ETV Bharat / science-and-technology

ಸಿಂಗಾಪುರದ 7 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು.. ಜುಲೈ 30 ರಂದು ಪಿಎಸ್​ಎಲ್​ವಿ ನೌಕೆ ನಭಕ್ಕೆ - ಪಿಎಸ್​ಎಲ್​ವಿ ಉಡಾವಣಾ ನೌಕೆ

ಸಿಂಗಾಪುರದ 7 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಮುಹೂರ್ತ ನಿಗದಿ ಮಾಡಿದೆ. ಇದೇ 30 ರಂದು ಪಿಎಸ್​ಎಲ್​ವಿ ನೌಕೆ ಇವುಗಳನ್ನು ಹೊತ್ತು ಸಾಗಲಿದೆ.

ಸಿಂಗಾಪುರದ 7 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು
ಸಿಂಗಾಪುರದ 7 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು
author img

By

Published : Jul 24, 2023, 8:42 PM IST

ಚೆನ್ನೈ: ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಸಂತಸದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಜುಲೈ 30 ರಂದು ಸಿಂಗಾಪುರದ 7 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾಯಿಸಲಿದೆ.

360 ಕೆಜಿ ತೂಕದ DS-SAR ಮುಖ್ಯ ಉಪಗ್ರಹಗಳ ಜೊತೆಗೆ ಇನ್ನೂ 6 ಸಣ್ಣ ಪ್ರಮಾಣದ ಸ್ಯಾಟಲೈಟ್​ಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ನೌಕೆಯ ಮೂಲಕ ಕೊಂಡೊಯ್ಯಲಿದೆ. ಇದನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರ ನೋಂದಣಿಯನ್ನೂ ಇಸ್ರೋ ಆರಂಭಿಸಿದೆ.

  • 🇮🇳PSLV-C56🚀/🇸🇬DS-SAR satellite 🛰️ Mission:
    The launch is scheduled for
    📅 July 30, 2023
    ⏲️ 06:30 Hrs. IST
    🚩First launch pad SDSC-SHAR, Sriharikota. @NSIL_India has procured PSLV-C56 to deploy the DS-SAR satellite from DSTA & ST Engineering, Singapore

    and 6 co-passenger… pic.twitter.com/q42eR9txT7

    — ISRO (@isro) July 24, 2023 " class="align-text-top noRightClick twitterSection" data=" ">

ಹವಾಮಾನ ಬದಲಾವಣೆಯನ್ನು ಹಗಲು ರಾತ್ರಿಯೆನ್ನದೇ ಅಧ್ಯಯನ ಮಾಡುವ DS-SAR ಉಪಗ್ರಹವನ್ನು DSTA (ಸಿಂಗಾಪೂರ್​ ಸರ್ಕಾರ ಪ್ರತಿನಿಧಿತ್ವ ಸಂಸ್ಥೆ) ಮತ್ತು ST ಇಂಜಿನಿಯರಿಂಗ್ ಸಂಸ್ಥೆಗಳು ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿವೆ. ಇದನ್ನು 5 ಡಿಗ್ರಿ ಇಳಿಜಾರಿನಲ್ಲಿ ಮತ್ತು 535 ಕಿಮೀ ಎತ್ತರದಲ್ಲಿ ಸಮಭಾಜಕ ಕಕ್ಷೆಗೆ ಸೇರಿಸುವ ಉದ್ದೇಶವಿದೆ. ಇದರ ಜೊತೆಗೆ ಉಡಾವಣೆಯಾಗುವ 6 ಸಣ್ಣ ಉಪಗ್ರಹಗಳೆಂದರೆ ವೆಲೋಕ್ಸ್‌ - ಎಎಂ, ಸ್ಕೂಬ್‌, 3ಯು ನ್ಯಾನೋ, ಲೋಟ್ಸ್‌, ಗಲಾಸಿಯಾ, ಓಆರ್‌ಬಿ ಆಗಿವೆ.

ಉದ್ದೇಶಿತ ಉಪಗ್ರಹವನ್ನು ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳ ಕಾರ್ಯ ನಿರ್ವಹಣೆಗೆ ಬೇಕಾಗುವ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾಗಿದೆ. ST ಇಂಜಿನಿಯರಿಂಗ್ ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು ಮಾದರಿ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ. DS -SAR ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಪೇಲೋಡ್ ಅನ್ನು ಹೊಂದಿದೆ. ಇದು ಹವಾಮಾನದ ಕುರಿತಾಗಿ ಹಗಲು ಮತ್ತು ರಾತ್ರಿಯಲ್ಲೂ ಅಧ್ಯಯನ ನಡೆಸುತ್ತದೆ.

ಉಪಗ್ರಹಗಳ ಕಾರ್ಯ, ವಿಶೇಷತೆಗಳು: ಡಿಎಸ್‌-ಎಸ್‌ಎಆರ್‌- ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರೇಡಾರ್ ಪೇಲೋಡ್ ಅನ್ನು ಹೊಂದಿದೆ. ಹಗಲು-ರಾತ್ರಿಯಲ್ಲಿ ಹವಾಮಾನದ ಕುರಿತಾಗಿ ಕಾರ್ಯಾಚರಣೆ ನಡೆಸುತ್ತಿದೆ.

ವೆಲೋಕ್ಸ್‌ - ಎಎಂ- ಇದು ತಂತ್ರಜ್ಞಾನ ಪ್ರದರ್ಶನದ ಮೈಕ್ರೋಸ್ಯಾಟಲೈಟ್ ಆಗಿದೆ.

ಸ್ಕೂಬ್‌- ಇದು ಪ್ರಯೋಗ ಉದ್ದೇಶದ ಸ್ಯಾಟಲೈಟ್‌ ಆಗಿದೆ.

3ಯು ನ್ಯಾನೋ - ಇದು ಭೂಮಿಯ ಮೇಲಿನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಮಾಹಿತಿಗಳನ್ನು ನೀಡುತ್ತದೆ.

ಲೋಟ್ಸ್‌- ಭೂಮಿಯಲ್ಲಿ ಸಂಪರ್ಕವನ್ನು ಸುಧಾರಿಸುವ ಸಲುವಾಗಿ ಕಳಿಸುತ್ತಿರುವ ಉಪಗ್ರಹವಾಗಿದೆ.

ಗಲಾಸಿಯಾ-2- ಇದು ಭೂಮಿಯ ಕಕ್ಷೆಯಲ್ಲಿ ಸುತ್ತುವ ಸಲುವಾಗಿ ಕಳಿಸುತ್ತಿರುವ ಉಪಗ್ರಹ.

ಓಆರ್‌ಬಿ-12 ಸ್ಟ್ರಿಂಡರ್‌- ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ ಉಪಗ್ರಹ ಇದಾಗಿದೆ.

ಇದನ್ನೂ ಓದಿ: ಮಾನವ & AI ಪ್ರತ್ಯೇಕಿಸಲು ಹೊಸ ತಂತ್ರಜ್ಞಾನ; ಏನಿದು Worldcoin?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.