ನವದೆಹಲಿ: 37 ವರ್ಷದ ಬಳಿಕ ಚಾಂಪಿಯನ್ ಕಿರೀಟವನ್ನು ಅರ್ಜೆಂಟೀನಾ ಮುಡಿಗೇರಿಸಲು ಲಿಯೊನೆಲ್ ಮೆಸ್ಸಿ ಯಶಸ್ವಿಯಾಗಿದ್ದಾರೆ. ಮೆಸ್ಸಿ ಆಟಕ್ಕೆ ಇಡೀ ವಿಶ್ವ ಬೆರಗಾಗಿದೆ. ಅವರ ಈ ಐತಿಹಾಸಿಕ ಜಯ ಗೂಗಲ್ಗೂ ಲಾಭ ತಂದುಕೊಟ್ಟಿದೆ.
ಹೌದು, ಅಚ್ಚರಿ ಆದರೂ ಇದು ಸತ್ಯ. ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಗೂಗಲ್ನಲ್ಲಿ ಸರ್ಚ್ ಟ್ರಾಫಿಕ್ನಲ್ಲಿ ದಾಖಲೆ ನಿರ್ಮಿಸಿದೆ. 25 ವರ್ಷದಲ್ಲೇ ದಾಖಲೆಯ ಬಳಕೆದಾರರು ಗೂಗಲ್ ಸರ್ಚ್ ಎಂಜಿನ್ ಅನ್ನು ಫಿಫಾ ವರ್ಲ್ಡ್ ಕಪ್ ಫಿನಾಲೆ ವೇಳೆ ಬಳಕೆ ಮಾಡಿದ್ದಾರೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.
-
Search recorded its highest ever traffic in 25 years during the final of #FIFAWorldCup , it was like the entire world was searching about one thing!
— Sundar Pichai (@sundarpichai) December 19, 2022 " class="align-text-top noRightClick twitterSection" data="
">Search recorded its highest ever traffic in 25 years during the final of #FIFAWorldCup , it was like the entire world was searching about one thing!
— Sundar Pichai (@sundarpichai) December 19, 2022Search recorded its highest ever traffic in 25 years during the final of #FIFAWorldCup , it was like the entire world was searching about one thing!
— Sundar Pichai (@sundarpichai) December 19, 2022
ಕಳೆದ 25 ವರ್ಷದ ದಾಖಲೆ ಮೀರಿ ಗೂಗಲ್ ಸರ್ಚ್ ಎಂಜಿನ್ನಲ್ಲಿ #FIFAWorldCup ಹುಡುಕಾಟ ನಡೆಸಲಾಗಿದೆ. ಇಡೀ ವಿಶ್ವವೇ ಒಂದು ವಿಷಯದ ಬಗ್ಗೆ ದಾಖಲೆಯ ಮಟ್ಟದಲ್ಲಿ ಹುಡುಕಾಟ ನಡೆಸಿದೆ ಎಂದು ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅರ್ಜೆಂಟಿನಾ ಮತ್ತು ಫ್ರಾನ್ಸ್ನ ರೋಚಕ ಪಂದ್ಯ ಮತ್ತು ಮೆಸ್ಸಿಯ ಆಟದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
1998ರಲ್ಲಿ ಗೂಗಲ್ ಸರ್ಚ್ ಎಂಜಿನ್ ಸರ್ಜ್ ಬ್ರಿನ್ ಹಾಗೂ ಲ್ಯಾರಿ ಪೇಜ್ ಸ್ಥಾಪಿಸಿದರು. 2022 ರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿ, ಅಧಿಪತ್ಯ ಸಾಧಿಸಿದೆ.
ಇದನ್ನೂ ಓದಿ: ರೆಕಾರ್ಡ್ಗಳ ರಾಜ.. ವಿಶ್ವಕಪ್ನ ಫೈನಲ್ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ