ETV Bharat / science-and-technology

ಹಿಮಪದರುಗಳ ಚಲನೆಗೂ ಸಮುದ್ರಮಟ್ಟ ಏರುವಿಕೆಗೂ ಸಂಬಂಧವಿದೆ: ಸಂಶೋಧನೆಯಲ್ಲಿ ಬಹಿರಂಗ

ಭೂಮಿಯ ತಾಪಮಾನ ಹೆಚ್ಚಿದಂತೆ ಹಿಮಗಡ್ಡೆಗಳು ಕರಗುವ ವೇಗ ಹೆಚ್ಚಾಗುತ್ತಿದೆ. ಹೀಗೆ ಹಿಮಗಡ್ಡೆಗಳು ಕರಗಿದಂತೆ ಸಮುದ್ರದ ಮಟ್ಟಗಳು ಏರಿಕೆ ಆಗುತ್ತಿವೆ. ಈ ಮಧ್ಯೆ ಹಿಮದ ಪದರುಗಳ ಚಲನೆಗೂ ಮತ್ತು ಸಮುದ್ರ ಮಟ್ಟ ಏರುವಿಕೆಗೂ ಇರುವ ಸಂಬಂಧವನ್ನು ತೋರಿಸುವ ಹೊಸ ಮಾಹಿತಿಗಳನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

Research shows new knowledge about ice sheet movement
ಹಿಮದ ಪದರುಗಳ ಚಲನೆಗೂ ಸಮುದ್ರ ಮಟ್ಟ ಏರುವಿಕೆಗೂ ಇದೆ ಸಂಬಂಧ:
author img

By

Published : Feb 23, 2023, 7:31 PM IST

ಕೋಪನ್ ಹೇಗನ್ (ಡೆನ್ಮಾರ್ಕ್) : ಗ್ರೀನ್‌ಲ್ಯಾಂಡ್ ಪ್ರದೇಶದಲ್ಲಿನ ಮಂಜುಗಡ್ಡೆಯ ಎಷ್ಟು ಅಗಾಧವಾಗಿದೆ ಎಂದರೆ ಇದು ಉತ್ತರ ಗೋಳಾರ್ಧದಲ್ಲಿರುವ ಎಲ್ಲ ಶುದ್ಧ ನೀರಿನ ಅರ್ಧದಷ್ಟು ಭಾಗವನ್ನು ಹೊಂದಿದೆ. ಆದರೆ, ಭೂಮಿಯ ಮೇಲೆ ಏರುತ್ತಿರುವ ತಾಪಮಾನದಿಂದ ಅದು ಕರಗಲಾರಂಭಿಸುತ್ತಿದೆ. ಇದರಿಂದ ಪ್ರಪಂಚದ ಸಾಗರಗಳ ಮಟ್ಟ ಏರುತ್ತಿದೆ. ಹಾಗಾಗಿ ಮಂಜುಗಡ್ಡೆಯ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲನೆ ಮಾಡುವುದು ಈಗ ಬಹಳ ಅಗತ್ಯವಾಗಿದೆ.

ಉಪಗ್ರಹ ಮಾಪನಗಳನ್ನು ವ್ಯಾಪಕವಾದ ಬಳಸಿಕೊಂಡು, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ಭೂವೈಜ್ಞಾನಿಕ ಸಮೀಕ್ಷೆ (GEUS) ಮತ್ತು ಕೋಪನ್‌ಹೇಗನ್ ವಿಶ್ವವಿದ್ಯಾನಿಲಯದ ನೀಲ್ಸ್ ಬೋರ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು, ಹಿಮದ ಪದರುಗಳ ಚಲನೆಗಳು ಮಂಜುಗಡ್ಡೆಯ ಕೆಳಗಿರುವ ಕರಗುವ ನೀರಿನ ಹರಿವಿನೊಂದಿಗೆ ಹೇಗೆ ನಿಕಟವಾಗಿ ಸಂಬಂಧಿಸಿವೆ ಎಂಬುದನ್ನು ತೋರಿಸುವ ಅಧ್ಯಯನವೊಂದನ್ನು ಕೈಗೊಂಡಿದ್ದಾರೆ. ಇದು ಹಿಮದ ಪದರುಗಳ ಚಲನೆಗೂ ಮತ್ತು ಸಮುದ್ರ ಮಟ್ಟ ಏರುವಿಕೆಗೂ ಇರುವ ಸಂಬಂಧವನ್ನು ತೋರಿಸುತ್ತದೆ.

ಕೃತಕ ಬುದ್ಧಿಮತ್ತೆ ಬಳಸಿ ವಿಶ್ಲೇಷಣೆ: ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಂಶೋಧಕರು ಮಂಜುಗಡ್ಡೆಯ ಚಲನೆಗಳನ್ನು ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಗಳನ್ನು ಈಗ ಅವುಗಳ ಚಲನೆಯ ಮಾದರಿಗಳ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು. ಅಧ್ಯಯನದ ಸಂಶೋಧಕರ ಪ್ರಕಾರ, ಒಂದು ಪ್ರದೇಶದಲ್ಲಿನ ಮಂಜುಗಡ್ಡೆಯ ಕರಗುವ ವೇಗವು ಕಾಲಾನಂತರದಲ್ಲಿ ಏಕೆ ಬದಲಾಗಬಹುದು ಎಂಬುದರ ಕುರಿತು ನಮಗೆ ಕಡಿಮೆ ಮಾಹಿತಿ ಇದೆ. ಆದರೆ, ಈ ಮಾಹಿತಿಯು ಸಮುದ್ರ ಮಟ್ಟ ಏರಿಕೆ ಹಾಗೂ ಇತರ ವಿಷಯಗಳ ಜೊತೆಗೆ ಹೆಚ್ಚು ನಿಖರವಾದ ಹವಾಮಾನ ಮಾದರಿಗಳನ್ನು ತಯಾರಿಸಲು ಅತ್ಯಂತ ಅಗತ್ಯ ಮಾಹಿತಿಯಾಗಿದೆ.

ಉಪಗ್ರಹಗಳ ದತ್ತಾಂಶದಿಂದ ಏರಿಳಿತ ಪತ್ತೆ: ದೊಡ್ಡ ಪ್ರಮಾಣದ ಉಪಗ್ರಹ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆಯ ಸಹಾಯದಿಂದ, ನಾವು ಮಂಜುಗಡ್ಡೆಯ ಅಂಚಿನ ದೊಡ್ಡ ಭಾಗಗಳಲ್ಲಿ ಆಯಾ ಕಾಲದಲ್ಲಿ ಸಂಭವಿಸುವ ಏರಿಳಿತಗಳನ್ನು ಗುರುತಿಸಬಹುದು ಮತ್ತು ನಕ್ಷೆ ಮಾಡಬಹುದು. ಕೇವಲ ಒಂದು ವರ್ಷವಲ್ಲ, ಹಲವಾರು ವರ್ಷಗಳ ಏರಿಳಿತಗಳ ವಿಷಯದಲ್ಲಿ ಇದನ್ನು ಗುರುತಿಸಬಹುದು. ಹೀಗೆ, ನಮ್ಮ ಅಧ್ಯಯನವು ಮಂಜುಗಡ್ಡೆಯ ಕೆಳಗಿರುವ ಪ್ರಕ್ರಿಯೆಗಳ ಪರೋಕ್ಷ ನೋಟವನ್ನು ಮತ್ತು ಕರಗುವ ನೀರಿನೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂಪರ್ಕವನ್ನು ಒದಗಿಸುತ್ತದೆ.

ಈ ಸಂಪರ್ಕವು ಭವಿಷ್ಯದ ತಾಪಮಾನ ಹೆಚ್ಚಳದ ಬಗ್ಗೆ ಅರ್ಥಮಾಡಿಕೊಳ್ಳಲು ಬಹಳ ಮುಖ್ಯವಾಗಿದೆ. ಇದರಲ್ಲಿ ಕರಗುವ ನೀರಿನ ಪ್ರಮಾಣವು ಹೆಚ್ಚಾಗುತ್ತದೆ ಎನ್ನುತ್ತಾರೆ ಆ್ಯನ್ನೆ ಮಂಕ್ ಸೋಲ್ಗಾರ್ಡ್. ಇವರು GEUS ನಲ್ಲಿ ಹಿರಿಯ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕರಾಗಿದ್ದಾರೆ. ಇವರ ಸಂಶೋಧನೆಯು ಈಗ ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್‌ನಲ್ಲಿ ಪ್ರಕಟವಾಗಿದೆ.

ಮೇಲ್ಮೈಯಿಂದ ಕರಗಿದ ನೀರು ಮಂಜುಗಡ್ಡೆಯ ಕೆಳಭಾಗವನ್ನು ತಲುಪಿದಾಗ, ಅದು ಕರಗಿದ ಚಾನಲ್​ಗಳ ಮೂಲಕ ಹಿಮದ ಹಾಳೆಯ ಅಂಚಿನಲ್ಲಿ ಪ್ರಾಥಮಿಕವಾಗಿ ಹರಿಯುತ್ತದೆ. ಸಬ್‌ಗ್ಲೇಶಿಯಲ್ ಡ್ರೈನೇಜ್ ಪಾಥ್‌ವೇಸ್ ಎಂದೂ ಕರೆಯಲ್ಪಡುವ ಈ ಚಾನಲ್‌ಗಳ ವಿನ್ಯಾಸವು ಮೇಲಿನ ಮಂಜುಗಡ್ಡೆಯ ಚಲನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧಕರು ಕೃತಕ ಬುದ್ಧಿಮತ್ತೆಯನ್ನು ಸಾವಿರಾರು ಮಾಪನಗಳಲ್ಲಿ ಪತ್ತೆಹಚ್ಚಲು ಮತ್ತು ಪ್ರತ್ಯೇಕಿಸಲು ಚಲನೆಯ ಮಾದರಿಗಳನ್ನು ಬಳಸಿದ್ದಾರೆ. ನೀಲ್ಸ್ ಬೋರ್ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ಕ್ರಿಸ್ಟೀನ್ ಹ್ವಿಡ್‌ಬರ್ಗ್ ಪ್ರಕಾರ, ಇಂಥ ಸಂಶೋಧಣೆಗಳಲ್ಲಿ ಕೃತಕ ಬುದ್ಧಿಮತ್ತೆಯ ಕಂಪ್ಯೂಟಿಂಗ್ ಶಕ್ತಿಯು ಹೆಚ್ಚು ಅಗತ್ಯವಾಗುತ್ತಿದೆ.

ಇದನ್ನೂ ಓದಿ: ಗ್ಲೋಬಲ್ ವಾರ್ಮಿಂಗ್​ನಿಂದ ಭಾರಿ ಗಂಡಾಂತರ: ಯುಎನ್ ಸೆಕ್ರೆಟರಿ ಜನರಲ್ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.