ETV Bharat / science-and-technology

ISRO: ಖಾಸಗಿ ಕಂಪನಿಗಳಿಗೆ SSLV ರಾಕೆಟ್​ ತಂತ್ರಜ್ಞಾನ ನೀಡಲಿದೆ ಇಸ್ರೊ - ISRO decision to give SSLV rocket technology

ತನ್ನ ಉಪಗ್ರಹ ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಇಸ್ರೊ ಮುಂದಾಗಿದೆ. ಇಸ್ರೊ ತನ್ನ ಎಸ್​ಎಸ್​ಎಲ್​ವಿ ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ನೀಡಲಿದೆ.

ISRO: ಖಾಸಗಿ ಕಂಪನಿಗಳಿಗೆ SSLV ರಾಕೆಟ್​ ತಂತ್ರಜ್ಞಾನ ನೀಡಲಿದೆ ಇಸ್ರೊ

author img

By

Published : Jul 12, 2023, 5:01 PM IST

ಚೆನ್ನೈ : ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹನ (Small Satellite Launch Vehicle -SSLV) ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (IN-SPAce)ವು ಆಸಕ್ತಿಯ ಅಭಿವ್ಯಕ್ತಿ (ಇಒಐ) ಪ್ರಕಟಣೆಯನ್ನು ಕೂಡ ಬಿಡುಗಡೆ ಮಾಡಿದೆ. IN-SPAce ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳನ್ನು ನಿಯಂತ್ರಿಸುವ ಪ್ರಾಧಿಕಾರವಾಗಿದೆ.

ಷರತ್ತುಗಳ ಪ್ರಕಾರ, ಆಸಕ್ತ ಖಾಸಗಿ ಕಂಪನಿಗಳು ಅಥವಾ ಕಂಪನಿಗಳ ಒಕ್ಕೂಟದ ನೇತೃತ್ವ ವಹಿಸುವ ಸಂಸ್ಥೆಯು ಕನಿಷ್ಠ 400 ಕೋಟಿ ರೂಪಾಯಿ ವಹಿವಾಟು ಹೊಂದಿರಬೇಕು ಮತ್ತು ಲಾಭದಲ್ಲಿ ನಡೆಯುತ್ತಿರಬೇಕು. ತಂತ್ರಜ್ಞಾನ ಪಡೆಯಲು ಇಚ್ಛಿಸುವ ಕಂಪನಿಯು ಏಳು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಕಾರ್ಯಾಚರಣೆಯಲ್ಲಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಉತ್ಪಾದನಾ ಅನುಭವ ಹೊಂದಿರಬೇಕು. ಇದರ ಪ್ರಕಾರ ಇತ್ತೀಚಿನ ರಾಕೆಟ್ ಸ್ಟಾರ್ಟ್‌ ಅಪ್‌ ಕಂಪನಿಗಳು ಇದರಲ್ಲಿ ಭಾಗವಹಿಸುವಂತಿಲ್ಲ.

ತಂತ್ರಜ್ಞಾನದ ವರ್ಗಾವಣೆಗಾಗಿ ಪರಿಗಣಿಸಲಾದ SSLV ಕಾನ್ಫಿಗರೇಶನ್‌ನ ಬೌದ್ಧಿಕ ಆಸ್ತಿ ಹಕ್ಕುಗಳು ಇಸ್ರೊ ಒಡೆತನದಲ್ಲಿಯೇ ಮುಂದುವರಿಯುತ್ತದೆ. ಆದಾಗ್ಯೂ ರಾಕೆಟ್ ತಂತ್ರಜ್ಞಾನದ ವಿಶೇಷವಲ್ಲದ ಮತ್ತು ವರ್ಗಾವಣೆ ಮಾಡಲಾಗದ ಪರವಾನಗಿಯನ್ನು ಆಯ್ಕೆ ಮಾಡಿದ ಕಂಪನಿಗೆ ನೀಡಲಾಗುತ್ತದೆ. ಇಸ್ರೋ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಎಸ್‌ಎಸ್‌ಎಲ್‌ವಿ ತಂತ್ರಜ್ಞಾನ 500 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಮತ್ತು ಘನ ಇಂಧನದಿಂದ ಚಾಲಿತವಾಗಿದೆ. IN-SPAce ಪ್ರಕಾರ, SSLV ತಂತ್ರಜ್ಞಾನವನ್ನು ಭಾರತೀಯ ಖಾಸಗಿ ಕೈಗಾರಿಕೆಗಳಿಗೆ ಮಾತ್ರ ವರ್ಗಾಯಿಸಲಾಗುತ್ತದೆ.

ಈಗಾಗಲೇ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಎಂಬ ಹೆಸರಿನ ವಾಣಿಜ್ಯ ವಿಭಾಗವನ್ನು ಹೊಂದಿರುವ ಇಸ್ರೋ, ತಂತ್ರಜ್ಞಾನದ ಒಡೆತನ ವನ್ನು ಹೊಂದಿದೆ. ಇಂಥ ಪರಿಸ್ಥಿತಿಯಲ್ಲಿ ಇನ್-ಸ್ಪೇಸ್ ತಂತ್ರಜ್ಞಾನದ ವರ್ಗಾವಣೆಯಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು, “ಒಪ್ಪಂದವು NSIL ನೊಂದಿಗೆ ಇರುತ್ತದೆ. INSPACe ಇಸ್ರೊ ಆದೇಶದ ಪ್ರಕಾರ ಒಪ್ಪಂದವನ್ನು ಜಾರಿಗೊಳಿಸಲಿದೆ" ಎಂದರು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಈ ಉಪಗ್ರಹಗಳೊಂದಿಗೆ ಎರಡು ಬಾರಿ ರಾಕೆಟ್​ಗಳನ್ನು ಹಾರಿಸಿದೆ. ಮೊದಲ ಮಿಷನ್ ವಿಫಲವಾದರೆ, ಎರಡನೇಯದು ಯಶಸ್ವಿಯಾಗಿತ್ತು. ಜಾಗತಿಕವಾಗಿ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರವು ಬೆಳವಣಿಗೆ ಹೊಂದುತ್ತಿದ್ದು ಮುಂಬರುವ ದಶಕದಲ್ಲಿ 20,000 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಯುರೋಕನ್ಸಲ್ಟ್ ವರದಿಯನ್ನು ಉಲ್ಲೇಖಿಸಿ IN-SPAce ಹೇಳಿದೆ. ಭಾರತವು ವಾಣಿಜ್ಯ ಉಡಾವಣಾ ಸೇವೆಗಳ ಮಾರುಕಟ್ಟೆಯಲ್ಲಿ ಗಮನಾರ್ಹ ಪಾಲನ್ನು ಹೊಂದಲು, ರಾಷ್ಟ್ರದ ಒಟ್ಟಾರೆ ಲಿಫ್ಟ್ ಆಫ್ ಸಾಮರ್ಥ್ಯವನ್ನು ತ್ವರಿತವಾಗಿ ಬಹುಪಟ್ಟು ಹೆಚ್ಚಿಸುವುದು ಅವಶ್ಯಕವಾಗಿದೆ.

ಇಸ್ರೋ ಅಭಿವೃದ್ಧಿಪಡಿಸಿದ ಉಡಾವಣಾ ವಾಹನಗಳನ್ನು ಹೊಂದಲು ಮತ್ತು ನಿರ್ವಹಿಸಲು ಭಾರತೀಯ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಇಸ್ರೋದ ಉಡಾವಣಾ ಸಾಮರ್ಥ್ಯ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. IN-SPAce ಪ್ರಕಾರ SSLV ತಂತ್ರಜ್ಞಾನವನ್ನು ರಾಷ್ಟ್ರದ ಹಿತಾಸಕ್ತಿಗಾಗಿ ಒಂದಕ್ಕಿಂತ ಹೆಚ್ಚು ಖಾಸಗಿ ಕಂಪನಿಗಳಿಗೆ ವರ್ಗಾಯಿಸಬಹುದು.

ಆಸಕ್ತ ಕಂಪನಿಗಳು ಬಹು ಶಿಸ್ತಿನ ಟರ್ನ್ ಕೀ ಯೋಜನೆಗಳನ್ನು ನಿರ್ವಹಿಸುವಲ್ಲಿ ಅವುಗಳ ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುವುದು. ಈ ಕಂಪನಿಗಳು ಇಸ್ರೋದಿಂದ ಏರೋಡೈನಾಮಿಕ್ಸ್, ರಚನಾತ್ಮಕ ವಿನ್ಯಾಸ, ಸಹಾಯಕ ವ್ಯವಸ್ಥೆಗಳು, ಪ್ರೊಪಲ್ಷನ್ ತಂತ್ರಜ್ಞಾನಗಳು, ಏವಿಯಾನಿಕ್ಸ್ ಮತ್ತು ಇತರವುಗಳನ್ನು ಒಳಗೊಂಡಂತೆ SSLV ತಂತ್ರಜ್ಞಾನ ಪಡೆಯುವ ಅವಕಾಶ ಹೊಂದಲಿವೆ.

ಆಗಸ್ಟ್ 2, 2023 ರಂದು ಪೂರ್ವ EoI ಕಾನ್ಫರೆನ್ಸ್ ನಡೆಯಲಿದೆ. ಆಸಕ್ತಿಯ ಅಭಿವ್ಯಕ್ತಿಗಳನ್ನು ಸಲ್ಲಿಸಲು ಆಗಸ್ಟ್ 2023 ಕೊನೆಯ ತಿಂಗಳಾಗಿದೆ ಮತ್ತು ನಿರೀಕ್ಷಿತ ಬಿಡ್ಡರ್‌ಗಳ ಸ್ಕ್ರೀನಿಂಗ್ ಮತ್ತು ಗುರುತಿಸುವಿಕೆಯು ಸೆಪ್ಟೆಂಬರ್ 23, 2023 ರಂದು ನಡೆಯಲಿದೆ.

ಇದನ್ನೂ ಓದಿ : ಎಕ್ಸೊಪ್ಲಾನೆಟ್​ಗಳಲ್ಲಿ ನೀರಿರುವ ಸಾಧ್ಯತೆ 100 ಪಟ್ಟು ಹೆಚ್ಚಳ: ಸಂಶೋಧನೆಯಲ್ಲಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.