ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುದ್ಧಿವಂತ ಕೃತಕ ಕಾಲನ್ನು ರೂಪಿಸಿದೆ. ಈ ಕೃತಕ ಕಾಲು ಶೀಘ್ರದಲ್ಲೇ ವಾಣಿಜ್ಯೀಕರಣಗೊಳ್ಳುವ ನಿರೀಕ್ಷೆಯಿದೆ. ಕೃತಕ ಕಾಲು ಲಭ್ಯವಿರುವ ಆಯ್ಕೆಗಳಿಗಿಂತ ಸುಮಾರು 10 ಪಟ್ಟು ಅಗ್ಗವಾಗಿದೆ ಎನ್ನುವುದು ಇನ್ನೂ ವಿಶೇಷ. ಇದು ಮೊಣಕಾಲಿನಿಂದ ಕೆಳಕ್ಕೆ ಇರುವ ಅಂಗಗಳನ್ನು ಕಳೆದುಕೊಂಡವರಿಗೆ ಭಾರಿ ಅನುಕೂಲ ಆಗಲಿದೆ. ಇಂತಹವರು ಆರಾಮದಾಯಕವಾದ ನಡಿಗೆಯೊಂದಿಗೆ ಎಲ್ಲರಂತೆ ಸಹಜವಾಗಿ ನಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಅಭಿವೃದ್ಧಿಪಡಿಸಿದ ಕೃತಕ ಕಾಲಿನ ಪ್ರಮುಖ ಐದು ಅಂಶಗಳು ಹೀಗಿವೆ.
1. ಈ ಸಂಬಂಧ ಟ್ವೀಟ್ ಮಾಡಿರುವ ಇಸ್ರೋ 1.6 ಕೆಜಿ ಮೈಕ್ರೊಪ್ರೊಸೆಸರ್-ನಿಯಂತ್ರಿತ ಮೊಣಕಾಲು (MPK) ಅಂಗವಿಕಲನಿಗೆ ಅತ್ಯಂತ ಕಡಿಮೆ ಸಹಾಯದೊಂದಿಗೆ 100 ಮೀಟರ್ ಕಾರಿಡಾರ್ನಲ್ಲಿ ಸರಾಗವಾಗಿ ನಡೆಯಲು ಅನುವು ಮಾಡಿಕೊಟ್ಟಿದೆ. ಎಲ್ಲರಂತೆ ಒಬ್ಬ ಅಂಗವಿಕಲ ನಡೆಯಲು ಸಾಧ್ಯವಾಗುವಷ್ಟರ ಮಟ್ಟಿಗೆ ಕೃತಕ ಕಾಲಿನ ಅಭಿವೃದ್ಧಿ ಮುಂದುವರೆಯಲಿದೆ. ಇನ್ನಷ್ಟು ಸುಧಾರಣೆಗಳು ಮುಂದುವರೆದಿವೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
2. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ISRO, ಈ MPK ಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಲೊಕೊಮೊಟರ್ ಡಿಸೆಬಿಲಿಟೀಸ್ (NILD), Pt. ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪರ್ಸನ್ಸ್ ವಿಥ್ ಫಿಸಿಕಲ್ ಡಿಸಾಬಿಲಿಟೀಸ್ (ದಿವ್ಯಾಂಗ್ ಜನ್) (PDUNIPPD (D)) ನೊಂದಿಗೆ ಸೇರಿಕೊಂಡು ಜಂಟಿ ಸಹಭಾಗಿತ್ವದಲ್ಲಿ ಈ ಕೃತಕ ಕಾಲನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಆರ್ಟಿಫಿಶಿಯಲ್ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO) ದೃಢಪಡಿಸಿದೆ.
3. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂದರೆ ಸಂವೇದಕ ಡೇಟಾವನ್ನು ಆಧರಿಸಿ, ಮೈಕ್ರೊಪ್ರೊಸೆಸರ್ ನಡಿಗೆಯ ಸ್ಥಿತಿಗತಿಯನ್ನು ಪತ್ತೆ ಮಾಡುತ್ತದೆ. ಒಬ್ಬರ ಸೌಕರ್ಯ ಸುಧಾರಿಸಲು ಪಿಸಿ ಆಧಾರಿತ ಸಾಫ್ಟ್‌ವೇರ್ ಬಳಸಿ ದಿವ್ಯಾಂಗರಿಗೆ ನಿರ್ದಿಷ್ಟವಾದ ವಾಕಿಂಗ್ ಪ್ಯಾರಾಮೀಟರ್‌ಗಳನ್ನು ಅಳವಡಿಸಬಹುದು. ಇಂಟರ್ಫೇಸ್ ವಾಕಿಂಗ್ ಸಮಯದಲ್ಲಿ ಎಲ್ಲರಂತೆ ಸಹಜ ನಡಿಗೆಯನ್ನು ಮಾಡಬಹುದಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.
ನಾಲ್ಕರಿಂದ 5 ಲಕ್ಷದಲ್ಲಿ ಕೃತಕ ಕಾಲು: 4. ಪ್ರಸ್ತುತ, ದೇಶದಲ್ಲಿ ಲಭ್ಯವಿರುವ MPK ಗಳು 10 ಲಕ್ಷದಿಂದ 60 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಆದರೆ ಇಸ್ರೋ ಅಭಿವೃದ್ಧಿ ಪಡಿಸಿರುವ ಈ ಕೃತಕ ಕಾಲುಗಳ ಬೆಲೆ ₹4-5 ಲಕ್ಷದ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
5. ದ್ರವ್ಯರಾಶಿ ಮತ್ತು ಹೊದಿಕೆ ಗಾತ್ರದ ವಿಷಯದಲ್ಲಿ MPK ಗಳ ಆಪ್ಟಿಮೈಸೇಷನ್ ನಡೆಯುತ್ತಿದೆ. ದಿವ್ಯಾಂಗರಿಗೆ ಹೆಚ್ಚಿನ ಸೌಕರ್ಯಕ್ಕಾಗಿ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಎಲ್ಲ ಕಾಲ ಹಾಗೂ ಹವಾಮಾನ ಮತ್ತು ಸಂದಿಗ್ದ ಭೂಪ್ರದೇಶಗಳಲ್ಲಿ ನಡೆಯಲು ಸಹಾಯ ಮಾಡುವಂತೆ ಜಾಣ್ಮೆಯ ಕೃತಕ ಕಾಲುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ISRO ಹೇಳಿದೆ.
ಇದನ್ನು ಓದಿ:ಬುಲೆಟ್ ಟ್ರೈನ್ಗಾಗಿ ಪ್ರಥಮ ಬಾರಿಗೆ ಸಮುದ್ರದಾಳದಲ್ಲಿ ಸುರಂಗ