ETV Bharat / science-and-technology

ಗುರು ಗ್ರಹದ ಸುತ್ತ 12 ಹೊಸ ಚಂದ್ರ ಪತ್ತೆ; 92ಕ್ಕೇರಿದ ಸಂಖ್ಯೆ

ಸೌರಮಂಡಲದಲ್ಲೇ ಅತಿ ಹೆಚ್ಚು ಚಂದ್ರನನ್ನು ಹೊಂದಿರುವ ಖ್ಯಾತಿ ಇದೀಗ ಗುರು ಗ್ರಹಕ್ಕೆ ಇದೆ. ಈ ಹಿಂದೆ ಶನಿ 83 ಚಂದ್ರ ಹೊಂದಿತ್ತು.

Jupiter's moon count jumps to 92, most in solar system
ಗುರು ಗ್ರಹದ ಸುತ್ತ 12 ಹೊಸ ಚಂದ್ರ ಪತ್ತೆ; 92ಕ್ಕೇರಿದ ಸಂಖ್ಯೆ
author img

By

Published : Feb 4, 2023, 12:37 PM IST

ಫ್ಲೋರಿಡಾ: ಸೌರ ಮಂಡಲದ ಬೃಹತ್​​ ಗ್ರಹವಾದ ಗುರುವಿನ ಸುತ್ತ ಮತ್ತೆ ಹೊಸ 12 ಚಂದ್ರನನ್ನು ಖಗೋಳಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಈ ಮೂಲಕ ಈ ಹಿಂದೆ ಗುರು ಗ್ರಹದ ಸುತ್ತಲೂ ಇರುವ ಚಂದ್ರನ ಸಂಖ್ಯೆಗಳ ದಾಖಲೆ ಮುರಿದಿದ್ದು, ಇದೀಗ ಗುರು ಹೊಂದಿರುವ ಒಟ್ಟಾರೆ ಚಂದ್ರನ ಸಂಖ್ಯೆ 92ಕ್ಕೆ ಏರಿದೆ.

ಈ ಮೂಲಕ ಸೌರ ಮಂಡಲದಲ್ಲೇ ಅಧಿಕ ಚಂದ್ರನನ್ನು ಹೊಂದಿರುವ ಕೀರ್ತಿಗೆ ಇದೀಗ ಗುರು ಪಾತ್ರವಾಗಿದೆ. ಈ ಹಿಂದೆ ಸೌರಮಂಡಲದ ಶನಿಗ್ರಹದ ಸುತ್ತಲೂ 83 ಚಂದ್ರ ಇರುವುದು ದೃಢಪಡುವ ಮೂಲಕ ಅತಿ ಹೆಚ್ಚು ಚಂದ್ರನನ್ನು ಹೊಂದಿರುವ ದಾಖಲೆ ಇದು ಹೊಂದಿತ್ತು. ಇದೀಗ ಆ ದಾಖಲೆ ಗುರುವಿನ ಪಾಲಾಗಿದೆ. ಇನ್ನು ಗುರು ಗ್ರಹದ ಸುತ್ತಲೂ ಹೊಂದಿರುವ ಚಂದ್ರನ ಸಂಖ್ಯೆಗಳ ಪಟ್ಟಿಗೆ ಈಗ ಮತ್ತೆ ಹೊಸ ಸಂಖ್ಯೆಗಳನ್ನು ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್‌ನ ಮೈನರ್ ಪ್ಲಾನೆಟ್ ಸೆಂಟರ್ ಸೇರಿಸಿದೆ ಎಂದು ಕಾರ್ನೆಗೀ ಸಂಸ್ಥೆಯ ಖಗೋಳ ಅಧ್ಯಯನಕಾರರಾದ ಸ್ಕಾಟ್ ಶೆಪರ್ಡ್ ತಿಳಿಸಿದ್ದಾರೆ.

2021 ಮತ್ತು 2022ರಲ್ಲಿ ಹವಾಲಿ ಮತ್ತು ಚಿಲಿಯಲ್ಲಿ ಟೆಲಿಸ್ಕೋಪ್​ ಬಳಕೆ ಮಾಡಿ ಈ ಅವಿಷ್ಕಾರ ಮಾಡಲಾಗಿದೆ. ಗುರುವಿನ ಕಕ್ಷೆಯನ್ನು ಚಂದ್ರ ಅನುಸರಿಸುತ್ತಿರುವುದು ದೃಢವಾಗಿದೆ. ಈ ಹೊಸ ಚಂದ್ರನ ಗಾತ್ರದ ವ್ಯಾಪ್ತಿ 0.6ಇಂದ 2 ಮೈಲಿ ಇದೆ ಎಂದು ಶೆಪಾರ್ಡ್​ ತಿಳಿಸಿದ್ದಾರೆ.

ಗುರುವಿನ ಹೆಚ್ಚಿನ ಅಧ್ಯಯನಕ್ಕೆ ಏಪ್ರಿಲ್‌ನಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗುರುಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುತ್ತಿದೆ. ಈ ಮೂಲಕ ಗುರುವಿನು ದೊಡ್ಡ, ಹಿಮಾವೃತ ಚಂದ್ರಗಳನ್ನು ಅಧ್ಯಯನಕ್ಕೆ ಮುಂದಾಗಿದೆ. ಮುಂದಿನ ವರ್ಷ ನಾಸಾ ಕೂಡ ಯುರೋಪಾ ಕ್ಲಿಪ್ಪರ್ ಅನ್ನು ಗುರುಗ್ರಹದ ಚಂದ್ರನನ್ನು ಅನ್ವೇಷಿಸಲು ಮುಂದಾಗಲಿದೆ. ಈ ಅಧ್ಯಯನದ ಭಾಗವಾಗಿರುವ ಶೆಪಾರ್ಡ್​ ಅವರು ಕೆಲವು ವರ್ಷಗಳ ಹಿಂದೆ ಶನಿಗ್ರಹದ ಸುತ್ತ ಉಪಗ್ರಹಗಳನ್ನು ಕಂಡುಹಿಡಿದರು. ಗುರುಗ್ರಹದ ಸುತ್ತ 70 ಚಂದ್ರನ ಆವಿಷ್ಕಾರ ಮಾಡಿದರು.

ಗುರು ಮತ್ತು ಶನಿ ಗ್ರಹ ಸಣ್ಣ ಸಣ್ಣ ಚಂದ್ರನಿಂದ ಕೂಡಿದ್ದು. ಇವೆಲ್ಲಾ ಈ ಹಿಂದೆ ದೊಡ್ಡ ಚಂದ್ರನಾಗಿದ್ದು, ಅವು ಡಿಕ್ಕಿ ಹೊಡೆದ ಸಣ್ಣ ಸಣ್ಣ ಚಂದ್ರನಾಗಿರಬಹುದು. ಇಲ್ಲ ಇವು ಕ್ಷುದ್ರ ಅಥವಾ ಧೂಮಕೇತುಗಳು ಆಗಿರಬಹುದು ಎಂದು ಶೆಪಾರ್ಡ್​ ತಿಳಿಸಿದ್ದಾರೆ. ಇದೇ ರೀತಿ ಶನಿ ಯುರೋನಸ್​ ನೆಪ್ಛೂನ್​ ಸುತ್ತಲೂ ಇರುವ ಉಪಗ್ರಹಗಳಾಗಿದೆ. ಈ ಎರಡೂ ಗ್ರಹಗಳು ಸೌರ ಮಂಡಲದಿಂದ ತುಂಬಾ ದೂರ ಇರುವ ಹಿನ್ನಲೆ ಇವುಗಳ ಕುರಿತ ಅಧ್ಯಯನ ಕಷ್ಟವಾಗಲಿದೆ. ಯುರೋನಸ್​ 27 ಮತ್ತು ನೆಪ್ಚೂನ್​ 12 ಚಂದ್ರನನ್ನು ಹೊಂದಿರುವುದು ದೃಢವಾಗಿದೆ. ಮಂಗಳ ಎರಡು, ಭೂಮಿ ಒಂದು ಚಂದ್ರನನ್ನು ಹೊಂದಿದ್ದರೆ, ಶುಕ್ರ ಮತ್ತು ಬುಧ ಯಾವುದೇ ಚಂದ್ರನನ್ನು ಹೊಂದಿಲ್ಲ. ಗುರುವಿನ ಸುತ್ತಲೂ ಹೊಸದಾಗಿ ಚಂದ್ರ ಪತ್ತೆಯಾಗಿದ್ದು, ಅದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಂದ್ರನ ಗಾತ್ರದ ವ್ಯಾಪ್ತಿ ಕನಿಷ್ಠ 1 ಮೈಲಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದಕ್ಕೆ ಹೆಸರಿಡಬಹುದು ಎನ್ನುತ್ತಾರೆ ಶೆಪಾರ್ಡ್​.

ಇದನ್ನೂ ಓದಿ: 2 ತಿಂಗಳು ಶ್ರಮಿಸಿ ಅಲೆಕ್ಸಾ ಮಾದರಿಯ ರೋಬೋಟ್​ ಆವಿಷ್ಕರಿಸಿದ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.