ETV Bharat / science-and-technology

ಮೊಬೈಲ್​ ಗೇಮ್​ ಸ್ಟೋರ್​ ಅಭಿವೃದ್ಧಿಪಡಿಸಿ ಆ್ಯಪಲ್​, ಗೂಗಲ್​ ವಿರುದ್ಧ ಮೈಕ್ರೋಸಾಫ್ಟ್​ ಸ್ಪರ್ಧೆ - ಸ್ಮಾರ್ಟ್​​ಫೋನ್​ಗಳಿಗಾಗಿ ತನ್ನದೇ ಆದ ಮೊಬೈಲ್​ ಗೇಮ್

ಚಾಟ್​ ಜಿಪಿಟಿ ಮೂಲಕ ಈಗಾಗಲೇ ಟೆಕ್​ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮೈಕ್ರೋಸಾಫ್ಟ್​ ಇದೀಗ ವಿಡಿಯೋ ಗೇಮಿಂಗ್​ ಅಭಿವೃದ್ಧಿಗೆ ಮುಂದಾಗಿದೆ.

Microsoft Plans to develop mobile games store

author img

By

Published : Mar 21, 2023, 12:11 PM IST

ಚಾಟ್ ​ಜಿಪಿಟಿ ಸರ್ಚ್‌ ಇಂಜಿನ್​ ಮೂಲಕ ಗೂಗಲ್​​ಗೆ ತಲೆನೋವು ತಂದಿಟ್ಟ ಮೈಕ್ರೊಸಾಫ್ಟ್​ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಗೂಗಲ್​, ಆ್ಯಪಲ್​ ವಿರುದ್ಧ ಸಮರಕ್ಕಿಳಿದಿರುವ ಕಂಪನೆ​ ಐಫೋನ್​ ಮತ್ತು ಆ್ಯಂಡ್ರೊಯ್ಡ್​ ಸ್ಮಾರ್ಟ್​​ಫೋನ್​ಗಳಿಗಾಗಿ ತನ್ನದೇ ಆದ ಮೊಬೈಲ್​ ಗೇಮ್​ ಸ್ಟೋರ್ ಅಭಿವೃದ್ಧಿ ಪಡಿಸುವ ಕುರಿತು ಘೋಷಿಸಿದೆ.

ಈ ಗೇಮಿಂಗ್​ ಸ್ಟೋರ್​ ಅಭಿವೃದ್ಧಿಗಾಗಿ ಮೈಕ್ರೋಸಾಫ್ಟ್​​ 77 ಶತಕೋಟಿ ಡಾಲರ್‌ಗೆ ವಿಡಿಯೋ ಗೇಮ್​ ಡೆವಲಪರ್​ ಆಗಿರುವ ಆಕ್ಟಿವಿಸನ್​ ಬ್ಲಿಝಾರ್ಡ್​ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ನಿಯಂತ್ರಕಗಳು ​ಅನುಮೋದಿಸಿದರೆ ಮುಂದಿನ ವರ್ಷದಿಂದಲೇ ಐಫೋನ್‌ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ತನ್ನದೇ ಆದ ಮೊಬೈಲ್ ಗೇಮ್ಸ್ ಸ್ಟೋರ್ ಅಭಿವೃದ್ಧಿಪಡಿಸಲು ಮೈಕ್ರೋಸಾಫ್ಟ್​​ ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಿಯಂತ್ರಕರ ಅನುಮೋದನೆ ಕಡ್ಡಾಯ: ಮೈಕ್ರೋಸಾಫ್ಟ್​ ಗೇಮಿಂಗ್​ ಮುಖ್ಯಸ್ಥ ಫಿಲ್​ ಸ್ಪೆನ್ಸರ್​​ ಪ್ರಕಾರ, 2024ರಲ್ಲಿ ಜಾರಿಗೆ ಬರುವ ಇಯು ಡಿಜಿಟಲ್​ ಮಾರ್ಕೆಟ್​ ಆಕ್ಟ್​ (ಡಿಎಂಎ) ಅನುಸಾರ ಕಂಪನಿ ತನ್ನದೇ ಆದ ಮೊಬೈಲ್​ ಆ್ಯಪ್​ ಸ್ಟೋರ್​ ರೂಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಐಫೋನ್​ ಮತ್ತು ಆ್ಯಂಡ್ರೋಯ್ಡ್​​ ಫೋನ್​ಗಳಲ್ಲಿ ತಮ್ಮ ಅಪ್ಲಿಕೇಶನ್​​​ ಸ್ಟೋರ್​ ಲೋಡ್​ ಮಾಡಲು ಅನುಮತಿ ಕೇಳುತ್ತದೆ.

ಸದ್ಯ ಸ್ಮಾರ್ಟ್​ ಫೋನ್​ಗಳಲ್ಲಿ ಗೇಮಿಂಗ್​​ ಮತ್ತು ಅಪ್ಲಿಕೇಶನ್‌ಗಳ ವಿತರಣೆಯಲ್ಲಿ ಹೆಚ್ಚಾಗಿ ಆ್ಯಪಲ್​ ಮತ್ತು ಗೂಗಲ್​ ಹಿಡಿತ ಸಾಧಿಸಿದೆ. ಮೈಕ್ರೋಸಾಫ್ಟ್​ ಈ ಸ್ಪರ್ಧೆಗೆ ಕಾಲಿಟ್ಟರೆ ಏನು ಗತಿ ಎಂಬ ಕಳವಳ ಟೆಕ್​ ಜಗತ್ತಿನ ದಿಗ್ಗಜರಲ್ಲಿ ಮೂಡಿದೆ. ಈ ಹಿಂದೆ ಗೇಮಿಂಗ್​ ಆ್ಯಪ್​ಗಳಲ್ಲಿ ನಾವು ಕಾಣಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಥರ್ಡ್​ ಪಾರ್ಟಿ ಪಾಲುದಾರರಿಂದ ಎಕ್ಸ್​ಬಾಕ್ಸ್​ಗೆ ನಾವು ಇರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವು ಮೊಬೈಲ್​ಗಳಲ್ಲಿ ಹೊಸ ಪ್ರಪಂಚ ಸೃಷ್ಟಿಸಲು ಮುಂದಾಗುತ್ತೇವೆ ಎಂದಿದ್ದಾರೆ.

ಸ್ಪರ್ಧೆ ಹೆಚ್ಚುವ ಸಂಭವ: ಅಮೆರಿಕ, ಯೂರೋಪ್​ ಮತ್ತು ಬ್ರಿಟನ್​ನಲ್ಲಿ ಅನೇಕ ನಿಯಂತ್ರಣಗಳ ವಿರುದ್ಧ ಮೈಕ್ರೋಸಾಫ್ಟ್​ ಹೋರಾಡುತ್ತಿದೆ. ಮೈಕ್ರೋಸಾಫ್ಟ್​ ಗೇಮಿಂಗ್​ ವಲಯಕ್ಕೆ ಕಾಲಿಟ್ಟರೆ ಇದು ಎಕ್ಸ್​ಬಾಕ್ಸ್​ ಕನ್ಸೋಲ್​ ಮೇಲೆ ಪರಿಣಾಮ ಬೀರಲಿದೆ. ಜಗತ್ತಿನ ಜನಪ್ರಿಯ ಆಟಗಳ ಫ್ರಾಂಚೈಸಿಯಲ್ಲಿ ಒಂದಾಗಿರುವ ಕಾಲ್​ ಆಫ್​ ಡ್ಯೂಟಿಯ ಡೆವಲಪರ್​ ಸ್ವಾಧೀನಪಡಿಸಿಕೊಳ್ಳುವುದರಿಂದ ಸ್ಪರ್ಧೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್​ ಅನೇಕ ನಿಯಂತ್ರಕಕ್ಕೆ ಒಳಗಾಗಿದೆ.

ಆಕ್ಟಿವಿಷನ್​ ಬ್ಲಿಜಾರ್ಡ್​ ಸ್ವಾಧೀನಕ್ಕೆ ಮುಂದಾಗಿರುವ ಮೈಕ್ರೋಸಾಫ್ಟ್​​ ಪ್ರಸ್ತಾಪಕ್ಕೆ ಯುರೋಪಿಯನ್​ ಒಕ್ಕೂಟ ಎಚ್ಚರಿಕೆ ನೀಡಿದೆ. ವಿಡಿಯೋ ಗೇಮಿಂಗ್​ ಮಾರುಕಟ್ಟೆಯಲ್ಲಿ ಸ್ಪರ್ಧೆ ಮತ್ತು ಬೆದರಿಕೆ ಕುರಿತು ವರದಿ ಆಗಿದೆ. ವಿಡಿಯೋ ಗೇಮ್​ ಡೆವಲಪರ್​ ಆಕ್ಟಿವಿಸನ್​ ಬ್ಲಿಝಾರ್ಡ್​ ಸ್ವಾಧೀನ ಪಡಿಸಿಕೊಳ್ಳುವುದನ್ನು ತಡೆಯಲು ಯುಎಸ್​ ಫೆಡರಲ್​ ಟ್ರೇಡ್​ ಕಮಿಷನ್​ (ಎಫ್​ಟಿಸಿ) ಮೈಕ್ರೋಸಾಫ್ಟ್​ ವಿರುದ್ಧ ಮೊಕದ್ಧಮೆ ಹೂಡಿದೆ. ಈ ಸಂಬಂಧ ಮೈಕ್ರೋಸಾಫ್ಟ್​​ ಮೇಲ್ಮನವಿ ಸಲ್ಲಿಸಬಹುದು. ಮಾರ್ಚ್ ಗಡುವನ್ನು ಮೀರಿ ಜಾರಿ ವಿಳಂಬಗೊಳಿಸಬಹುದು ಎಂದು ವರದಿ ಹೇಳಿದೆ.

ಇದನ್ನೂ ಓದಿ: 45 ಲಕ್ಷಕ್ಕೆ ಹರಾಜಿನಲ್ಲಿ ಮಾರಾಟವಾಯಿತು ಮೊದಲ ತಲೆಮಾರಿನ ಐಫೋನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.