ETV Bharat / science-and-technology

Kundali GPT: ಇದು ಜಾತಕ ನೋಡಿ ಭವಿಷ್ಯ ಹೇಳುವ ಎಐ ಚಾಟ್​ಬಾಟ್​; ಬಳಸುವುದು ಹೇಗೆ? - Kundali GPT an AI chatbot

ಚಿತ್ರ ಬರೆಯುವ, ವೀಡಿಯೊ ಸೃಷ್ಟಿಸುವ, ಸಂಗೀತ ಕೇಳಿಸುವ ಎಐ ಚಾಟ್​ ಬಾಟ್​ಗಳ ನಂತರ ಈಗ ಜ್ಯೋತಿಷ್ಯ ಹೇಳುವ ಎಐ ಚಾಟ್​ಬಾಟ್​ ಬಂದಿದೆ. ಇದು ನಿಮ್ಮ ಗ್ರಹಗತಿಗಳನ್ನು ಆಧರಿಸಿ ಭವಿಷ್ಯ ನುಡಿಯುತ್ತದೆ.

AI becomes astrologer
AI becomes astrologer
author img

By

Published : Aug 3, 2023, 6:32 PM IST

ಬೆಂಗಳೂರು : ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ನಮ್ಮ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದೆ. ಬಹುತೇಕ ಪ್ರತಿಯೊಂದು ಕ್ಷೇತ್ರದ ಮೇಲೂ ಇದು ಪರಿಣಾಮ ಬೀರುತ್ತದೆ. ಇದು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಕೋಡಿಂಗ್‌ ಮಾಡಲು ಸಹಾಯ ಮಾಡುತ್ತದೆ, ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ಗಳಲ್ಲಿ ಸಹಾಯ ಮಾಡುತ್ತದೆ ಮತ್ತು ಅಡುಗೆ ಮಾಡಲು ಬಾಣಸಿಗರಿಗೆ ಸಹ ಸಹಾಯ ಮಾಡುತ್ತದೆ. ಆದರೆ ಇಷ್ಟೇ ಅಲ್ಲ, ಜನರೇಟಿವ್ AI ಈಗ ಜ್ಯೋತಿಷಿಯ ಪಾತ್ರವನ್ನೂ ನಿಭಾಯಿಸುತ್ತಿದೆ. ಜನರು ತಮ್ಮ ಜಾತಕವನ್ನು ತಿಳಿಯಲು ಹಾಗೂ ಅವರ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಅರಿಯಲು ಈಗ ಎಐ ಜ್ಯೋತಿಷಿ ಸಹಾಯ ಮಾಡಲಿದೆ.

NIT-ಸೂರತ್​ನ ಹಳೆಯ ವಿದ್ಯಾರ್ಥಿಯಾದ ರಾಜ್ ಸುತಾರಿಯಾ ಹೊಸ AI-ಚಾಲಿತ ವೈದಿಕ ಜ್ಯೋತಿಷ್ಯ ಚಾಟ್‌ಬಾಟ್ ವೆಬ್‌ಸೈಟ್-ಕುಂಡಲಿ GPT (Kundali GPT) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೆಬ್‌ಸೈಟ್ ಪರ್ಸನಲೈಸ್ಡ್​ ಜ್ಯೋತಿಷ್ಯವನ್ನು ಓದುತ್ತದೆ ಮತ್ತು ಕುಂಡಲಿಯನ್ನು ಆಧರಿಸಿ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಜನರು ತಮ್ಮ ಜಾತಕ ಮತ್ತು ಭವಿಷ್ಯದ ಬಗ್ಗೆ ಒಳನೋಟಗಳನ್ನು ಹುಡುಕಲು ಸಹಾಯ ಮಾಡುತ್ತದೆ.

ಕಂಪನಿಯ ಪ್ರಕಾರ, AI-ಚಾಲಿತ ಚಾಟ್‌ಬಾಟ್ ನಿಮ್ಮ ಕುಂಡಲಿಯ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತದೆ ಮತ್ತು ಅದರಲ್ಲಿನ ನಕಾರಾತ್ಮಕ ಪ್ರಭಾವಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಲ್ಲದೆ ಅದಕ್ಕೆ ಅನುಗುಣವಾಗಿ ಪರಿಹಾರಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದು ಸುಧಾರಿತ AI ತಂತ್ರಜ್ಞಾನವನ್ನು ಬಳಸಿಕೊಂಡು, ನಿಖರವಾದ ಉತ್ತರಗಳನ್ನು ಖಾತ್ರಿಪಡಿಸುವ ಮೂಲಕ ನಿಮ್ಮ ಗ್ರಹಗಳ ಸ್ಥಾನವನ್ನು ಆಧರಿಸಿ ನಿಮ್ಮ ಆರೋಗ್ಯ ಮತ್ತು ಹಣಕಾಸಿನ ಮಾರ್ಗದರ್ಶನಗಳನ್ನು ನೀಡುತ್ತದೆ. ಒಟ್ಟಾರೆಯಾಗಿ ಈ AI ಚಾಟ್‌ಬಾಟ್ ಸಾಮಾನ್ಯ ಜ್ಯೋತಿಷಿಯಂತೆ ಸಂಕ್ಷಿಪ್ತ ಕುಂಡಲಿಯನ್ನು ನಿಮ್ಮ ಮುಂದೆ ಓದುತ್ತದೆ.

"ನಿಮ್ಮ ವೃತ್ತಿ ಮತ್ತು ವೃತ್ತಿಪರ ಜೀವನದ ಬಗ್ಗೆ ನಿಮಗೆ ಕುತೂಹಲವಿದ್ದರೆ, ನಮ್ಮ ಚಾಟ್‌ಬಾಟ್ ನಿಮ್ಮ ಕುಂಡಲಿಯಲ್ಲಿನ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಸಂಭಾವ್ಯ ಅವಕಾಶಗಳು ಮತ್ತು ಕಷ್ಟಗಳ ಮಾಹಿತಿಯನ್ನು ನೀಡುತ್ತದೆ. ನಿಮ್ಮ ಮದುವೆ ಮತ್ತು ಕೌಟುಂಬಿಕ ಜೀವನದ ಬಗ್ಗೆ ನೀವು ಚಿಂತಿತರಾಗಿದ್ದರೆ ನಮ್ಮ ಚಾಟ್‌ಬಾಟ್ ಭವಿಷ್ಯವಾಣಿಗಳನ್ನು ನುಡಿಯುತ್ತದೆ ಮತ್ತು ಸಂಭಾವ್ಯ ಅಡೆತಡೆಗಳನ್ನು ಹೇಗೆ ನಿವಾರಿಸುವುದು ಅಥವಾ ಧನಾತ್ಮಕ ಪ್ರಭಾವಗಳನ್ನು ಹೆಚ್ಚಿಸುವುದು ಹೇಗೆ ಎಂಬುದರ ಕುರಿತು ಸಲಹೆ ನೀಡುತ್ತದೆ" ಎಂದು ಕುಂಡಲಿ GPT AI ವೆಬ್​ಸೈಟ್​ನಲ್ಲಿ ತನ್ನ ಬಗ್ಗೆ ಹೇಳಿಕೊಂಡಿದೆ. ಆದಾಗ್ಯೂ, ಕುಂಡಲಿ GPT ಸದ್ಯಕ್ಕೆ ಒಂದು ಪ್ರಾಯೋಗಿಕ ಸಾಧನವಾಗಿದೆ ಮತ್ತು ಯಾವುದೇ ವಾಣಿಜ್ಯ ಬಳಕೆಗೆ ಇದನ್ನು ತಯಾರಿಸಲಾಗಿಲ್ಲ ಎಂದು ಕಂಪನಿ ತಿಳಿಸಿದೆ.

ಕುಂಡಲಿ GPT ಬಳಸುವುದು ಹೇಗೆ:

kundligpt ಡಾಟ್​ com/ ನಲ್ಲಿ ಕುಂಡಲಿ GPT AI ವೆಬ್‌ಸೈಟ್‌ಗೆ ಭೇಟಿ ನೀಡಿ.

ಮುಂದೆ, ನಿಮ್ಮ ಭಾಷೆಯನ್ನು ಆಯ್ಕೆಮಾಡಿ. ಚಾಟ್‌ಬಾಟ್ ಪ್ರಸ್ತುತ ಇಂಗ್ಲಿಷ್, ಹಿಂದಿ, ಮರಾಠಿ, ಬಾಂಗ್ಲಾ ಮತ್ತು ಇತರವುಗಳನ್ನು ಒಳಗೊಂಡಂತೆ ಸುಮಾರು 12 ಭಾಷೆಗಳನ್ನು ಬೆಂಬಲಿಸುತ್ತದೆ.

ಕುಂಡಲಿ ಓದುವಿಕೆಯನ್ನು ಪಡೆಯಲು, ಚಾಟ್‌ಬಾಟ್ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕ ಸೇರಿದಂತೆ ಹೆಚ್ಚುವರಿ ವಿವರಗಳನ್ನು ಕೇಳುತ್ತದೆ. ಅಲ್ಲದೆ ಲೊಕೇಶನ್ ಮಾಹಿತಿಯನ್ನು ಕೇಳುತ್ತದೆ.

ಮಾಹಿತಿಯನ್ನು ತುಂಬಿ "Submit" ಬಟನ್ ಕ್ಲಿಕ್ ಮಾಡಿ. ಅಗತ್ಯವಿರುವ ಎಲ್ಲಾ ವಿವರಗಳನ್ನು ನೀಡಿದ ನಂತರ ನಿಮ್ಮ ವಿದ್ಯಾಭ್ಯಾಸ, ಪ್ರೀತಿಯ ಜೀವನ ಮತ್ತು ಜೀವನದ ಇತರ ಅಂಶಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ನೀವು ಕೇಳಬಹುದು.

ಇದನ್ನೂ ಓದಿ : Meta AudioCraft: ಇದು ಪಠ್ಯದಿಂದ ಸುಮಧುರ ಸಂಗೀತ ಸೃಷ್ಟಿಸುವ AI ಚಾಟ್​ಬಾಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.