ಚೆನ್ನೈ: ಇಸ್ರೋ ಸಹಯೋಗದಿಂದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಮೊದಲ ಖಾಸಗಿ ನಿರ್ಮಿತ ಅಗ್ನಿಕುಲ್ ಕಾಸ್ಮಾಸ್‌ನ ರಾಕೆಟ್ ಲಾಂಚ್‌ಪ್ಯಾಡ್ ಮತ್ತು ಮಿಷನ್ ಕಂಟ್ರೋಲ್ ಸೆಂಟರ್ ಉದ್ಘಾಟನೆ ಮಾಡಲಾಗಿದೆ. ಚೆನ್ನೈ ಮೂಲದ ರಾಕೆಟ್ ಸ್ಟಾರ್ಟ್ಅಪ್ ಅಗ್ನಿಕುಲ್ ಕಾಸ್ಮೋಸ್ ಮಿಷನ್ ಕಂಟ್ರೋಲ್ ಸೆಂಟರ್ ಅನ್ನು ಇಸ್ರೋ ಮತ್ತು ಖಾಸಗಿ ವಲಯ ಬಾಹ್ಯಕಾಶ ನಿಯಂತ್ರಣ ಇನ್ಸ್ಪೇಸ್ ಮೂಲಕ ನಿರ್ಮಿಸಲಾಗಿದೆ.
ಈ ಸೌಲಭ್ಯವನ್ನು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಉದ್ಘಾಟಿಸಿದರು. ಇದನ್ನು ಲಾಂಚ್‌ಪ್ಯಾಡ್ ಅನ್ನು ನಿರ್ದಿಷ್ಟವಾಗಿ ದ್ರವ ಹಂತದ ನಿಯಂತ್ರಿತ ಉಡಾವಣೆಗಳನ್ನು ಬೆಂಬಲಿಸುವ ಸಾಮರ್ಥ್ಯ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಉಡಾವಣೆಯ ವೇಳೆ ವಿಮಾನ ಸುರಕ್ಷತಾ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡುವ ಇಸ್ರೋದ ಕಾರ್ಯಾಚರಣೆಗಳ ತಂಡದ ಅಗತ್ಯವನ್ನು ತಿಳಿಸುತ್ತದೆ. ಇದು ಅಗತ್ಯವಿರುವಂತೆ ಡೇಟಾವನ್ನು ಹಂಚಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇಸ್ರೋದ ಮಿಷನ್ ಕಂಟ್ರೋಲ್ ಸೆಂಟರ್‌ನೊಂದಿಗೆ ಇತರ ನಿರ್ಣಾಯಕ ಮಾಹಿತಿ ಹೊಂದಿದೆ ಎಂದು ಸ್ಟಾರ್ಟ್ಅಪ್ ತಿಳಿಸಿದೆ
ತನ್ನ ಮೊದಲ ರಾಕೆಟ್‌ನ ಉಡಾವಣೆ ತನ್ನದೇ ಆದ ಲಾಂಚ್‌ಪ್ಯಾಡ್‌ನಿಂದ ನಡೆಯಲಿದೆ ಎಂದು ಕಂಪನಿ ಹೇಳಿದೆ. ಇದು ತಂತ್ರಜ್ಞಾನ ಪ್ರದರ್ಶಕವಾಗಿದ್ದು ಅಗ್ನಿಕುಲ್‌ನ ಕಕ್ಷೆಯ ಉಡಾವಣೆಯನ್ನು ಪ್ರತಿಬಿಂಬಿಸುತ್ತದೆ. ಖಾಸಗಿ ಉಡಾವಣಾ ವಾಹನಕ್ಕಾಗಿ ಮೊದಲ ವಿಶೇಷ ಉಡಾವಣಾ ಪ್ಯಾಡ್ ಎಸ್‌ಡಿಎಸ್‌ಸಿಯಲ್ಲಿ ಬಂದಿದೆ. ಈಗ ಭಾರತವು ಮತ್ತೊಂದು ಬಾಹ್ಯಾಕಾಶ ವೇದಿಕೆಯಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಬಹುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್ ಯಶಸ್ವಿ ಉಡಾವಣೆ..