಲ್ಮೈಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪೇಲೋಡ್‌ಗಳನ್ನು ತ್ವರಿತವಾಗಿ ಇಳಿಸಲು ವಾಣಿಜ್ಯ ಪಾಲುದಾರರ ಸೇವೆಯನ್ನು ಸಂಸ್ಥೆ ಭದ್ರಪಡಿಸುತ್ತಿದೆ. ಈ ಉಪಕ್ರಮವು ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ.
ಓದಿ:ಕೇರಳದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದ ಬಿಡಿಜೆಎಸ್.. ಯುಡಿಎಫ್ ಸೇರಿದ ಬಿಜೆಎಸ್
ಪೇಲೋಡ್ ಏಕೀಕರಣ, ಭೂಮಿಯಿಂದ ಉಡಾವಣೆ ಮಾಡುವುದು, ಚಂದ್ರನ ಮೇಲೆ ಇಳಿಸುವುದು ಮತ್ತು ಮಿಷನ್ ಕಾರ್ಯಾಚರಣೆಗಳು ಸೇರಿದಂತೆ ಎಲ್ಲ ಕಾರ್ಯವನ್ನು ಫೈರ್ ಫ್ಲೈ ಏರೋಸ್ಪೇಸ್ ನೋಡಿಕೊಳ್ಳಲಿದ್ದು, ಎಲ್ಲದಕ್ಕೂ ಇದೇ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ.
ಫೈರ್‌ಫ್ಲೈ ಏರೋಸ್ಪೇಸ್‌ಗೆ ನೀಡಲಾಗುತ್ತಿರುವ ಮೊದಲ ಧನಸಹಾಯ ಇದಾಗಿದೆ. ಇದು ಟೆಕ್ಸಾಸ್‌ನ ಸೀಡರ್ ಪಾರ್ಕ್ ಸೌಲಭ್ಯದಲ್ಲಿ ಕಂಪನಿಯು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಬ್ಲೂ ಘೋಸ್ಟ್ ಲ್ಯಾಂಡರ್ ಬಳಸಿ ಚಂದ್ರನಿಗೆ ಸೇವೆಯನ್ನು ಒದಗಿಸುತ್ತದೆ.