ನವದೆಹಲಿ : ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ ಲೆನೊವೊ 10.61 ಇಂಚಿನ LCD ಡಿಸ್ ಪ್ಲೇ ಮತ್ತು 1200 x 2000 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಅಲ್ಟ್ರಾ ಪೋರ್ಟಬಲ್ ಟ್ಯಾಬ್ M10 5G ಅನ್ನು ಶುಕ್ರವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಟ್ಯಾಬ್ M10 ಇದು 4GB+128GB ಮತ್ತು 6GB+128GB ಹೀಗೆ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಲೆನೊವೊ ಅಧಿಕೃತ ವೆಬ್‌ಸೈಟ್ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಜುಲೈ 15 ರಿಂದ ಗ್ರಾಹಕರು ಇದನ್ನು ಖರೀದಿಸಬಹುದು.
"ಈ ಅಲ್ಟ್ರಾ ಪೋರ್ಟಬಲ್ ಟ್ಯಾಬ್ಲೆಟ್ ಅನ್ನು ಹೈಬ್ರಿಡ್ ಜೀವನಶೈಲಿಯ ಡಿಜಿಟಲ್ ಮತ್ತು ಪ್ರಕೃತಿ ಪ್ರಿಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಪೀಕ್ ಸಮಯದಲ್ಲಿಯೂ ಸಹ 5G ಯೊಂದಿಗೆ ಹೆಚ್ಚಿನ ವೇಗದ ಸಂಪರ್ಕ ಒದಗಿಸುತ್ತದೆ ಮತ್ತು ಬಹುಮುಖ ಮತ್ತು ವಿಕಸನಗೊಳ್ಳುತ್ತಿರುವ ಡಿಜಿಟಲ್ ಅಗತ್ಯಗಳಿಗೆ ಹೊಂದಿಕೊಳ್ಳುವ ದೈನಂದಿನ ಸಂಗಾತಿಯಾಗಿ ಕೆಲಸ ಮಾಡುತ್ತದೆ" ಎಂದು ಲೆನೊವೊ ಇಂಡಿಯಾದ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್ ಸಾಧನಗಳ ವಿಭಾಗದ ಮುಖ್ಯಸ್ಥೆ ಸುಮತಿ ಸಹಗಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Snapdragon 695 5G ಚಿಪ್‌ಸೆಟ್ ಹೊಂದಿರುವ ಈ ಹೊಸ ಟ್ಯಾಬ್ಲೆಟ್ನಲ್ಲಿ ವಿಡಿಯೋ ಸ್ಟ್ರೀಮ್ ಮಾಡಬಹುದು, ಸ್ನೇಹಿತರಿಗೆ ವಿಡಿಯೋ ಕರೆ ಮಾಡಬಹುದು, ತ್ವರಿತವಾಗಿ ವಿಡಿಯೋ ಮತ್ತು ಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಕ್ಲೌಡ್‌ನಲ್ಲಿ ವಾಸ್ತವಿಕವಾಗಿ ಎಲ್ಲಿಯಾದರೂ ಲೈಟ್ ಗೇಮಿಂಗ್ ಆಡಬಹುದು. ಸುಮಾರು 490 ಗ್ರಾಂ ತೂಕದ ಈ ಸಾಧನವು ಪ್ರಯಾಣದಲ್ಲಿರುವ ವ್ಯಕ್ತಿಗಳಿಗೆ ಬಹಳ ಸೂಕ್ತವಾಗಿರುತ್ತದೆ. ಜೊತೆಗೆ ಇದರಲ್ಲಿನ 7700mAh ಸಾಮರ್ಥ್ಯದ ಬ್ಯಾಟರಿಯಿಂದ 12 ಗಂಟೆಗಳವರೆಗೆ ತಡೆರಹಿತ ವೀಡಿಯೊ ಸ್ಟ್ರೀಮಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಇದಲ್ಲದೇ, ಟ್ಯಾಬ್ ಬಳಕೆದಾರರ ಮುಖಗಳನ್ನು ಗುರುತಿಸುವ (facial recognition technology) ಮತ್ತು ಒಂದು ನೋಟದ ಮೂಲಕ ಲಾಗ್ ಇನ್ ಮಾಡುವ ತಂತ್ರಜ್ಞಾನದಂಥ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಜಿಟಲ್ ಲೈಬ್ರರಿಯಿಂದ ಓದುವಾಗ ಕಲರ್ ಮತ್ತು ಮೊನೊಕ್ರೋಮ್ ಮೋಡ್‌ಗಳ ನಡುವೆ ಸುಲಭವಾಗಿ ಬದಲಾಯಿಸಲು ಇದು ಇಮ್ಮರ್ಸಿವ್ ರೀಡಿಂಗ್ ಮೋಡ್ ಅನ್ನು ಸಹ ಹೊಂದಿದೆ.
ಟ್ಯಾಬ್ಲೆಟ್ ಪಿಸಿ ಎಂಬುದು ವೈರ್‌ಲೆಸ್, ಟಚ್‌ಸ್ಕ್ರೀನ್ ಇಂಟರ್ಫೇಸ್ ಹೊಂದಿರುವ ಪೋರ್ಟಬಲ್ ಪರ್ಸನಲ್ ಕಂಪ್ಯೂಟರ್ ಆಗಿದೆ. ಟ್ಯಾಬ್ಲೆಟ್ ಫಾರ್ಮ್ ಫ್ಯಾಕ್ಟರ್ ಸಾಮಾನ್ಯವಾಗಿ ನೋಟ್‌ಬುಕ್ ಕಂಪ್ಯೂಟರ್‌ಗಿಂತ ಚಿಕ್ಕದಾಗಿರುತ್ತದೆ. ಆದರೆ, ಸ್ಮಾರ್ಟ್‌ಫೋನ್‌ಗಿಂತ ದೊಡ್ಡದಾಗಿರುತ್ತದೆ. ಟ್ಯಾಬ್ಲೆಟ್ PC ಗಳು ಅಂತರ್ನಿರ್ಮಿತ ವೆಬ್ ಬ್ರೌಸಿಂಗ್, ಬಹು ಸಂಪರ್ಕ ಆಯ್ಕೆಗಳು, ಕೆಪ್ಯಾಸಿಟಿವ್ ಟಚ್ ಸ್ಕ್ರೀನ್ ಮತ್ತು ಮಲ್ಟಿಮೀಡಿಯಾ ಹೈ ಡೆಫಿನಿಷನ್ (HD) ಸೌಲಭ್ಯಗಳನ್ನು ಒಳಗೊಂಡಿರುತ್ತವೆ.
ಟ್ಯಾಬ್ಲೆಟ್ ಅನ್ನು ಕಂಪ್ಯೂಟರ್ ಎಂದೇ ಪರಿಗಣಿಸಲಾಗುತ್ತದೆ. ಟ್ಯಾಬ್ಲೆಟ್ ವಿಶೇಷ ಆಪರೇಟಿಂಗ್ ಸಿಸ್ಟಮ್ ಮತ್ತು ಇನ್‌ಪುಟ್ ಸಾಧನಗಳನ್ನು ಬಳಸುತ್ತದೆಯಾದರೂ, ಇದು ಸಾಂಪ್ರದಾಯಿಕ ಕಂಪ್ಯೂಟರ್‌ನಂತೆಯೇ ಕೆಲಸ ಮಾಡುತ್ತದೆ.
ಇದನ್ನೂ ಓದಿ : Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ