ಚೆನ್ನೈ : ಗಗನಯಾನ್ ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಂ (ಎಸ್‌ಎಂಪಿಎಸ್) ಮೇಲೆ ಮತ್ತೆ ಎರಡು ಹಾಟ್ ಟೆಸ್ಟ್‌ಗಳನ್ನು (hot tests) ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಗುರುವಾರ ತಿಳಿಸಿದೆ. ಗಗನಯಾನ್ ಎಂಬುದು ಮಾನವ ಸಹಿತ ಬಾಹ್ಯಾಕಾಶ ಮಿಷನ್ನ ಹೆಸರಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಕಾರ ಗಗನಯಾನ್ ಎಸ್‌ಎಂಪಿಎಸ್ ಮೇಲೆ ಜುಲೈ 26 ರಂದು ಮಹೇಂದ್ರಗಿರಿಯ ಇಸ್ರೊ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ ಎರಡು ಹಾಟ್ ಟೆಸ್ಟ್‌ಗಳನ್ನು ಮಾಡಲಾಯಿತು.
ಈ ಎಸ್‌ಎಂಪಿಎಸ್ ಅನ್ನು ಬೆಂಗಳೂರು ಮತ್ತು ತಿರುವನಂತಪುರದ ವಲಿಯಮಾಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಈ ಪರೀಕ್ಷೆಗಳು ಸಿಸ್ಟಮ್ ಡೆಮಾನ್‌ಸ್ಟ್ರೇಶನ್ ಮಾದರಿ (SM-SDM) ಹಂತ 2 ಪರೀಕ್ಷಾ ಸರಣಿಯಲ್ಲಿ ಸರ್ವಿಸ್ ಮಾಡ್ಯೂಲ್‌ಗೆ ಮಾಡಲಾದ ಎರಡನೇ ಮತ್ತು ಮೂರನೇ ಹಾಟ್ ಟೆಸ್ಟ್ಗಳಾಗಿವೆ. ಮೊದಲ ಹಾಟ್ ಟೆಸ್ಟ್ ಅನ್ನು ಜುಲೈ 19 ರಂದು ನಡೆಸಲಾಯಿತು.
ಈ ಪರೀಕ್ಷೆಯಲ್ಲಿ ಏನೆಲ್ಲ ಮಾಡಲಾಯಿತು?: ಬುಧವಾರದ ಪರೀಕ್ಷೆಗಳಲ್ಲಿ ಥ್ರಸ್ಟರ್‌ಗಳನ್ನು ಮಿಷನ್ ಪ್ರೊಫೈಲ್‌ನೊಂದಿಗೆ ಸಿಂಕ್ ಆಗಿ ನಿರಂತರ ಮತ್ತು ಪಲ್ಸ್ ಮೋಡ್‌ನಲ್ಲಿ ನಿರ್ವಹಿಸಲಾಗಿದೆ ಎಂದು ಇಸ್ರೊ ಹೇಳಿದೆ. 723.6 ಸೆಕೆಂಡುಗಳ ಕಾಲ ನಡೆದ ಆರಂಭಿಕ ಹಾಟ್ ಪರೀಕ್ಷೆ ಆರ್ಬಿಟಲ್ ಮಾಡ್ಯೂಲ್ ಇಂಜೆಕ್ಷನ್ ಮತ್ತು 100 ನ್ಯೂಟನ್ ಥ್ರಸ್ಟರ್‌ಗಳು ಮತ್ತು ಲಿಕ್ವಿಡ್ ಅಪೋಜಿ ಮೋಟಾರ್ (Liquid Apogee Motor- LAM) ಎಂಜಿನ್‌ಗಳ ಮಾಪನಾಂಕ ನಿರ್ಣಯ ಪ್ರದರ್ಶಿಸುವುದರ ಮೇಲೆ ಕೇಂದ್ರೀಕರಿಸಿದೆ. ಯಾವುದೇ ಕಾರ್ಯಾಚರಣೆಯಲ್ಲಿ ಇಲ್ಲದ ಎಂಜಿನ್‌ಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಮಾಪನಾಂಕ ನಿರ್ಣಯವು ಅತ್ಯಗತ್ಯವಾಗಿತ್ತು. LAM ಎಂಜಿನ್‌ಗಳು ಮತ್ತು ಪ್ರತಿಕ್ರಿಯೆ ನಿಯಂತ್ರಣ ವ್ಯವಸ್ಥೆ (RCS) ಥ್ರಸ್ಟರ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು ಎಂದು ಇಸ್ರೊ ಮಾಹಿತಿ ನೀಡಿದೆ.
ಮುಂದಿನ ಗುರಿ ಏನು?: ಮುಂದಿನ ಹಂತದ ಹಾಟ್ ಟೆಸ್ಟ್ 350 ಸೆಕೆಂಡುಗಳ ಅವಧಿಯೊಂದಿಗೆ, ಅಂತಿಮ ಕಕ್ಷೆಯನ್ನು ಸಾಧಿಸಲು ಆರ್ಬಿಟಲ್ ಮಾಡ್ಯೂಲ್ನ ವೃತ್ತಾಕಾರವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಈ ಪರೀಕ್ಷೆಯ ಸಮಯದಲ್ಲಿ LAM ಎಂಜಿನ್‌ಗಳು ನಿರಂತರ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, ಆದರೆ RCS ಥ್ರಸ್ಟರ್‌ಗಳನ್ನು ಪಲ್ಸ್ ಮೋಡ್‌ನಲ್ಲಿ ಫೈರ್ ಮಾಡಲಾಗುತ್ತದೆ.
ಗಗನಯಾನ್ ಮಿಷನ್ ಇಸ್ರೋದ ಮಹತ್ವಾಕಾಂಕ್ಷಿ ಹೆಗ್ಗುರುತು ಯೋಜನೆಯಾಗಿದ್ದು, ಮೂವರು ಗಗನಯಾನಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ಕಕ್ಷೆಗೆ ಉಡಾವಣೆ ಮಾಡುವ ಮೂಲಕ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಭಾರತೀಯ ಸಮುದ್ರದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಈ ಹಾಟ್ ಟೆಸ್ಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
ಇದನ್ನೂ ಓದಿ : Tomato: 20 ರೂಪಾಯಿಗೆ ಒಂದು ಟೊಮೆಟೊ; 200 ರೂ. ದಾಟಿದ ರೇಟ್! ಎಲ್ಲಿ ಗೊತ್ತಾ?