ನವದೆಹಲಿ: ವಾಟ್ಸ್ಆ್ಯಪ್ ಡಿಜಿಟಲ್ ಅವತಾರ್ಗಳನ್ನು ತರುವುದಾಗಿ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಘೋಷಿಸಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ಅವತಾರ್ಗಳನ್ನು ಪ್ರೊಫೈಲ್ ಫೋಟೋವಾಗಿ ಬಳಕೆ ಮಾಡಬಹುದು. ಇಲ್ಲ, 36 ಕಸ್ಟಮ್ ಆಧಾರಿತ ಸ್ಟೀಕರ್ಗಳ ಮೂಲಕ ಹಲವು ಭಾವನೆ ಮತ್ತು ಕಾರ್ಯಗಳನ್ನು ಅಭಿವ್ಯಕ್ತ ಪಡಿಸಬಹುದಾಗಿದೆ.
ನಾವು ಅವತಾರ್ಗಳನ್ನು ವಾಟ್ಸ್ಆ್ಯಪ್ಗೆ ತರುತ್ತಿದ್ದೇವೆ. ನಿಮ್ಮ ಚಾಟ್ಗಳಲ್ಲಿ ಸ್ಟ್ರೀಕರ್ ಆಗಿ ಅವತಾರ್ಗಳನ್ನು ಬಳಕೆ ಮಾಡಬಹುದು. ಎಲ್ಲ ನಮ್ಮ ಆ್ಯಪ್ಗಳಲ್ಲಿ ಮತ್ತಷ್ಟು ಶೈಲಿಯೂ ಶೀಘ್ರದಲ್ಲೇ ಬರಲಿದೆ. ಹಲವಾರು ಸಂಯೋಜನೆ ಮೂಲಕ ಅಂದರೆ ಕೇಶ ಶೈಲಿ, ಮುಖ ಲಕ್ಷಣ ಮತ್ತು ಉಡುಪುಗಳ ಮೂಲಕ ನಿಮ್ಮ ಅವತಾರ್ಗಳನ್ನು ನೀವೇ ಸೃಷ್ಟಿಸಬಹುದು ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕುಟುಂಬ, ಸ್ನೇಹಿತರಿಗೆ ನಿಮ್ಮ ಭಾವನೆಗಳನ್ನು ಶೀಘ್ರವಾಗಿ ಮತ್ತು ಮಜಾವಾಗಿ ಈ ಅವತಾರ್ಗಳ ಮೂಲಕ ಹಂಚಿಕೊಳ್ಳಬಹುದಾಗಿದೆ. ನಿಮ್ಮ ನೈಜ ಫೋಟೋ ಬಳಕೆ ಮಾಡದೇ ನಿಮ್ಮ ಪ್ರೂಫೈಲ್ ಫೋಟೋಗಳಲ್ಲಿ ಈ ಅವತಾರ್ ಅನ್ನು ಬಳಕೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಖಾಸಗಿತನ ರಕ್ಷಣೆ ಕೂಡ ಆಗಲಿದೆ. ಲೈಟಿಂಗ್, ಶೇಡಿಂಗ್, ಹೇರ್ಸ್ಟೈಲ್ ಹಲವು ವಿಶೇಷತೆ ಬಳಿಸಿಕೊಂಡು ಉತ್ತಮವಾದ ಅವತಾರ್ ಅನ್ನು ಸೃಷ್ಟಿಸಬಹುದಾಗಿದೆ.
ಪ್ರಪಂಚದಲ್ಲಿ ತಮ್ಮ ಅನುಭವದ ಬಗ್ಗೆ ಪ್ರತಿಯೊಬ್ಬರು ನಿಯಂತ್ರಣ ಹೊಂದಲು ಬಯಸುತ್ತಾರೆ. ಹಾಗಾಗಿ ನಾವು ಇದಕ್ಕಾಗಿ ಅನೇಕ ವೈಶಿಷ್ಟ ಮತ್ತು ಉಪಕರಣದ ಮೇಲೆ ಕೆಲಸ ಮಾಡುತ್ತೇವೆ. ಇದು ಜನರು ಸ್ವಂತ ಅನುಭವದ ಮೇಲೆ ಕಸ್ಟಮೈಸ್ ಮಾಡುತ್ತದೆ ಎಂದು ಮೆಟಾ ತಿಳಿಸಿದೆ.
ಇದನ್ನೂ ಓದಿ: 21 ಹೊಸ ಎಮೋಜಿ ಪರಿಚಯಿಸಲಿರುವ ವಾಟ್ಸ್ಆ್ಯಪ್!