ETV Bharat / science-and-technology

ನಾಸಾದ ಉಪಗ್ರಹದೊಂದಿಗೆ ಚಂದ್ರಯಾನ-2 ಉಪಗ್ರಹದ ಡಿಕ್ಕಿ ತಪ್ಪಿಸಿದ ಇಸ್ರೋ - isro and nasa

ಎರಡೂ ಬಾಹ್ಯಾಕಾಶ ಏಜೆನ್ಸಿಗಳ ಒಪ್ಪಂದ ಪ್ರಕಾರ ಅಕ್ಟೋಬರ್‌ 18ರಂದು ಚಂದ್ರಯಾನ–2 (Chandrayan-2) ಆರ್ಬಿಟರ್​ನಲ್ಲಿದ್ದ ನೌಕೆಯನ್ನು ನಿಗದಿತ ಕಕ್ಷೆಯಿಂದ ದೂರಕ್ಕೆ ಸರಿಸಲಾಗಿದ್ದು, ಈ ಮೂಲಕ ಸಂಭವಿಸಬಹುದಾದ ಡಿಕ್ಕಿಯನ್ನು ತಪ್ಪಿಸಲಾಗಿದೆ ಎಂದು ಇಸ್ರೋ ಹೇಳಿದೆ.

India's Chandrayaan-2 avoids collision with NASA's moon orbiter
ನಾಸಾದ ಉಪಗ್ರಹದೊಂದಿಗೆ ಚಂದ್ರಯಾನ-2 ಉಪಗ್ರಹದ ಡಿಕ್ಕಿ ತಪ್ಪಿಸಿದ ಇಸ್ರೋ
author img

By

Published : Nov 17, 2021, 1:18 PM IST

ಚೆನ್ನೈ, ತಮಿಳುನಾಡು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2019ರಲ್ಲಿ ಚಂದ್ರನ ಮೇಲೆ ಸಂಶೋಧನೆಗೆ ಉಡಾವಣೆ ಮಾಡಿದ್ದ ಚಂದ್ರಯಾನ -2 ಆರ್ಬಿಟರ್ ಮತ್ತು ಅಮೆರಿಕ ನಾಸಾ ಹಾರಿಬಿಟ್ಟಿದ್ದ ಲೂನಾರ್‌ ರಿಕನೈಸನ್ಸ್‌ ಆರ್ಬಿಟರ್​ನಲ್ಲಿದ್ದ (LRO-Lunar Reconnaissance Orbiter) ಬಾಹ್ಯಾಕಾಶ ನೌಕೆಗಳು ಪರಸ್ಪರ ಡಿಕ್ಕಿಯಾಗುವುದರಿಂದ ಪಾರಾಗಿವೆ.

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡ ಕಾರಣದಿಂದಾಗಿ ಬಾಹ್ಯಾಕಾಶ ನೌಕೆಗಳು ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸಲಾಗಿದೆ. ಅಕ್ಟೋಬರ್ 20ರಂದು ಚಂದ್ರಯಾನ-2 ಮತ್ತು ನಾಸಾದ ಲೂನಾರ್‌ ರಿಕನೈಸನ್ಸ್‌ ಆರ್ಬಿಟರ್​ನ ಬಾಹ್ಯಾಕಾಶ ನೌಕೆಗಳು ಸಮೀಪಕ್ಕೆ ಬರುತ್ತವೆ ಎಂದು ಊಹಿಸಲಾಗಿತ್ತು ಎಂದು ಇಸ್ರೋ ( Indian Space Research Organisation) ಅಧಿಕೃತ ಹೇಳಿಕೆ ನೀಡಿದೆ.

ನಾಸಾದ ಜೆಟ್‌ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್‌- Jet Propulsion Laboratory) ಮತ್ತು ಇಸ್ರೋ ಮಾಡಿದ ಲೆಕ್ಕಾಚಾರಗಳ ಪ್ರಕಾರ ಉಭಯ ಬಾಹ್ಯಾಕಾಶ ನೌಕೆಗಳ ಕಕ್ಷೆಗಳ ಅಂತರ 100 ಮೀಟರ್‌ಗೂ ಕಡಿಮೆಯಾಗುತ್ತಿತ್ತು. ಅಕ್ಟೋಬರ್ 20ರ ಬೆಳಗ್ಗೆ 11 ಗಂಟೆ ವೇಳೆಗೆ ಎರಡು ಬಾಹ್ಯಾಕಾಶ ನೌಕೆಗಳ ಅಂತರ ಕೇವಲ 3 ಕಿಲೋಮೀಟರ್ ಆಗಿರುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು. ಎರಡೂ ಬಾಹ್ಯಾಕಾಶ ನೌಕೆಗಳು ವೇಗವಾಗಿ ಚಲಿಸುವ ಕಾರಣ, ಇದು ಅತ್ಯಂತ ಕಡಿಮೆ ಅಂತರವಾಗಿದ್ದು, ಡಿಕ್ಕಿಯಾಗುವ ಸಾಧ್ಯತೆ ಇತ್ತು.

ಎರಡೂ ಬಾಹ್ಯಾಕಾಶ ಏಜೆನ್ಸಿಗಳ ಒಪ್ಪಂದ ಪ್ರಕಾರ ಅಕ್ಟೋಬರ್‌ 18ರಂದು ಚಂದ್ರಯಾನ–2 (Chandrayan-2) ಆರ್ಬಿಟರ್​ನಲ್ಲಿದ್ದ ನೌಕೆಯನ್ನು ನಿಗದಿತ ಕಕ್ಷೆಯಿಂದ ದೂರಕ್ಕೆ ಸರಿಸಲಾಗಿದೆ. ಎರಡೂ ಆರ್ಬಿಟರ್‌ಗಳು ಚಂದ್ರನ ಧ್ರುವೀಯ ಕಕ್ಷೆಯಲ್ಲೇ ಪರಿಭ್ರಮಣ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಇಸ್ರೋ ನೂತನ ಪ್ರಯತ್ನವೊಂದನ್ನು ನಡೆಸಿ, ಯಶಸ್ವಿಯಾಗಿದೆ.

ತನ್ನ ಕಕ್ಷೆಯ ಸಮೀಪಕ್ಕೆ ಬೇರೊಂದು ನೌಕೆ ಬಂದಾಗ, ವಿಫಲಗೊಂಡ ಅಥವಾ ಅವಧಿ ಮುಗಿದ ಬಾಹ್ಯಾಕಾಶ ನೌಕೆಗಳು ಅಡ್ಡ ಬಂದಾಗ ಈ ರೀತಿಯ ಪ್ರಯತ್ನ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಇಸ್ರೋ ಇದೇ ಮೊದಲ ಬಾರಿಗೆ ತನ್ನ ನೌಕೆಯನ್ನು ಬೇರೊಂದು ನೌಕೆಯಿಂದ ಸ್ವಲ್ಪ ದೂರಕ್ಕೆ ಸರಿಸಿದೆ.

ಇದನ್ನೂ ಓದಿ: ಛೇ ದುರ್ವಿದಿಯೇ..ಈಜಾಡಲು ಹೋಗಿ ನೀರಲ್ಲಿ ಮುಳುಗಿ ತೆಲಂಗಾಣದ 6 ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.