ನವದೆಹಲಿ: ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇಂಟೆಲ್ ಕಂಪನಿಯು ಬುಧವಾರ ಉತ್ತಮ ಕಾರ್ಯಕ್ಷಮತೆಯೊಂದಿಗೆ 4ನೇ ಜೆನ್ ಕ್ಸಿಯಾನ್ ಸ್ಕೇಲೆಬಲ್ ಪ್ರೊಸೆಸರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇಂಟೆಲ್ ಸ್ಕೇಲೆಬಲ್ ಪ್ರೊಸೆರಸರ್ ಜೊತೆ ಜೊತೆಗೆ ಕ್ಸಿಯಾನ್ ಮ್ಯಾಕ್ಸ್ ಸರಣಿಯ ಕಂಪ್ಯೂಟರ್ ಸಿಪಿಯು ಮತ್ತು ಡೇಟಾ ಸೆಂಟರ್ GPU( ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್) ಮ್ಯಾಕ್ಸ್ ಸರಣಿ ಅನ್ನು ಸಹ ಮಾರುಕಟ್ಟೆಗೆ ಅನಾವರಣ ಗೊಳಿಸಿದೆ.
ಇಂಟೆಲ್‌ನ ಅತ್ಯಂತ ಸಮರ್ಥನೀಯ ಡೇಟಾ ಸೆಂಟರ್ ಪ್ರೊಸೆಸರ್‌ಗಳಂತೆ, 4 ನೇ ಜನರಲ್ ಕ್ಸಿಯಾನ್ ಪ್ರೊಸೆಸರ್‌ಗಳು ಬಳಕೆದಾರರಿಗೆ ಉತ್ತಮವಾದ ಶಕ್ತಿ ಮತ್ತು ಉತ್ತಮವಾದ ಪ್ರದರ್ಶನ ನೀಡುತ್ತದೆ ಮತ್ತು ಬಳಕೆದಾರರಿಗೆ ವೇಗವಾಗಿ ಕಾರ್ಯನಿರ್ವಹಿಸಲು ವಿಧವಾದ ವೈಶಿಷ್ಟ್ಯಗಳೊಂದಿಗೆ ಸಮರ್ಥನೀಯ ಗುರಿಗಳನ್ನು ತಲುಪಲು ಸಹಾಯ ಮಾಡುತ್ತವೆ ಮತ್ತು ಸಿಪಿಯು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಕೆಯನ್ನು ಮಾಡುತ್ತವೆ ಎಂದು ಇಂಟೆಲ್ ಕಂಪನಿ ತಿಳಿಸಿದೆ.
ಗ್ರಾಹಕರು 4ನೇ ಜನ್ ಇಂಟೆಲ್ ಕ್ಸಿಯಾನ್ ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ ವೇಗವಾಗಿ ಕಾರ್ಯನಿರ್ವಹಿಸಲು ಕಂಪ್ಯೂಟರ್ನ್ನು ಬಳಸುವಾಗ ನಿಗದಿಪಡಿಸಿದ ಕೆಲಸಕ್ಕಾಗಿ ಸರಾಸರಿ 2.9x ವ್ಯಾಟ್ ಕಾರ್ಯನಿರ್ವಹಣೆಯನ್ನು ಗ್ರಾಹಕರು ಇನ್ಮುಂದೆ ನಿರೀಕ್ಷಿಸಬಹುದಾಗಿದೆ ಎಂದು ಇಂಟೆಲ್ ತಿಳಿಸಿದೆ. 4ನೇ ಜನ್ ಕ್ಸಿಯಾನ್ ಪ್ರೊಸೆಸರ್ ಇಂಟೆಲ್‌ನ ಕೆಲವು ನಿರ್ದಿಷ್ಟ ಉದ್ದೇಶದ, ಕೆಲಸದ ಹೊರೆಗಳನ್ನು ಮೊದಲಾದ ಕಾರ್ಯತಂತ್ರ ಮತ್ತು ವಿಧಾನವನ್ನು ಹೆಚ್ಚು ವಿಸ್ತರಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಹೊಸ ಇಂಟೆಲ್‌ನ ಆವೃತ್ತಿಯು ಉತ್ತಮವಾದ ಕಾರ್ಯಕ್ಷಮತೆ, ಕಡಿಮೆ - ಲೇಟೆನ್ಸಿ ನೆಟ್‌ವರ್ಕ್‌ಗಳು ಮತ್ತು ವರ್ಕ್‌ಲೋಡ್‌ಗಳಿಗಾಗಿ ನಿರ್ದಿಷ್ಟವಾಗಿ ಹೊಂದುವಂತೆ ನವೀಕರಿಸಲಾಗಿದೆ.
ಬ್ಯಾಂಡ್‌ವಿಡ್ತ್ ಮೆಮೊರಿಯೊಂದಿಗೆ ಮೊದಲ ಪ್ರೊಸೆಸರ್: ಇದಲ್ಲದೇ ಕ್ಸಿಯಾನ್ ಸಿಪಿಯು ಮ್ಯಾಕ್ಸ್ ಸರಣಿಯು ಹೆಚ್ಚಿನ ಬ್ಯಾಂಡ್‌ವಿಡ್ತ್ ಮೆಮೊರಿಯೊಂದಿಗೆ ಮೊದಲ ಮತ್ತು ಏಕೈಕ x86 ಆಧಾರಿತ ಪ್ರೊಸೆಸರ್ ಇದಾಗಿದೆ, ಕೋಡ್ ಬದಲಾವಣೆಗಳ ಅಗತ್ಯವಿಲ್ಲದೆಯೇ ಅನೇಕ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕೆಲಸದ ಹೊರೆಗಳನ್ನು ಈ ಒಂದು ಹೊಸ ಪ್ರೊಸೆಸರ್‌ಗಳು ಕಂಪ್ಯೂಟರ್ಗಳನ್ನು ವೇಗಗೊಳಿಸುತ್ತದೆ.
ಡೇಟಾ ಸೆಂಟರ್ ಜಿಪಿಯು( ಗ್ರಾಫಿಕ್ ಸಂಸ್ಕರಣಾ ಘಟಕ) ಮ್ಯಾಕ್ಸ್ ಸರಣಿಯು ಇಂಟೆಲ್‌ನ ಅತ್ಯಧಿಕ ಸಾಂದ್ರತೆಯ ಪ್ರೊಸೆಸರ್ ಆಗಿದೆ ಮತ್ತು ಕಂಪನಿಯ ಪ್ರಕಾರ ವಿಭಿನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಹಲವಾರು ರೂಪ ಅಂಶಗಳು ಇದರಲ್ಲಿ ಲಭ್ಯವಿರುತ್ತದೆ. ಇದಲ್ಲದೇ, ಕ್ಸಿಯಾನ್ ಕಂಪ್ಯೂಟರ್ ಸಂಸ್ಕರಣಾ ಘಟಕ ಮ್ಯಾಕ್ಸ್ ಸರಣಿಯು ಪ್ಯಾಕೇಜ್‌ನಲ್ಲಿ 64 ಗಿಗಾಬೈಟ್‌ಗಳ ಹೆಚ್ಚಿನ ಬ್ಯಾಂಡ್‌ವಿಡ್ತ್ ಮೆಮೊರಿಯನ್ನು ನೀಡುತ್ತದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: HPC (ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್) ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಕೆಲಸದ ಹೊರೆಗಳಿಗೆ ಡೇಟಾ ಥ್ರೋಪುಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಉನ್ನತ ಶ್ರೇಣಿಯ 3ನೇ ಜನ್ ಇಂಟೆಲ್ ಕ್ಸಿಯಾನ್ ಸ್ಕೇಲೆಬಲ್ ಪ್ರೊಸೆಸರ್‌ಗಳಿಗೆ ಹೋಲಿಸಿದರೆ, ಕ್ಸಿಯಾನ್ ಕಂಪ್ಯೂಟರ್ ಸಂಸ್ಕರಣಾ ಘಟಕದ ಉನ್ನತ ಸರಣಿಯು ಪವರ್ ಮತ್ತು ಸಿಸ್ಟಮ್ ಮಾಡೆಲಿಂಗ್‌ನಂತಹ ನೈಜ ಪ್ರಪಂಚದ ವಿಧವಾದ ಅಪ್ಲಿಕೇಶನ್‌ಗಳಲ್ಲಿ 10 ಪಟ್ಟು ಹೆಚ್ಚಿನ ಕಾರ್ಯಕ್ಷಮತೆ ನೀಡುತ್ತದೆ ಎಂದು ಇಂಟೆಲ್ ಕಂಪನಿಯು ತಿಳಿಸಿದೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾನಲ್ಲಿ ಲಿಂಗಾಧಾರಿತ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಿದ ಮೆಟಾ