ಸ್ಯಾನ್ ಫ್ರಾನ್ಸಿಸ್ಕೋ: ವಿಂಡೋಸ್ 7 ಮತ್ತು ವಿಂಡೋಸ್ 8/8.1 ಎರಡರಲ್ಲೂ ಎಡ್ಜ್ ವೆಬ್ ಬ್ರೌಸರ್‌ಗೆ ಸಪೋರ್ಟ್ ಕೊನೆಗೊಳಿಸುವ ದಿನಾಂಕವನ್ನು ಮೈಕ್ರೋಸಾಫ್ಟ್ ಘೋಷಿಸಿದೆ. ಕಂಪನಿಯು ಎರಡೂ ಆಪರೇಟಿಂಗ್ ಸಿಸ್ಟಮ್‌ಗಳಿಗೆ Microsoft Edge WebView2 ನ ಬೆಂಬಲವನ್ನು ಕೊನೆಗೊಳಿಸಿದೆ. WebView2 ಇದು ಅಪ್ಲಿಕೇಶನ್‌ಗಳಲ್ಲಿ ವೆಬ್ ವಿಷಯವನ್ನು ಎಂಬೆಡ್ ಮಾಡಲು ಡೆವಲಪರ್ ಕಂಟ್ರೋಲ್ ಟೂಲ್ ಆಗಿದೆ.
ಮೈಕ್ರೊಸಾಫ್ಟ್ನ ಬ್ಲಾಗ್‌ಪೋಸ್ಟ್ ಪ್ರಕಾರ, ಎರಡೂ ಆಪರೇಟಿಂಗ್ ಸಿಸ್ಟಂಗಳು ಜನವರಿ 10, 2023 ರಂದು ಎಡ್ಜ್‌ಗೆ ಬೆಂಬಲವನ್ನು ಕೊನೆಗೊಳಿಸಲಿವೆ. ಇದಲ್ಲದೇ, ವಿಂಡೋಸ್ 7 ಮತ್ತು ವಿಂಡೋಸ್ 8.1 ನಲ್ಲಿ ಕ್ರೋಮ್ ಸಪೋರ್ಟ್ ಕೂಡ ಕೊನೆಗೊಳ್ಳುತ್ತಿದೆ. ಆದ್ದರಿಂದ ಬಳಕೆದಾರರು ಕ್ರೋಮ್ ಬ್ರೌಸರ್ ಬಳಸಬೇಕಾದರೆ ವಿಂಡೋಸ್ 10 ಅಥವಾ ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ವಿಂಡೋಸ್ 7 ಮತ್ತು ವಿಂಡೋಸ್ 8/8.1 ಗೆ ಸಪೋರ್ಟ್ ಕೊನೆಗೊಳಿಸಲು ನಾವು ಡೆವಲಪರ್‌ಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಮೈಕ್ರೋಸಾಫ್ಟ್ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ. ಇದನ್ನು ಮಾಡುವುದು ಕೆಲ ಡೆವಲಪರ್‌ಗಳಿಗೆ ಸುಲಭವಲ್ಲ ಎಂಬುದು ಗೊತ್ತಿದೆ. ಆದಾಗ್ಯೂ ಈ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಬೆಂಬಲವನ್ನು ಕೊನೆಗೊಳಿಸುವುದರಿಂದ ಬಳಕೆದಾರರನ್ನು ಸಂಭಾವ್ಯ ಭದ್ರತಾ ಬೆದರಿಕೆಗಳು ಮತ್ತು ಅಪಾಯಗಳಿಂದ ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ.
ಏಕೆಂದರೆ ಎರಡೂ ಆಪರೇಟಿಂಗ್ ಸಿಸ್ಟಮ್‌ಗಳು ಜನವರಿ 10, 2023 ರಂದು ಬೆಂಬಲದಿಂದ ಹೊರಗುಳಿಯುತ್ತವೆ ಎಂದು ಬ್ಲಾಗ್ನಲ್ಲಿ ಬರೆಯಲಾಗಿದೆ. ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಆವೃತ್ತಿ 109 ಮತ್ತು ವೆಬ್‌ವೀವ್2 ರನ್‌ಟೈಮ್ ಆವೃತ್ತಿ 109 ಈ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬೆಂಬಲಿಸುವ ಕೊನೆಯ ಆವೃತ್ತಿಗಳಾಗಿವೆ.
ಮೈಕ್ರೋಸಾಫ್ಟ್ ಎಡ್ಜ್ ಮತ್ತು ವೆಬ್‌ವ್ಯೂ2 ರನ್‌ಟೈಮ್ ಆವೃತ್ತಿಗಳು 109 ಮತ್ತು ಹಿಂದಿನ ಆವೃತ್ತಿಗಳು ಈ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಆ ಆವೃತ್ತಿಗಳು ಹೊಸ ವೈಶಿಷ್ಟ್ಯಗಳು, ಭವಿಷ್ಯದ ಭದ್ರತಾ ನವೀಕರಣಗಳು ಅಥವಾ ಬಗ್ ಫಿಕ್ಸ್ಗಳನ್ನು ಪಡೆಯುವುದಿಲ್ಲ ಎಂದು ಬ್ಲಾಗ್‌ಪೋಸ್ಟ್ ಹೇಳಿದೆ.
ಇದನ್ನೂ ಓದಿ: ಆಹಾರ ಭದ್ರತೆ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರ: ಮೈಕ್ರೊಸಾಫ್ಟ್ ಅಧ್ಯಕ್ಷ