ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ (ಎಫ್‌ಟಿಎಸ್) ತಂತ್ರಜ್ಞಾನವನ್ನು ಶುಕ್ರವಾರ ರಾಕೆಟ್ ಸ್ಟಾರ್ಟ್ಅಪ್ ಕಂಪನಿಯಾಗಿರುವ ಅಗ್ನಿಕುಲ್ ಕಾಸ್ಮೋಸ್‌ಗೆ ನೀಡಿದೆ ಎಂದು ಹೇಳಿದೆ. ಸರಳವಾಗಿ ಹೇಳುವುದಾದರೆ, FTS ಎಂಬುದು ರಾಕೆಟ್‌ನಲ್ಲಿ ಅಳವಡಿಸಲಾದ ಸ್ವಯಂ ನಾಶದ ಕಾರ್ಯವಿಧಾನವಾಗಿದೆ. ರಾಕೆಟ್ ತನ್ನ ಹಾರಾಟದ ಹಾದಿ ಬದಲಾಯಿಸಿ ನಾಗರಿಕ ಪ್ರದೇಶಗಳಿಗೆ ಪ್ರವೇಶಿಸಿದಾಗ ಅಥವಾ ಅಪಾಯಕಾರಿಯಾಗಿ ತಿರುಗಿದಾಗ ಎಫ್‌ಟಿಎಸ್ ನೆಲದ ಮೇಲಿಂದ ಸಕ್ರಿಯಗೊಳ್ಳುತ್ತದೆ.
ಇಸ್ರೊ ಪ್ರಕಾರ, ಎಫ್‌ಟಿಎಸ್ ಅನ್ನು ಸೋಮವಾರದಂದು ಅಗ್ನಿಕುಲ್ ಕಾಸ್ಮೊಸ್‌ಗೆ ನೀಡಲಾಯಿತು. ಕಂಪನಿಯ ರಾಕೆಟ್ ಅಗ್ನಿಬಾಣದಲ್ಲಿ ಈ ವ್ಯವಸ್ಥೆಗಳನ್ನು ಇಂಟರ್‌ಫೇಸ್ ಮಾಡುವುದು, ನಿರ್ವಹಿಸುವುದು ಮತ್ತು ಬಳಸುವ ಬಗ್ಗೆ ಅನೇಕ ಸುತ್ತಿನ ಸಂವಹನಗಳ ನಂತರ ಇದನ್ನು ಮಾಡಲಾಗಿದೆ. ಇಸ್ರೋದ ವಾಹನಗಳಿಗೆ ಬಳಸಲಾದ ವ್ಯವಸ್ಥೆಯನ್ನು ಭಾರತದಲ್ಲಿ ನಿರ್ಮಿಸಲಾದ ಖಾಸಗಿ ಉಡಾವಣಾ ವಾಹನ ಉಡಾವಣೆಗೆ ಬಳಸುವುದು ಇದು ಪ್ರಥಮ ಬಾರಿಯಾಗಿದೆ.
ಶ್ರೀಹರಿಕೋಟಾ ರಾಕೆಟ್ ಬಂದರಿನಿಂದ ಉಡಾವಣೆ ಮಾಡಲು ನಿಗದಿಪಡಿಸಲಾದ ಸಂಪೂರ್ಣ ನಿಯಂತ್ರಿತ ಉಪ - ಕಕ್ಷೆಯ ಲಾಂಚರ್‌ಗಾಗಿ ಪ್ಯಾಕೇಜ್ ಅನ್ನು ಬಳಸಲಾಗುವುದು ಎಂದು ಇಸ್ರೋ ಹೇಳಿದೆ. 2022 ರ ಅಂತ್ಯದ ಮೊದಲು ತಮ್ಮ ರಾಕೆಟ್ ಅಗ್ನಿಬಾಣದ ಮೊದಲ ಪರೀಕ್ಷಾ ಉಡಾವಣೆಯನ್ನು ಮಾಡಲು ಶ್ರಮಿಸಲಾಗುತ್ತಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಈ ಹಿಂದೆ ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೋದ 'ವ್ಯೋಮಮಿತ್ರ': ಮನುಷ್ಯನ ನೆರವಿಗೆ ಮಾನವರೂಪಿ ರೊಬೊಟ್ ತಯಾರಿ