ಸಿಂಗಾಪುರ: ಶೇ.99.9ರಷ್ಟು ವೈರಸ್ ಅನ್ನು ತಡೆಹಿಡಿಯುವ ‘ನ್ಯಾನೋಟೆಕ್ ಮಾಸ್ಕ್’ ಅನ್ನು ನಾನ್ಯಂಗ್ ಟೆಕ್ನಾಲಜಿ ಯೂನಿವರ್ಸಿಟಿ (ಎನ್ಟಿಯು) ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಈ ಮಾಸ್ಕ್ ಕೇವಲ 45 ಸೆಕೆಂಡ್ಗಳಲ್ಲಿ ವೈರಸ್ ಅನ್ನು ಕೊಲ್ಲಲಿದ್ದು, ಕೋವಿಡ್ಗಾಗಿ ಈಗ ಬಳಕೆಯಲ್ಲಿರುವ ಎನ್-95 ಮಾಸ್ಕ್ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಮಾಸ್ಕ್ನ ಆಂಟಿ ಮೈಕ್ರೋಬಿಯಲ್ ಲೇಯರ್ ಕನಿಷ್ಠ ಆರು ದಿನಗಳವರೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಮಾಸ್ಕ್ಗಳು ಸುಮಾರು 10 ಬಾರಿ ತೊಳೆದು ಮತ್ತೆ ಮರುಬಳಕೆ ಮಾಡಬಹುದು. ಇದು ಒಂದು ದಿನ ಬಳಸಿ ಎಸೆಯುವ ಮಾಸ್ಕ್ಗಿಂತಲೂ ಹೆಚ್ಚು ಪರಿಣಾಮಕಾರಿ ಹಾಗೂ ಸಮರ್ಥನೀಯವಾಗಿರುತ್ತವೆ. ಇದಲ್ಲದೇ ಎನ್-95 ಮಾಸ್ಕ್ನ ಫಿಲ್ಟರ್ಗಳಿಗಿಂತಲೂ ನ್ಯಾನೋಟೆಕ್ ಮಾಸ್ಕ್ ಫಿಲ್ಟರ್ಗಳು ಹೆಚ್ಚು ಗಾಳಿಯನ್ನು ಒಳ ಬರುವಂತೆ ವಿನ್ಯಾಸಮಾಡಲಾಗಿದೆ.
ಇದರಿಂದ ಮಾಸ್ಕ್ ಧರಿಸಿದ ವ್ಯಕ್ತಿ ಆರಾಮವಾಗಿ ಉಸಿರಾಟ ಕ್ರಿಯೆ ನಡೆಸಬಹುದಾಗಿದೆ. ನ್ಯಾನೊಟೆಕ್ ಮಾಸ್ಕ್ ಎರಡು ಪ್ರಮುಖ ಘಟಕಗಳಿಂದ ತಯಾರಿಸಲಾಗುತ್ತದೆ. ತಾಮ್ರದ ನ್ಯಾನೊಪರ್ಟಿಕಲ್ಸ್‌ನಿಂದ ತಯಾರಿಸಿದ ಆಂಟಿಮೈಕ್ರೊಬಿಯಲ್ ಲೇಪನ ಮತ್ತು ನೇಯ್ದ ಬಟ್ಟೆಯ ವಿನ್ಯಾಸದಿಂದ ಈ ಮಾಸ್ಕ್ ರಚನೆಗೊಂಡಿದೆ.
ಈ ಮಾಸ್ಕ್ಗಳು 0.3 ಮೈಕ್ರಾನ್ಗಿಂತಲೂ ಚಿಕ್ಕದಾದ ವೈರಸ್ನಿಂದಲೂ ರಕ್ಷಣೆ ನೀಡಲಿದೆ. ಲ್ಯಾಬ್ನಲ್ಲಿ ಪರೀಕ್ಷಿಸಿದ್ದಂತೆ ಸರಾಸರಿ 10 ಮೈಕ್ರಾನ್ಗಳನ್ನು ಅಂದರೆ ಕೂದಲಿನ ವ್ಯಾಸದ ಸುಮಾರು 0.3 ರಷ್ಟು ಗಾತ್ರದ ವೈರಸ್ ತಡೆಯುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಹೆಚ್ಚಿನ ದರದ ಲಸಿಕೆಗಳು, ಗುಣಮಟ್ಟವಿಲ್ಲದ ಕೋವಿಡ್ ಉತ್ಪನ್ನಗಳ ಬಗ್ಗೆ WHO ಎಚ್ಚರಿಕೆ