ETV Bharat / science-and-technology

ನಂಬಲಸಾಧ್ಯ ರೀತಿಯ ತೆಳುವಾದ ಡಿಸ್​ಪ್ಲೇ ಹೊಂದಲಿದೆ ಐಫೋನ್​ 15 ಪ್ರೊ ಮಾಕ್ಸ್​! - ಈ ಆ್ಯಪಲ್​ ಐಫೋನ್​ಗಳು ಒಂದಿರುತ್ತದೆ

ಸ್ಮಾರ್ಟ್​ಫೋನ್​ ಜಗತ್ತಿನಲ್ಲಿಯೇ ಅತ್ಯಂತ ತೆಳುವಾದ ಬೆಜಲ್​ ಅನ್ನು ಐಫೋನ್​ 15 ಪ್ರೊ ಮಾಕ್ಸ್​ ಹೊಂದಿರಲಿದೆ ಎಂದು ವರದಿಯಾಗಿದೆ.

IPhone 15 pro max bezels are ultra thin
IPhone 15 pro max bezels are ultra thin
author img

By

Published : Mar 31, 2023, 2:33 PM IST

ತನ್ನ ವೈಶಿಷ್ಟ್ಯಗಳಿಂದಲೇ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್​ಫೋನ್​​ ಎಂದರೆ ಅದು ಐಫೋನ್​. ಒಂದಕ್ಕಿಂತ ಒಂದು ವಿಭಿನ್ನ ವಿಶೇಷತೆಯನ್ನು ಈ ಆ್ಯಪಲ್​ ಐಫೋನ್​ಗಳು ಒಂದಿರುತ್ತದೆ. ಇದೇ ಕಾರಣಕ್ಕೆ ಈ ಐಫೋನ್​ ಎಂದರೆ ಜನರಿಗೆ ಇನ್ನಿಲ್ಲದ ಕ್ರೇಜ್​. ಹೊಸ ಅಪ್​ಡೇಟ್​ ವರ್ಷನ್​ಗಳನ್ನು ತಮ್ಮ ಪ್ರತಿ ಸೀರಿಸ್​ ಐಫೋನ್​ಗಳಲ್ಲಿ ನೀಡುವ ಆ್ಯಪಲ್​ ಇದೀಗ ಐಫೋನ್​ 15 ಪ್ರೊ ಮಾಕ್ಸ್​​ ಸೀರಿಸ್​ನಲ್ಲಿ ಅದರ ಗ್ರಾಹಕರನ್ನು ಮತ್ತಷ್ಟು ಮೋಡಿ ಮಾಡಲು ಸಿದ್ದವಾಗಿದೆ.

ಐಫೋನ್​ 15 ಪ್ರೊ ಮಾಕ್ಸ್​ ಜಗತ್ತಿನಲ್ಲಿಯೇ ಅತ್ಯಂತ ತೆಳುವಾದ ಡಿಸ್​ಪ್ಲೇ ಹೊಂದಿರಲಿದೆ ಎಂದು ವರದಿ ಆಗಿದೆ. ಈ ಸಂಬಂಧ ವರದಿ ಮಾಡಿರುವ ಮಾಶಬ್ಲೆ, ಐಫೋನ್​ 15 ಪ್ರೋ ಮಾಕ್ಸ್​ ಕೇವಲ 1.55ಎಂಎಂ (0.06 ಇಂಚು) ಬೆಜೆಲ್​ ಹೊಂದಿರಲಿದೆ. ಇಷ್ಟು ತೆಳುವಾದ ಬೆಜೆಲ್​ ಅನ್ನು ಇದುವರೆಗೂ ಯಾವುದೇ ಸ್ಮಾರ್ಟ್​ಫೋನ್​ ಹೊಂದಿಲ್ಲ ಎಂದಿದೆ.

ಶಯಮಿ 13 ಸ್ಮಾರ್ಟ್​ ಫೋನ್​ ಕಡಿದಾದ ಕಪ್ಪು ಬಣ್ಣದ ಬೆಜೆಲ್​ ಅನ್ನು ಹೊಂದಿದೆ. ಇದು ಕೇವಲ 1.81 ಎಂಎಂ ಬೆಜೆಲ್​ ಹೊಂದಿದೆ. ಇನ್ನು ಐಫೋನ್​ 14 ಪ್ರೊ 2.17 ಎಂಎಂಎ ಬೆಜೆಲ್​ ಅನ್ನು ಹೊಂದಿದೆ. ಐಫೋನ್​ 15 ಪ್ರೊ ಮತ್ತು ಐಫೋನ್​ 15 ಪ್ರೊ ಮ್ಯಾಕ್ಸ್​ ಸ್ಮಾರ್ಟ್​ಫೋನ್​ ಮುಂಭಾಗದ ಗಾಜಿನ (ಫ್ರಾಂಟ್​ ಗ್ಲಾಸ್​) ಕುರಿತ ಮಾಹಿತಿಗಳು ಕಳೆದವಾರವಷ್ಟೇ ಸೋರಿಕೆ ಆಗಿತ್ತು. ಇದರಲ್ಲಿ ಅಲ್ಟ್ರಾ ಥೀನ್​ ಬೆಜೆಲ್​ ಅನ್ನು ಈ ಡಿಸ್​ಪ್ಲೈ ಹೊಂದಿರಲಿದೆ. ಇದರಿಂದ ಭಾರಿ ತೆಳುವಾದ ಮೊಬೈಲ್​ ಎಂಬ ಖ್ಯಾತಿಗೆ ಈ ಐಫೋನ್​ 15 ಪ್ರೊ ಮಾಕ್ಸ್​ ಪಾತ್ರವಾಗಲಿದೆ.

ಇನ್ನು ಮಾಹಿತಿ ಪ್ರಕಾರ, ಐಫೋನ್​ 15 ಮತ್ತು ಐಫೋನ್​ ಪ್ರೊ ಮಾಕ್ಸ್​ ಸುಧಾರಿತ RAM ಇದ್ದು, ಟೈಟಾನಿಯಂ ಫ್ರೇಂ, ಸಾಲಿಡ್​ ಸ್ಟೇಟ್​ ಬಟನ್​ ಜೊತೆಗೆ ಹೆಪ್ಟಿಲ್​ ಫೀಡ್​ ಬ್ಯಾಕ್​ ಇದೆ. ಸ್ಮಾರ್ಟ್​ಫೋನ್​ ಹೆಚ್ಚು ತೆಳುವಾಗಿರುವ ಹಿನ್ನೆಲೆಯಲ್ಲಿ ಈ ಹಿಂದಿನ ತಲೆಮಾರಿನ ಸ್ಮಾರ್ಟ್​​ಫೋನ್​ ಗಳಲ್ಲಿದ್ದ ಸೈಡ್​​ ಬಟನ್​ಗಳು ಇರುವುದಿಲ್ಲ. ಮೊಬೈಲ್​ನಲ್ಲಿರುವ ಸೈಡ್​ ಬಟನ್​ಗಳಿಗೆ ಬದಲಾಗಿದೆ ಆ್ಯಕ್ಷನ್​ ಬಟನ್​ ಅನ್ನು ಇಡುವ ಸಾಧ್ಯತೆ ಇದ್ದು, ಇದು ಹೇಗೆ ಕೆಲಸ ಮಾಡಲಿದೆ ಎಂಬ ಗುಟ್ಟು ಇನ್ನು ಬಹಿರಂಗವಾಗಿಲ್ಲ. ಸೋರಿಕೆಯಾದ ಮಾಹಿತಿ ಅನುಸಾರ ಇದರಲ್ಲಿ ಡೈನಾಮಿಕ್ ಐಲಾಂಡ್​ ವೈಶಿಷ್ಟ್ಯತೆ ಇರಲಿದೆ.

ಇನ್ನು ಕಳೆದ ವರ್ಷ ಬಿಡುಗಡೆಯಾದ ಐಫೋನ್​ 14 ಮತ್ತು ಐಫೋನ್​ 14 ಪ್ರೊ ಮಾಕ್ಸ್​ನಲ್ಲಿ ಇತ್ತೀಚಿನ ಹೊಸ ಮಾಹಿತಿಗಳನ್ನು ಪರಿಚಯಿಸಲಾಗಿತ್ತು. ಇದೀಗ ಮುಂದಿನ ತಲೆಮಾರಿನ ಐಫೋನ್​ನಲ್ಲಿ ಇದೇ ಡಿಸ್​ಪ್ಲೈ ಇದ್ದು, ಬೆಜೆಲ್​ ಸಿಕ್ಕಾಪಟ್ಟೆ ತೆಳುವಾಗಿರಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಗಲಿದೆ. ಐಫೋನ್ 15 ಮತ್ತು ಐಫೋನ್ 15 ಪ್ರೊ ಮಾಕ್ಸ್​ ಈ ಹಿಂದಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಾಣುತ್ತಿಲ್ಲ. ಆದರೆ, ಕೆಲವು ವಿಶೇಷತೆ ಇದ್ದು, ಕ್ಯಾಮರಾ ಸಾಮರ್ಥ್ಯ ಉತ್ತಮವಾಗಿರಲಿದೆ.

ಇದನ್ನೂ ಓದಿ: ಮೊಟೊ g13 ಸ್ಮಾರ್ಟ್​​ಫೋನ್ ಲಾಂಚ್: 10 ಸಾವಿರಕ್ಕೂ ಕಡಿಮೆ ಬೆಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.