ETV Bharat / science-and-technology

ಹೈದರಾಬಾದ್​ನಲ್ಲಿ ನಿರ್ಮಾಣವಾಗಲಿದೆ ಮೈಕ್ರೋಸಾಫ್ಟ್ ಇಂಡಿಯಾದ ಡೇಟಾ ಸೆಂಟರ್! - ಹೈದರಾಬಾದ್ ಡೇಟಾ ಸೆಂಟರ್​

ಸುಮಾರು 15,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹೈದರಾಬಾದ್‌ನ ಶಂಶಾಬಾದ್ ವಿಮಾನ ನಿಲ್ದಾಣದ ಬಳಿ ಎಂಎನ್‌ಸಿ ಕಂಪನಿಯಾದ ಮೈಕ್ರೋಸಾಫ್ಟ್ ಇಂಡಿಯಾ, ತನ್ನ ಡೇಟಾ ಸೆಂಟರ್​ ಅನ್ನು ಸ್ಥಾಪಿಸಲಿದೆ.

Microsoft
ಮೈಕ್ರೋಸಾಫ್ಟ್
author img

By

Published : Jul 22, 2021, 12:07 PM IST

ಹೈದರಾಬಾದ್​: ಎಂಎನ್‌ಸಿ ಕಂಪನಿಯಾದ ಮೈಕ್ರೋಸಾಫ್ಟ್ ಇಂಡಿಯಾ, ತನ್ನ ಡೇಟಾ ಸೆಂಟರ್ ಅ​ನ್ನು ಸುಮಾರು 15,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹೈದರಾಬಾದ್‌ನ ಶಂಶಾಬಾದ್ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯ ಪ್ರತಿನಿಧಿಗಳು ತೆಲಂಗಾಣ ಸರ್ಕಾರದೊಂದಿಗೆ ಚರ್ಚೆಗಳನ್ನು ನಡೆಸಿದ್ದು, ಅವು ಅಂತಿಮ ಹಂತದಲ್ಲಿವೆ ಎನ್ನಲಾಗಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. ಇನ್ನೂ 3 ಕಂಪನಿಗಳು ತೆಲಂಗಾಣದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ ಎನ್ನಲಾಗುತ್ತಿದೆ.

ಉದ್ಯಮಿಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಹೂಡಿಕೆ ಮತ್ತು ಕಂಪನಿಗಳ ಸ್ಥಾಪನೆಗೆ ಹೈದರಾಬಾದ್ ಅನ್ನು ಆಯ್ದುಕೊಳ್ಳುತ್ತಿದ್ದಾರೆ. ಜೆಎಲ್ಎಲ್ ಸಲಹಾ ಸೇವಾ ಸಂಸ್ಥೆ ಇತ್ತೀಚೆಗೆ ಡೇಟಾ ಸೆಂಟರ್ ಮಾರುಕಟ್ಟೆ ನವೀಕರಣವಾಗಲಿದೆ ಎಂದು ಹೇಳಿದೆ.

ಈಗಿನಂತೆ 30 ಮೆಗಾ ವ್ಯಾಟ್ ಹೊಂದಿರುವ ಡೇಟಾ ಕೇಂದ್ರಗಳು ಭಾರತದಲ್ಲಿ ಲಭ್ಯವಿದೆ. ಇದನ್ನು 2023 ರವರೆಗೆ 96 ಮೆಗಾ ವ್ಯಾಟ್‌ಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿತ್ತು. ಸರ್ಕಾರದ ಸಕಾರಾತ್ಮಕ ಸ್ಪಂದನೆ ಮತ್ತು ರಿಯಲ್ ಎಸ್ಟೇಟ್​ಗಳು ಕಡಿಮೆ ಖರ್ಚಿನಲ್ಲಿ ನಡೆಯುವುದರಿಂದ ಹೈದರಾಬಾದ್​ ಉತ್ತಮ ಪ್ರದೇಶ ಎಂದು ಕಂಪನಿಗಳು ಆಯ್ದುಕೊಳ್ಳುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.