ETV Bharat / science-and-technology

ವಿಂಡೋಸ್​ನಿಂದ 'ವರ್ಡ್​ಪ್ಯಾಡ್​' ತೆಗೆದು ಹಾಕಲಿದೆ ಮೈಕ್ರೊಸಾಫ್ಟ್​ - ಈಟಿವಿ ಭಾರತ ಕನ್ನಡ

ಭವಿಷ್ಯದ ವಿಂಡೋಸ್​ ಅಪ್ಡೇಟ್​​ಗಳಲ್ಲಿ ವರ್ಡ್​ಪ್ಯಾಡ್​ ಇರುವುದಿಲ್ಲ ಎಂದು ಮೈಕ್ರೊಸಾಫ್ಟ್​​ ಹೇಳಿದೆ.

Microsoft to remove WordPad from Windows

author img

By ETV Bharat Karnataka Team

Published : Sep 3, 2023, 7:13 PM IST

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್​ಪ್ಯಾಡ್​ಗೆ ಯಾವುದೇ ಅಪ್​ಡೇಟ್​​ ನೀಡುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್​​ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ. ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್​ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್​​ ಪ್ಯಾಡ್​​ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್​ ವರ್ಡ್​ 1995 ರಿಂದ ವಿಂಡೋಸ್​ನೊಂದಿಗೆ ಲಭ್ಯವಾಗುತ್ತಿದೆ.

"ವರ್ಡ್​ಪ್ಯಾಡ್​ ಗೆ ಇನ್ನು ಮುಂದೆ ಅಪ್​ಡೇಟ್​ಗಳು ಬರಲಾರವು ಮತ್ತು ವಿಂಡೋಸ್​ನ ಭವಿಷ್ಯದ ಆವೃತ್ತಿಗಳಿಂದ ಅದನ್ನು ತೆಗೆದುಹಾಕಲಾಗುವುದು. .doc ಮತ್ತು .rtf ನಂತಹ ರಿಚ್ ಟೆಕ್ಸ್ಟ್​​ ಡಾಕ್ಯುಮೆಂಟ್​ ತಯಾರಿಸಲು ಮೈಕ್ರೋಸಾಫ್ಟ್ ವರ್ಡ್ ಮತ್ತು .txt ನಂತಹ ಸರಳ ಟೆಕ್ಸ್ಟ್​ ಫೈಲ್ ತಯಾರಿಸಲು ವಿಂಡೋಸ್ ನೋಟ್​ ಪ್ಯಾಡ್​ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ" ಎಂದು ಮೈಕ್ರೋಸಾಫ್ಟ್ ಶುಕ್ರವಾರ ಪ್ರಕಟಿಸಿದ ಸಪೋರ್ಟ್​ ನೋಟ್​ನಲ್ಲಿ ಹೇಳಲಾಗಿದೆ.

ನೋಟ್​​ ಪ್ಯಾಡ್​​ನಲ್ಲಿ ಆಟೋಸೇವ್ ಮತ್ತು ಟ್ಯಾಬ್ ಹಿಂತೆಗೆದುಕೊಳ್ಳುವಿಕೆಯಂತಹ ವೈಶಿಷ್ಟ್ಯಗಳ ಅಪ್​ಡೇಟ್​​ ನೀಡಿದ ಒಂದು ದಿನದ ನಂತರ ಮೈಕ್ರೋಸಾಫ್ಟ್ ತನ್ನ ವರ್ಡ್​ ಪ್ಯಾಡ್​​ ಬಗ್ಗೆ ಹೊಸ ಮಾಹಿತಿ ನೀಡಿದೆ. ವಿಂಡೋಸ್ 11 ನಲ್ಲಿನ ವಿಂಡೋಸ್ ನೋಟ್​ ಪ್ಯಾಡ್​ ಅಪ್ಲಿಕೇಶನ್ ಅನ್ನು ಅನೇಕ ವರ್ಷಗಳ ನಂತರ 2018 ರಲ್ಲಿ ಮೊದಲ ಬಾರಿಗೆ ಅಪ್ಡೇಟ್​​ ಮಾಡಲಾಗಿತ್ತು ಮತ್ತು ಟ್ಯಾಬ್​ಗಳನ್ನು ಸೇರಿಸಲಾಗಿತ್ತು.

ಕಳೆದ ತಿಂಗಳು ಐಒಎಸ್ ಮತ್ತು ಆಂಡ್ರಾಯ್ಡ್ ನಂತರ, ಮೈಕ್ರೋಸಾಫ್ಟ್ ಈಗ ವಿಂಡೋಸ್ 11 ನಲ್ಲಿ ತನ್ನ ಡಿಜಿಟಲ್ ಸಹಾಯಕ ಕೊರ್ಟಾನಾ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಸ್ವತಂತ್ರ ಅಪ್ಲಿಕೇಶನ್ ಆಗಿ ವಿಂಡೋಸ್​ನಲ್ಲಿ ಕೊರ್ಟಾನಾ ಅನ್ನು ತೆಗೆದುಹಾಕಲಾಗಿದ್ದರೂ, ಟೀಮ್ಸ್ ಮೊಬೈಲ್, ಮೈಕ್ರೋಸಾಫ್ಟ್ ಟೀಮ್ಸ್ ಡಿಸ್​ ಪ್ಲೇ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ರೂಮ್ ಗಳಲ್ಲಿ ಕೊರ್ಟಾನಾಗೆ ಸಪೋರ್ಟ್​ 2023 ರಲ್ಲಿ ಕೊನೆಗೊಳ್ಳುತ್ತದೆ. ಜೂನ್​ನಲ್ಲಿ ವಿಂಡೋಸ್ 11 ನಲ್ಲಿ ಫೈಲ್ ಎಕ್ಸ್​ಪ್ಲೋರರ್ ಸೆಟ್ಟಿಂಗ್​ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಮೈಕ್ರೋಸಾಫ್ಟ್ ಫೈಲ್ ಎಕ್ಸ್​ಪ್ಲೋರರ್​​ನಲ್ಲಿ ಫೋಲ್ಡರ್ ಆಯ್ಕೆಗಳ ಅಡಿಯಲ್ಲಿ ಕೆಲ ಹಳೆಯ ಸೆಟ್ಟಿಂಗ್​ಗಳನ್ನು ತೆಗೆದುಹಾಕಿದೆ.

ಮೈಕ್ರೋಸಾಫ್ಟ್ ವರ್ಡ್​ ಪ್ಯಾಡ್ ಎಂಬುದು ಉಚಿತ ರಿಚ್ ಟೆಕ್ಸ್ಟ್​ ಎಡಿಟರ್ ಮತ್ತು ವರ್ಡ್ ಪ್ರೊಸೆಸರ್ ಆಗಿದ್ದು, ಮೊದಲು ಮೈಕ್ರೋಸಾಫ್ಟ್ ವಿಂಡೋಸ್ 95 ಹಾಗೂ ಅದರ ನಂತರದ ಎಲ್ಲಾ ಆವೃತ್ತಿಗಳೊಂದಿಗೆ ಸೇರಿಸಲಾಗಿದೆ. ನೋಟ್ ಪ್ಯಾಡ್ ಗಿಂತ ಹೆಚ್ಚಿನ ವೈಶಿಷ್ಟ್ಯಗಳು ಇದರಲ್ಲಿದ್ದರೂ ವರ್ಡ್ ಪ್ಯಾಡ್ ಮೈಕ್ರೋಸಾಫ್ಟ್ ವರ್ಡ್ ನಂತೆ ಮುಂದುವರಿದಿಲ್ಲ. ಮೈಕ್ರೊಸಾಫ್ಟ್​ ವರ್ಡ್​ ಪ್ಯಾಡ್ ನಲ್ಲಿ ಸರಳ-ಪಠ್ಯ ಫೈಲ್ (.txt), ರಿಚ್ ಟೆಕ್ಸ್ಟ್​ (.rtf), ಮೈಕ್ರೊಸಾಫ್ಟ್​ ವರ್ಡ್​ (.doc ಅಥವಾ .docx), ಮತ್ತು ಓಪನ್ ಡಾಕ್ಯುಮೆಂಟ್​ ಪಠ್ಯ (.odt) ಸ್ವರೂಪದ ಫೈಲ್ ಗಳನ್ನು ಎಡಿಟ್​ ಮಾಡಬಹುದು ಮತ್ತು ಸೇವ್ ಮಾಡಬಹುದು.

ಇದನ್ನೂ ಓದಿ : ಖ್ಯಾತ ಕ್ಯಾನ್ಸರ್ ತಜ್ಞ ಡಾ.ರವಿ ಕಣ್ಣನ್​ರಿಗೆ ಪ್ರತಿಷ್ಠಿತ 'ರಾಮನ್ ಮ್ಯಾಗ್ಸೆಸೆ' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.