ಶ್ರೀಹರಿಕೋಟಾ (ಆಂಧ್ರಪ್ರದೇಶ) : ಚಂದ್ರ, ಮಂಗಳ, ಸೂರ್ಯನ ಅಧ್ಯಯನ ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಮಹತ್ವದ ಯಾನಕ್ಕೆ ಅಣಿಯಾಗಿದೆ. 2024 ರ ಜನವರಿ 1 ರಂದೇ ಈ ಉಪಗ್ರಹವನ್ನು ಉಡಾಯಿಸಲಿದೆ. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ಗಳ ಬೆಳಕಿನ ಮೇಲೆ ಇದು ಅಧ್ಯಯಯನ ನಡೆಸಲಿದೆ.
ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಮೂಲಕ ಸೋಮವಾರ ಬೆಳಗ್ಗೆ 9.10 ನಿಮಿಷಕ್ಕೆ ಸರಿಯಾಗಿ ಮೊದಲ ಎಕ್ಸ್ರೇ ಪೋಲಾರಿಮೀಟರ್ ಉಪಗ್ರಹ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲಾಗುತ್ತದೆ. ಇದು ಭಾರತದ ಬಾಹ್ಯಾಕಾಶ ಯಾನದಲ್ಲಿ ಮೈಲಿಗಲ್ಲಾಗಲಿದೆ ಎಂದು ಹೇಳಿದೆ.
ಅಕ್ಟೋಬರ್‌ನಲ್ಲಿ ಗಗನಯಾನ ಪರೀಕ್ಷಾ ಡಿ1 ಮಿಷನ್ ಯಶಸ್ವಿಯಾದ ನಂತರದ ಉಡಾವಣೆ ಇದಾಗಿದೆ. PSLV-C58 ರಾಕೆಟ್ನಿಂದ ಈವರೆಗೆ ನಡೆಸಲಾಗುತ್ತಿರುವ 60ನೇ ಉಡಾವಣೆಯಾಗಿದೆ. ಇದರಲ್ಲಿ ಎರಡು ಪೆಲೋಡ್ಗಳಿದ್ದು ಮತ್ತು 10 ಇತರ ಉಪಗ್ರಹಗಳನ್ನು ಭೂಮಿಯ ಕಡಿಮೆ ಕಕ್ಷೆಗಳಲ್ಲಿ ಇವುಗಳನ್ನು ನಿಯೋಜಿಸಲಾಗುತ್ತದೆ.
-
🚀 PSLV-C58/ 🛰️ XPoSat Mission:
— ISRO (@isro) December 31, 2023 " class="align-text-top noRightClick twitterSection" data="
The launch of the X-Ray Polarimeter Satellite (XPoSat) is set for January 1, 2024, at 09:10 Hrs. IST from the first launch-pad, SDSC-SHAR, Sriharikota.https://t.co/gWMWX8N6Iv
The launch can be viewed LIVE
from 08:40 Hrs. IST on
YouTube:… pic.twitter.com/g4tUArJ0Ea
">🚀 PSLV-C58/ 🛰️ XPoSat Mission:
— ISRO (@isro) December 31, 2023
The launch of the X-Ray Polarimeter Satellite (XPoSat) is set for January 1, 2024, at 09:10 Hrs. IST from the first launch-pad, SDSC-SHAR, Sriharikota.https://t.co/gWMWX8N6Iv
The launch can be viewed LIVE
from 08:40 Hrs. IST on
YouTube:… pic.twitter.com/g4tUArJ0Ea🚀 PSLV-C58/ 🛰️ XPoSat Mission:
— ISRO (@isro) December 31, 2023
The launch of the X-Ray Polarimeter Satellite (XPoSat) is set for January 1, 2024, at 09:10 Hrs. IST from the first launch-pad, SDSC-SHAR, Sriharikota.https://t.co/gWMWX8N6Iv
The launch can be viewed LIVE
from 08:40 Hrs. IST on
YouTube:… pic.twitter.com/g4tUArJ0Ea
ಮೊದಲ ಎಕ್ಸ್ಪೋಸ್ಯಾಟ್ ಉಪಗ್ರಹ: ಇಸ್ರೋ ಉಡಾವಣೆ ಮಾಡುತ್ತಿರುವ ಎಕ್ಸ್ರೇ ಪೋಲಾರಿಮೀಟರ್ ಉಪಗ್ರಹವು (XPoSat) ಮೊದಲ ಬೆಳಕಿನ ಯೋಜನೆಯಾಗಿದೆ. ಅಲ್ಲದೇ, ಅಮೆರಿಕದ ಬಳಿಕ ನಡೆಸುತ್ತಿರುವ ಎರಡನೇ ಯೋಜನೆಯಾಗಿದೆ. ಇದು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್ರೇ ಮೂಲಗಳ ಧ್ರುವೀಕರಣವನ್ನು ಸಂಶೋಧನೆ ಮಾಡುವ ಗುರಿಯನ್ನು ಹೊಂದಿದೆ. ಆಕಾಶ ಮೂಲಗಳಿಂದ ಎಕ್ಸ್-ರೇ ಬೆಳಕು ಹೊರಸೂಸುವಿಕೆಯ ಮೇಲೆ ಸಂಶೋಧನೆಯನ್ನು ಕೈಗೊಳ್ಳಲು ಬಳಸುತ್ತಿರುವ ವೈಜ್ಞಾನಿಕ ಉಪಗ್ರಹವಾಗಿದೆ ಎಂದು ಇಸ್ರೋ ತಿಳಿಸಿದೆ.
ಅಮೆರಿಕದ ನಾಸಾ ಈ ಮೊದಲು ಇದೇ ರೀತಿಯ ಅಧ್ಯಯನವನ್ನು ನಡೆಸಿತು. ಇಮೇಜಿಂಗ್ ಎಕ್ಸ್-ರೇ ಪೋಲಾರಿಮೆಟ್ರಿ ಎಕ್ಸ್‌ಪ್ಲೋರರ್ ಮಿಷನ್ ಅನ್ನು 2021 ರಲ್ಲಿ ನಡೆಸಿತು. ಸೂಪರ್ನೋವಾ ಸ್ಫೋಟಗಳ ಅವಶೇಷಗಳು, ಕಪ್ಪು ಕುಳಿಗಳು ಮತ್ತು ಇತರ ಕಾಸ್ಮಿಕ್ ಘಟನೆಗಳಿಂದ ಹೊರಸೂಸಲ್ಪಟ್ಟ ಕಣಗಳ ಸ್ಟ್ರೀಮ್‌ಗಳ ಮೇಲೆ ಅದು ಅಧ್ಯಯನ ನಡೆಸುತ್ತಿದೆ.
5 ವರ್ಷ ಮಾಹಿತಿ ಸಂಗ್ರಹ: Xposat ಬಾಹ್ಯಾಕಾಶದಲ್ಲಿನ ಪ್ರಕಾಶಮಾನವಾದ ನಕ್ಷತ್ರಗಳನ್ನು ಪ್ರಮುಖವಾಗಿ ಅಧ್ಯಯನ ಮಾಡಲಿದೆ. 5 ವರ್ಷಗಳ ಕಾಲ ಈ ಮಿಷನ್ ಮೂಲಕ ಡೇಟಾವನ್ನು ಸಂಗ್ರಹಣೆ ಮಾಡಲಾಗುತ್ತದೆ. ಬಾಹ್ಯಾಕಾಶದಲ್ಲಿ ಎಕ್ಸ್ರೇ ಪೋಲಾರಿಮೆಟ್ರಿ ಹೇಗೆ ಕೆಲಸ ಮಾಡುತ್ತದೆ. ಬೆಳಕು ಎಲ್ಲಿಂದ ಬರುತ್ತದೆ ಮತ್ತು ಅದರ ಶಕ್ತಿಯ ಮೂಲ ಯಾವುದು ಎಂಬುದರ ಬಗ್ಗೆ ಸಂಶೋಧನೆಯಲ್ಲಿ ತಿಳಿದುಬರಲಿದೆ.
ಇದನ್ನೂ ಓದಿ: ಬಾಹ್ಯಾಕಾಶ ಆರ್ಥಿಕತೆ: ಭಾರತಕ್ಕೆ ಆಕಾಶದಷ್ಟು ಅವಕಾಶ