ETV Bharat / science-and-technology

ಇಸ್ರೊದ NVS-01 ನ್ಯಾವಿಗೇಷನ್ ಉಪಗ್ರಹ ಮೇ 29ರಂದು ಉಡಾವಣೆ

NVS-01 ನ್ಯಾವಿಗೇಷನ್ ಉಪಗ್ರಹವನ್ನು ಇಸ್ರೊ ಮೇ 29 ರಂದು ಉಡಾವಣೆ ಮಾಡಲಿದೆ. ಇದರಲ್ಲಿ ಭಾರತದಲ್ಲಿಯೇ ತಯಾರಿಸಲಾದ ಪರಮಾಣು ಗಡಿಯಾರವನ್ನು ಅಳವಡಿಸುತ್ತಿರುವುದು ವಿಶೇಷವಾಗಿದೆ.

ISRO to launch navigation satellite with domestic atomic clock on May 29

author img

By

Published : May 23, 2023, 2:24 PM IST

ಚೆನ್ನೈ : ಭಾರತವು ತನ್ನ ಮೊದಲ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹವನ್ನು ಮೇ 29 ರಂದು ಬೆಳಗ್ಗೆ ತನ್ನ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ರಾಕೆಟ್ ಬಳಸಿ ಉಡಾವಣೆ ಮಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಿಳಿಸಿದೆ. ಮೊದಲ ಬಾರಿಗೆ ನ್ಯಾವಿಗೇಷನ್ ಉಪಗ್ರಹ NVS-01 ನಲ್ಲಿ ಭಾರತದಲ್ಲಿಯೇ ತಯಾರಿಸಲಾದ ಪರಮಾಣು ಗಡಿಯಾರವನ್ನು ಸಹ ಅಳವಡಿಸಿ ಕಳುಹಿಸಲಾಗುತ್ತಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹೇಳಿಕೆಯ ಪ್ರಕಾರ- 2,232 ಕೆಜಿ ತೂಕದ NVS-01 ನ್ಯಾವಿಗೇಷನ್ ಉಪಗ್ರಹವನ್ನು ಹೊತ್ತ ರಾಕೆಟ್ GSLV-F12 ಆಂಧ್ರಪ್ರದೇಶದ ಶ್ರೀಹರಿಕೋಟಾ ರಾಕೆಟ್ ಬಂದರಿನಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಬೆಳಗ್ಗೆ 10.42 ಕ್ಕೆ ಉಡಾವಣೆಯಾಗಲಿದೆ. ರಾಕೆಟ್ ಉಪಗ್ರಹವನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ (ಜಿಟಿಒ) ತಲುಪಿಸುತ್ತದೆ. ಅಲ್ಲಿಂದ ಆನ್‌ಬೋರ್ಡ್ ಮೋಟಾರ್‌ಗಳನ್ನು ಹಾರಿಸುವ ಮೂಲಕ ಅದನ್ನು ಮತ್ತಷ್ಟು ಮೇಲಕ್ಕೇರಿಸಲಾಗುತ್ತದೆ.

ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟೆಲೇಷನ್ (ನಾವಿಕ್) ಸೇವೆಗಳಿಗಾಗಿ ತಯಾರಿಸಲಾದ ಎರಡನೇ ತಲೆಮಾರಿನ ಉಪಗ್ರಹಗಳಲ್ಲಿ NVS-01 ಮೊದಲನೆಯದು ಎಂದು ISRO ಹೇಳಿದೆ. NVS ಸರಣಿಯ ಉಪಗ್ರಹಗಳು NavIC ನ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಸರಣಿಯು ಸೇವೆಗಳನ್ನು ವಿಸ್ತರಿಸಲು ಹೆಚ್ಚುವರಿಯಾಗಿ L1 ಬ್ಯಾಂಡ್ ಸಂಕೇತಗಳನ್ನು ಸಂಯೋಜಿಸುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ಹಿಂದೆ ಉಡಾವಣೆ ಮಾಡಿದ್ದ ಎಲ್ಲಾ ಒಂಬತ್ತು ನ್ಯಾವಿಗೇಷನ್ ಉಪಗ್ರಹಗಳಲ್ಲಿ ಆಮದು ಮಾಡಿಕೊಂಡ ಪರಮಾಣು ಗಡಿಯಾರಗಳನ್ನು ಬಳಸಿತ್ತು. ಪ್ರತಿ ಉಪಗ್ರಹವು ಮೂರು ಪರಮಾಣು ಗಡಿಯಾರಗಳನ್ನು ಹೊಂದಿತ್ತು.

ಮೊದಲ ಉಪಗ್ರಹವಾದ IRNSS-1A ಯಲ್ಲಿನ ಮೂರು ಗಡಿಯಾರಗಳು ವಿಫಲವಾಗುವವರೆಗೂ NavIC ಉಪಗ್ರಹಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಲಾಗಿದೆ. ಕೆಲವು ಪರಮಾಣು ಗಡಿಯಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಸ್ರೋ ಮೂಲಗಳು ಈ ಹಿಂದೆ ತಿಳಿಸಿದ್ದವು. ಗಡಿಯಾರಗಳನ್ನು ನಿಖರವಾದ ಸಮಯ ಮತ್ತು ಸ್ಥಳದ ಗುರುತಿಗಾಗಿ ಬಳಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, NavIC ಅಥವಾ ಹಿಂದಿನ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್), ರಷ್ಯಾದ ಗ್ಲೋನಾಸ್ ಮತ್ತು ಯುರೋಪ್ನ ಗೆಲಿಲಿಯೋ ಮತ್ತು ಚೀನಾದ ಬೀಡೌಗೆ ಹೋಲುತ್ತದೆ.

ನಾವಿಕ್ ಬಗ್ಗೆ ಒಂದಿಷ್ಟು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) NavIC ಎಂಬ ಭಾರತದ ಸ್ವಂತ ನ್ಯಾವಿಗೇಷನ್ ಸಿಸ್ಟಮ್ ಅನ್ನು ಪ್ರಾರಂಭಿಸಿದೆ. ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಇದನ್ನು ಅಧಿಕೃತವಾಗಿ NAVIC ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮತ್ತು ಭಾರತದ ಮುಖ್ಯ ಭೂಭಾಗದ ಸುತ್ತಲೂ ನಿಖರವಾದ ಲೊಕೇಶನ್ ಒದಗಿಸಲು ಇಸ್ರೊನಿಂದ ಭಾರತದಲ್ಲಿ ಪ್ರಾದೇಶಿಕ ಭೌಗೋಳಿಕ ಸ್ಥಾನೀಕರಣ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

NAVIC GPS ಅಪ್ಲಿಕೇಶನ್ ಮೂಲಭೂತವಾಗಿ ಎರಡು ರೀತಿಯ ಸೇವೆಗಳನ್ನು ಒದಗಿಸುತ್ತದೆ: 1. ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆ (SPS) - ಇದನ್ನು ಎಲ್ಲಾ ಬಳಕೆದಾರರಿಗೆ ಒದಗಿಸಲಾಗಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸುಲಭಗೊಳಿಸುತ್ತದೆ ಮತ್ತು ನ್ಯಾವಿಗೇಷನ್-ಆಧಾರಿತ ಅಪ್ಲಿಕೇಶನ್‌ಗಳಿಗಾಗಿ IRNSS ಸಂಕೇತಗಳ ವಾಣಿಜ್ಯ ಬಳಕೆಗೆ ಸಹಾಯ ಮಾಡುತ್ತದೆ.

2. ನಿರ್ಬಂಧಿತ ಸೇವೆ (RS) - ಇದು ಅಧಿಕೃತ ಬಳಕೆದಾರರು ಮಾತ್ರ ಬಳಸಬಹುದಾದ ಎನ್‌ಕ್ರಿಪ್ಟ್ ಮಾಡಿದ ಸೇವೆಯಾಗಿದೆ. ಈ IRNSS ವ್ಯವಸ್ಥೆಯು ಪ್ರಾಥಮಿಕ ಸೇವಾ ಪ್ರದೇಶದಲ್ಲಿ 20 m ಗಿಂತ ಉತ್ತಮವಾದ ಲೊಕೇಶನ್ ನಿಖರತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ : ದೇಶಾದ್ಯಂತ 2,000ದ ನೋಟು ಬದಲಾವಣೆ ಆರಂಭ: ಮೊದಲ ದಿನ ಕಾಣದ ಜನಜಂಗುಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.