ETV Bharat / science-and-technology

8GB ರ್‍ಯಾಮ್​ನ ಹೊಸ ಲಾವಾ 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ರೂ.11,999 ರಿಂದ ಆರಂಭ

ಲಾವಾ ತನ್ನ ಹೊಸ 5ಜಿ ಸ್ಮಾರ್ಟ್​ಫೋನ್​​​​​ ಬಿಡುಗಡೆ ಮಾಡಿದೆ.

author img

By ETV Bharat Karnataka Team

Published : Dec 21, 2023, 2:10 PM IST

Lava launches new 5G smartphone with 6.78-inch display, 8GB RAM

ನವದೆಹಲಿ: ದೇಶೀಯ ಸ್ಮಾರ್ಟ್​ಫೋನ್ ಬ್ರಾಂಡ್ ಲಾವಾ ಗುರುವಾರ 6.78 ಇಂಚಿನ ಡಿಸ್​ ಪ್ಲೇ ಮತ್ತು 8 ಜಿಬಿ ರ್‍ಯಾಮ್ ಹೊಂದಿರುವ ಹೊಸ ಸ್ಟಾರ್ಮ್ 5 ಜಿ (Storm 5G) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್ ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ದ ಬ್ಯಾಂಕ್​ಗಳ ಆಫರ್ ಅಡಿ 11,999 ರೂ.ಗಳ ವಿಶೇಷ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದು ಡಿಸೆಂಬರ್ 28 ರಿಂದ ಅಮೆಜಾನ್ ಮತ್ತು ಲಾವಾ ಇ-ಸ್ಟೋರ್​ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

"ಲಾವಾ ಸ್ಟಾರ್ಮ್ 5 ಜಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್, 8 ಜಿಬಿ ರ್‍ಯಾಮ್ ಮತ್ತು ಅತ್ಯಾಧುನಿಕ 50 ಎಂಪಿ + 8 ಎಂಪಿ ಕ್ಯಾಮೆರಾ ಸೆಟಪ್​ನೊಂದಿಗೆ ಸ್ಟಾರ್ಮ್ 5ಜಿ ಕೇವಲ ಸಾಧನವಲ್ಲ, ಇದೊಂದು ಉತ್ಕೃಷ್ಟ ಅನುಭವವಾಗಿದೆ" ಎಂದು ಲಾವಾ ಇಂಟರ್​ ನ್ಯಾಷನಲ್ ಲಿಮಿಟೆಡ್​ನ ಪ್ರಾಡಕ್ಟ್ ಹೆಡ್ ಸುಮಿತ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಟಾರ್ಮ್ 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಒಳಗೊಂಡಿದ್ದು, 4,20,000 ಕ್ಕೂ ಹೆಚ್ಚು AnTuTu ಸ್ಕೋರ್ ಅನ್ನು ಹೊಂದಿದೆ. ಇದರ ಶಕ್ತಿಯುತ ಪ್ರೊಸೆಸರ್​ನಿಂದ ಅಡೆತಡೆಯಿಲ್ಲದೇ ನೀವು ಇದನ್ನು ಗೇಮಿಂಗ್​ಗಾಗಿ ಬಳಸಬಹುದು. ಇದು 16 ಜಿಬಿ ವರೆಗೆ ವಿಸ್ತರಿಸಬಹುದಾದ ಲ್ಯಾಗ್-ಫ್ರೀ ಅನುಭವಕ್ಕಾಗಿ ಈ ಶ್ರೇಣಿಯಲ್ಲಿಯೇ ಅತ್ಯುತ್ತಮವಾದ 8 ಜಿಬಿ ರ‍್ಯಾಮ್ ಹೊಂದಿದೆ. ಹೀಗಾಗಿ ಉತ್ಸಾಹಿ ಗೇಮರ್​ಗಳಿಗೆ ಈ ಫೋನ್ ಸೂಕ್ತವಾಗಿದೆ.

ಇದು 128 ಜಿಬಿ ಸ್ಟೋರೇಜ್ ಹೊಂದಿರುವುದರಿಂದ ಗೇಮ್​ಗಳು, ಅಪ್ಲಿಕೇಶನ್ ಗಳು ಮತ್ತು ಮಲ್ಟಿಮೀಡಿಯಾ ಕಂಟೆಂಟ್​ಗಳಿಗೆ ಸಾಕಷ್ಟು ಮೆಮೊರಿ ಲಭ್ಯವಾಗುತ್ತದೆ. ಈ ಸಾಧನವು 17.22 ಸೆಂ.ಮೀ (6.78-ಇಂಚಿನ) ಎಫ್ಎಚ್​ಡಿ+ ಐಪಿಎಸ್ ಡಿಸ್​ಪ್ಲೇ ಜೊತೆಗೆ 120 ಹರ್ಟ್ಜ್ ರಿಫ್ರೆಶ್ ರೇಟ್ ಮತ್ತು ವೈಡ್​ವೈನ್ ಎಲ್ 1 (Widevine L1) ಬೆಂಬಲವನ್ನು ಹೊಂದಿದೆ. ಇದು ಗೇಮ್ ಆಡುವಾಗ ಅಥವಾ ವಿಡಿಯೋಗಳನ್ನು ನೋಡುವಾಗ ಸ್ಫಟಿಕ ಸ್ಪಷ್ಟ ಮತ್ತು ತಡೆಯಿಲ್ಲದ ವೀಕ್ಷಣೆ ಅನುಭವ ನೀಡುತ್ತದೆ.

ಈ ಸ್ಮಾರ್ಟ್​ಫೋನ್ ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ ಹಾಗೂ 50 ಎಂಪಿ ಜೊತೆಗೆ 8 ಎಂಪಿ ಅಲ್ಟ್ರಾ ವೈಡ್ ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು ಉತ್ತಮ ಛಾಯಾಗ್ರಹಣ ಅನುಭವ ಮತ್ತು ಸೆಲ್ಫಿಗಳಿಗಾಗಿ 16 ಎಂಪಿ ಮುಂಭಾಗದ ಕ್ಯಾಮೆರಾ ಹೊಂದಿದೆ. ಇದು ತಡೆರಹಿತ ದೈನಂದಿನ ಬಳಕೆಗಾಗಿ ದೀರ್ಘಾವಧಿ ಬಾಳಿಕೆ ಬರುವ 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ.

ಇದನ್ನೂ ಓದಿ : ಕಾಪಿರೈಟ್ ಉಲ್ಲಂಘನೆ; ಅಮೆರಿಕದಲ್ಲಿ ಆ್ಯಪಲ್​ನ​ ಸ್ಮಾರ್ಟ್​ವಾಚ್ ಮಾರಾಟಕ್ಕೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.