ETV Bharat / science-and-technology

ಕ್ರೋಮ್​ನಲ್ಲಿ ಶೇ 300ರಷ್ಟು ಜೂಮಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್ - ಆ್ಯಂಡ್ರಾಯ್ಡ್​ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಸ್ಕ್ರೀನ್

ಜಾಗತಿಕ ತಂತ್ರಜ್ಞಾನ ಕಂಪನಿ ಗೂಗಲ್ ತನ್ನ ಹಲವಾರು ಉತ್ಪನ್ನಗಳಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಆ್ಯಂಡ್ರಾಯ್ಡ್​ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಸ್ಕ್ರೀನ್ ಅನ್ನು ಶೇ 300 ರಷ್ಟು ಜೂಮ್ ಮಾಡಲು ಸಾಧ್ಯವಾಗಲಿದೆ.

ಕ್ರೋಮ್​ನಲ್ಲಿ ಶೇ 300ರಷ್ಟು ಜೂಮಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್
Users can now increase font size to 300% on Chrome for Android
author img

By

Published : Feb 27, 2023, 6:53 PM IST

ಸ್ಯಾನ್ ಫ್ರಾನ್ಸಿಸ್ಕೋ : Android ಮತ್ತು WearOS ಸಾಧನಗಳಿಗೆ ಗೂಗಲ್ ಸೋಮವಾರ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆ್ಯಂಡ್ರಾಯ್ಡ್​​ ಕ್ರೋಮ್​ನಲ್ಲಿ ಕಂಟೆಂಟ್​ ಗಾತ್ರವನ್ನು ಶೇಕಡಾ 300 ರಷ್ಟು ಹೆಚ್ಚಿಸುವ ಸೌಲಭ್ಯ ನೀಡಿರುವುದು ಬಹಳ ಮುಖ್ಯವಾಗಿದೆ. ಕಂಪನಿಯ ಪ್ರಕಾರ, ಹೊಸ ಅಪ್ಡೇಟ್​ಗಳು ಸಾಧನಗಳಾದ್ಯಂತ ಸಂಪರ್ಕ, ಉತ್ಪಾದಕತೆ, ಬಳಕೆ ಮತ್ತು ಆರಾಮದಾಯಕತೆಯನ್ನು ಮತ್ತಷ್ಟು ಸುಧಾರಿಸುತ್ತವೆ.

ಬಳಕೆದಾರರು ತಮ್ಮ ನೋಟ್ಸ್​ಗಳನ್ನು ತ್ವರಿತವಾಗಿ ನಿರ್ವಹಿಸಲು ಮತ್ತು ಟು ಡೂ ಲಿಸ್ಟ್​​ಗಳನ್ನು ತಮ್ಮ ಹೋಮ್ ಸ್ಕ್ರೀನ್​ನಿಂದಲೇ ಪರಿಶೀಲಿಸಲು ಶೀಘ್ರದಲ್ಲೇ ಗೂಗಲ್ ಕೀಪ್ ಸಿಂಗಲ್ ನೋಟ್ ವಿಜೆಟ್ ಸಹಾಯ ಮಾಡಲಿದೆ ಎಂದು ಗೂಗಲ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಒಂದೊಮ್ಮೆ ನೀವು ನಿಮ್ಮ Wear OS by Google ಸ್ಮಾರ್ಟ್‌ವಾಚ್ ಅನ್ನು ಹೊಂದಿದ್ದರೆ, ಗೂಗಲ್ ಕೀಪ್ ಎರಡು ಹೊಸ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತಿದೆ. ಇದರಿಂದ ನಿಮ್ಮ ವಾಚ್ ಮೇಲೆ ಸರಳವಾಗಿ ಒಂದು ಟ್ಯಾಪ್‌ ಮಾಡುವ ಮೂಲಕ ನೋಟ್ಸ್​ ಮತ್ತು ಟು ಡೂ ಲಿಸ್ಟ್​ಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿದೆ.

ಇದಲ್ಲದೆ, ಬಳಕೆದಾರರು ಈಗ ಸ್ಟೈಲಸ್ ಅನ್ನು ಬಳಸಬಹುದು ಅಥವಾ ಆ್ಯಂಡ್ರಾಯ್ಡ್​ನ ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ PDF ಗಳನ್ನು ಟಿಪ್ಪಣಿ ಮಾಡಲು ಸ್ಕ್ರೀನ್ ಅನ್ನು ಸ್ಪರ್ಶಿಸಬಹುದು. ಗೂಗಲ್ ಮೀಟ್ ಈಗ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಸಾಧನಗಳಲ್ಲಿ ಕರೆಗಳ ಸಮಯದಲ್ಲಿ ನಾಯ್ಸ್​ ಕ್ಯಾನ್ಸಲೇಶನ್ ವೈಶಿಷ್ಟ್ಯತೆ ನೀಡುತ್ತದೆ ಎಂದು ಕಂಪನಿಯು ಉಲ್ಲೇಖಿಸಿದೆ. ಶೀಘ್ರದಲ್ಲೇ, ಫಾಸ್ಟ್ ಪೇರ್ ಹೊಸ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ನಿಮ್ಮ ಕ್ರೋಮ್​​ಗುಕ್​ಗೆ ಕೇವಲ ಒಂದು ಟ್ಯಾಪ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಬಳಕೆದಾರರಿಗೆ ಈಗ ಎಮೋಜಿ ಕಿಚನ್​ನಲ್ಲಿ ಹೊಸ ಎಮೋಜಿ ಸಂಯೋಜನೆಗಳು ಲಭ್ಯವಾಗಿರುವುದು ಕೂಡ ಹೊಸ ವೈಶಿಷ್ಟ್ಯತೆಯಾಗಿದೆ. ಅಲ್ಲದೆ ಬಳಕೆದಾರರು ಶಾಪಿಂಗ್ ಮಾಡುವಾಗ ಅಂಗಡಿಯಲ್ಲಿ ವಹಿವಾಟುಗಳನ್ನು ಖಚಿತಪಡಿಸಲು ಹೊಸ ಟ್ಯಾಪ್ ಅನಿಮೇಶನ್‌ಗಳು ಮುಂದಿನ ವಾರ ಅಪ್ಡೇಟ್ ಆಗಲಿವೆ. ಬಳಕೆದಾರರು ಈಗ ಪಠ್ಯ, ಚಿತ್ರಗಳು, ವೀಡಿಯೊ ಮತ್ತು ಸಂವಾದಾತ್ಮಕ ನಿಯಂತ್ರಣಗಳನ್ನು ಒಳಗೊಂಡಂತೆ ಕ್ರೋಮ್​ನಲ್ಲಿನ ಕಂಟೆಂಟ್ ಗಾತ್ರವನ್ನು ಶೇಕಡಾ 300 ರಷ್ಟು ಹೆಚ್ಚಿಸಿ ನೋಡಬಹುದು. ಚಿಕ್ಕ ಗಾತ್ರದ ಅಕ್ಷರಗಳನ್ನು ಓದುವುದು ಕಷ್ಟವಿದ್ದವರಿಗೆ ಇದು ತುಂಬಾ ಅನುಕೂಲವಾಗಲಿದೆ.

ವಾಚ್ ಬಳಕೆಯನ್ನು ಇನ್ನಷ್ಟು ಸುಲಭವಾಗಿಸಲು ವೇರ್ ಓಎಸ್ 3+ (9Wear OS 3+) ನಲ್ಲಿ ಎರಡು ಹೊಸ ಧ್ವನಿ ಮತ್ತು ಪ್ರದರ್ಶನ ಮೋಡ್‌ಗಳನ್ನು ಪರಿಚಯಿಸಲಾಗುತ್ತಿದೆ. ಸ್ಪ್ಲಿಟ್ ಆಡಿಯೊದಿಂದ ಧ್ವನಿ ಹಾಳಾಗುವುದನ್ನು ಮಿತಿಗೊಳಿಸಲು ಮೊನೊ-ಆಡಿಯೊ ಸಹಾಯ ಮಾಡುತ್ತದೆ. ಹಾಗೆಯೇ ಕಲರ್ ಕರೆಕ್ಷನ್ ಮತ್ತು ಗ್ರೇಸ್ಕೇಲ್ ಮೋಡ್‌ಗಳು ನಿಮ್ಮ ವಾಚ್ ಡಿಸ್‌ಪ್ಲೇಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ ಎಂದು ಗೂಗಲ್ ತಿಳಿಸಿದೆ.

ಗೂಗಲ್ ಕ್ರೋಮ್ ಬಳಕೆದಾರರು ತಮಗೆ ಅಗತ್ಯವಿಲ್ಲದ ಟ್ಯಾಬ್‌ಗಳನ್ನು ಹೇಗೆ ಕ್ಲೋಸ್ ಮಾಡಬೇಕೆಂಬುದನ್ನು ಈಗಾಗಲೇ ತಿಳಿದಿದ್ದಾರೆ. ಮೇಲಿನ ಮೂಲೆಯಲ್ಲಿರುವ "X" ಅನ್ನು ಟ್ಯಾಪ್ ಮಾಡಿದರೆ ಕ್ರೋಮ್ ತಕ್ಷಣವೇ ಆ ಟ್ಯಾಬ್ ಅನ್ನು ಕ್ಲೋಸ್ ಮಾಡುತ್ತದೆ. ಕೀಬೋರ್ಡ್ ಶಾರ್ಟ್‌ಕಟ್‌ಗಳು ನಿಮಗೆ ತಿಳಿದಿದ್ದರೆ, ಪ್ರಸ್ತುತ ಟ್ಯಾಬ್ ಅನ್ನು ಮುಚ್ಚಲು ನೀವು CTRL+W ಅನ್ನು ಒತ್ತಬಹುದು.

ಇದನ್ನೂ ಓದಿ : ಸಿಸಿಐ ಆದೇಶಗಳನ್ನು ದಿಕ್ಕರಿಸುತ್ತಿದೆಯಂತೆ ಗೂಗಲ್​: ಎಡಿಐಎಫ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.