ಬೆಂಗಳೂರು: ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಗಾಗಿ ಇಸ್ರೋ ನಿರ್ಮಿಸಿದ ಜಿಸ್ಯಾಟ್ -24 ಉಪಗ್ರಹವನ್ನು ಫ್ರೆಂಚ್ ಗಯಾನದ ಕೌರೌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
GSAT-24 DTH ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಪ್ಯಾನ್ - ಇಂಡಿಯಾ ವ್ಯಾಪ್ತಿಯೊಂದಿಗೆ 4,180 ಕೆಜಿ ತೂಕದ 24-Ku ಬ್ಯಾಂಡ್ ಸಂವಹನ ಉಪಗ್ರಹವಾಗಿದೆ. ಕೆಲ ಸುಧಾರಣೆಗಳ ಬಳಿಕ ಎನ್ಎಸ್ಐಎಲ್ ಕೈಗೊಂಡಿರುವ ಸಂವಹನ ಉಪಗ್ರಹ ಉಡ್ಡಯನವಾಗಿದೆ.
ಬಾಹ್ಯಾಕಾಶ ಇಲಾಖೆಯ ಅಡಿ ಭಾರತ ಸರ್ಕಾರದ NSIL ಈ ಉಪಗ್ರಹವರನ್ನು ಟಾಟಾ ಪ್ಲೇಗೆ ಗುತ್ತಿಗೆ ನೀಡಿದೆ. GSAT-24 ಅನ್ನು Ariane-V VA257 ವಿಮಾನದ ಮೂಲಕ ಯುರೋಪ್‌ನ ಕೌರೌನಲ್ಲಿರುವ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ.
ಇದನ್ನು ಓದಿ:ನಾಸಾದಿಂದ ಹೊಸ ಅಧ್ಯಯನ ಪ್ರಾರಂಭ... ಈ ಬಾರಿಯ ಸಂಶೋಧನೆ ಏನು ಗೊತ್ತೇ?