ETV Bharat / science-and-technology

Chandrayaan-3: 'ವೈಫಲ್ಯ ಆಧಾರಿತ ವಿಧಾನ'ದ ಮೂಲಕ ಚಂದ್ರಯಾನ-3 ನೌಕೆ ಉಡ್ಡಯನ: ಇಸ್ರೋ - ಇಸ್ರೋ

ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆಯು ಈ ಬಾರಿ ವೈಫಲ್ಯಗಳ ಆಧಾರಿತ ವಿಧಾನಗಳ ಮೇಲೆ ರೂಪಿತವಾಗಿದೆ. ಕಳೆದ ಸಲ ಮಾಡಿದ ತಪ್ಪುಗಳನ್ನು ಇಲ್ಲಿ ತಿದ್ದಿಕೊಳ್ಳಲಾಗಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3
ಚಂದ್ರಯಾನ-3
author img

By

Published : Jul 11, 2023, 12:38 PM IST

ನವದೆಹಲಿ: ಲ್ಯಾಂಡಿಂಗ್ ಸಮಸ್ಯೆಯಿಂದಾಗಿ 2019ರಲ್ಲಿ ಹಾರಿಸಲಾದ ಚಂದ್ರಯಾನ-2 ವೈಫಲ್ಯ ಕಂಡಿತ್ತು. ಅದು ಈ ಬಾರಿ ಮರುಕಳಿಸದಂತೆ ಹೆಚ್ಚುವರಿ ಇಂಧನ ವ್ಯವಸ್ಥೆ, ಸುರಕ್ಷತಾ ಕ್ರಮ, ಸೂಕ್ಷ್ಮ ಲ್ಯಾಂಡಿಂಗ್​ ಸೇರಿದಂತೆ 'ವೈಫಲ್ಯ ಆಧಾರಿತ ವಿನ್ಯಾಸ'ದ ಮೇಲೆ ಚಂದ್ರಯಾನ-3 ನೌಕೆಯನ್ನು ರೂಪಿಸಲಾಗಿದೆ. ಎಲ್ಲವೂ ನಿಗದಿಯಂತೆ ಜರುಗಿದರೆ, ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಎಲ್​​ವಿಎಂ ಉಡಾವಣಾ ವಾಹಕದ ಮೂಲಕ ನಭಕ್ಕೆ ಜಿಗಿಯಲಿದೆ.

ಕಳೆದ ಬಾರಿ ಆದ ಸಣ್ಣ ಪ್ರಮಾದದಿಂದಾಗಿ ಇಡೀ ಯೋಜನೆಯೇ ವಿಫಲವಾಗಿತ್ತು. ಆ ವೈಫಲ್ಯದ ಮೇಲೆಯೇ ಇಸ್ರೋ ದೀರ್ಘ ಅಧ್ಯಯನ ನಡೆಸಿ ಚಂದ್ರಯಾನ-3 ಯೋಜನೆಗೆ ಸಕಲ ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಅವರು, ಚಂದ್ರಯಾನ-2 ರ 'ಯಶಸ್ಸು ಆಧಾರಿತ ವಿನ್ಯಾಸ'ದ ಬದಲಿಗೆ, ಚಂದ್ರಯಾನ-3 ರಲ್ಲಿ 'ವೈಫಲ್ಯ ಆಧಾರಿತ ವಿನ್ಯಾಸ'ವನ್ನು ರೂಪಿಸಲಾಗಿದೆ. ವಿಫಲತೆ ಹೊಂದುವ ಸೂಚನೆಗಳಿದ್ದರೆ, ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮೇಲೆ ಇದು ಕೇಂದ್ರೀಕೃತವಾಗಿದೆ. ಯಶಸ್ವಿ ಲ್ಯಾಂಡಿಂಗ್ ಮಾಡುವುದನ್ನು ಇದು ಹೊಂದಿದೆ ಎಂದು ತಿಳಿಸಿದರು.

ಇಸ್ರೋ ಹಲವು ವೈಫಲ್ಯಗಳನ್ನು ಕಂಡಿದೆ. ಕೆಲವೊಮ್ಮೆ ನೌಕೆಗಳಲ್ಲಿ ಸಂವೇದಕ ವೈಫಲ್ಯ, ಇಂಜಿನ್, ಅಲ್ಗಾರಿದಮ್, ತಪ್ಪು ಲೆಕ್ಕಾಚಾರ ಸೇರಿದಂತೆ ಹಲವು ಕಾರಣಗಳಿಗೆ ಲ್ಯಾಂಡಿಂಗ್​ ವಿಫಲವಾಗಿದೆ. ಈ ಯೋಜನೆಯಲ್ಲಿ ಇದೆಲ್ಲವನ್ನೂ ಮೀರಿದ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ನಿಖರ ವೇಗದಲ್ಲಿಯೇ ನೌಕೆ ಇಳಿಸಲು ನಾವು ಬಯಸುತ್ತೇವೆ. ಹಾಗಾಗಿ ವಿಭಿನ್ನ ವೈಫಲ್ಯದ ಸನ್ನಿವೇಶಗಳನ್ನು ಲೆಕ್ಕಹಾಕಲಾಗಿದೆ. ಅವೆಲ್ಲವುಗಳ ಮೇಲೆ ಪ್ರೋಗ್ರಾಮ್ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಇಂಧನ, ಲ್ಯಾಂಡಿಂಗ್​ ಜಾಗ ವಿಸ್ತರಣೆ: ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಪ್ರದೇಶವನ್ನು 500m x 500m ನಿಗದಿ ಮಾಡಲಾಗಿತ್ತು. ಇದನ್ನೀಗ 4 ಕಿಮೀ ನಿಂದ 2.5 ಕಿಮಿಗೆ ವಿಸ್ತರಿಸಲಾಗಿದೆ. ಇಷ್ಟು ಜಾಗದಲ್ಲಿ ಅದು ಎಲ್ಲಿಯಾದರೂ ಇಳಿಯಬಹುದು. ಇದು ನಿರ್ದಿಷ್ಟ ಬಿಂದುವಿನ ಮಿತಿ ಇರುವುದಿಲ್ಲ. ನೌಕೆಯೇ ಸ್ವಯಂ ನಿರ್ಧಾರ ಕೈಗೊಳ್ಳುವ ವಿಶೇಷ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸೋಮನಾಥ್ ಹೇಳಿದರು.

ಚಂದ್ರಯಾನ-2ಕ್ಕಿಂತ ಈ ಬಾರಿ ಹೆಚ್ಚಿನ ಇಂಧನ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಸ್ಥಳದಲ್ಲಿ ಬಿಟ್ಟು ಬೇರೆಡೆ ಲ್ಯಾಂಡಿಂಗ್​ ಅನಿವಾರ್ಯವಾದರೆ, ಇಂಧನ ಬೇಕಾಗುವ ಕಾರಣಕ್ಕಾಗಿ ಹೆಚ್ಚುವರಿ ಜಾಗ ಮಾಡಲಾಗಿದೆ. ಸೋಲಾರ್​ ಪ್ಯಾನಲ್​ ಕೂಡ ಇದರಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಇಸ್ರೋ ಜೊತೆಗೆ ಗೋದ್ರೇಜ್​ ಸಹಭಾಗಿತ್ವ: ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯಲ್ಲಿ ಇಸ್ರೋದ ಜೊತೆಗೆ ಪ್ರಸಿದ್ಧ ಗೋದ್ರೇಜ್ ಕಂಪನಿಯು ಕೈ ಜೋಡಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಪ್ರಮುಖ ಘಟಕಗಳನ್ನು ಸಂಸ್ಥೆ ಪೂರೈಸಿದೆ.

ಚಂದ್ರನ ಅಧ್ಯಯನಕ್ಕಾಗಿ ವಿಕಾಸ್, CE20 ಮತ್ತು ಉಪಗ್ರಹ ಥ್ರಸ್ಟರ್‌ಗಳಂತಹ ಪ್ರೊಪಲ್ಷನ್ ಎಂಜಿನ್‌ಗಳನ್ನು ತಯಾರಿಸಿದ್ದೇವೆ. ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿಸಿದರೆ, ಚಂದ್ರನ ಮೇಲೆ ವಿಕ್ರಮ ಸಾಧಿಸಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೆಸರಾಗಲಿದೆ ಎಂದು ಗೋದ್ರೇಜ್ ಏರೋಸ್ಪೇಸ್‌ನ ಬ್ಯುಸಿನೆಸ್ ಹೆಡ್ ಮಾನೆಕ್ ಬೆಹ್ರಾಮ್‌ಕಾಮ್‌ಡಿನ್ ಹೇಳಿದರು.

ಗೋದ್ರೇಜ್ 30 ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಜೊತೆಗೆ ಕಾರ್ಯ ನಿರ್ವಹಿಸುತ್ತಿದೆ. ಇಸ್ರೋದ ಅಗತ್ಯಗಳನ್ನು ಪೂರೈಸಲು ಅಗತ್ಯವುಳ್ಳ ಎಂಜಿನ್​ಗಳ ಅಭಿವೃದ್ಧಿ ಮಾಡುತ್ತಿದೆ. ಪ್ರೊಪಲ್ಷನ್ ಎಂಜಿನ್‌ಗಳನ್ನು ಇದು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಚಂದ್ರಯಾನ-1 ಮತ್ತು 2 ಮತ್ತು ಮಂಗಳಯಾನ ಬಾಹ್ಯಾಕಾಶ ಯೋಜನೆಯ ಭಾಗವಾಗಿತ್ತು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Chandrayaan-3 Mission: ರಾಕೆಟ್‌ನ ವಿದ್ಯುತ್ ಪರೀಕ್ಷೆಗಳು ಪೂರ್ಣ: ಉಡಾವಣೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ.. ನೋಂದಣಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.