ETV Bharat / science-and-technology

ಮಧ್ಯವರ್ತಿ ರಹಿತ ಸರಕು ಸಾಗಣೆಗೆ ಹೊಸ ಆ್ಯಪ್​​: "ಆಪ್ಟ್‌ರೂಟ್ ಲಾಜಿಸ್ಟಿಕ್ಸ್" ಪರಿಚಯಿಸಿದ ಐಐಟಿ ಮದ್ರಾಸ್ - ಮಧ್ಯವರ್ತಿ ರಹಿತ ಸರಕು ಸಾಗಣೆಗೆ ಹೊಸ ಆ್ಯಪ್

ಆಪ್ಟ್‌ರೂಟ್ ಲಾಜಿಸ್ಟಿಕ್ಸ್ ಎಂಬ ತಂತ್ರಾಂಶವನ್ನು ಐಐಟಿ ಮದ್ರಾಸ್ ಅಭಿವೃದ್ಧಿ ಪಡಿಸಿದ್ದು, ಮಧ್ಯವರ್ತಿ ಇಲ್ಲದೇ ಸರಕುಗಳ ಸಾಗಣೆಗೆ ಇದು ಸಹಕಾರಿ ಆಗಲಿದೆ.

IIT Madras
IIT Madras
author img

By ETV Bharat Karnataka Team

Published : Nov 13, 2023, 9:18 PM IST

ಚೆನ್ನೈ (ತಮಿಳುನಾಡು): ಸರಕು ಸಾಗಣೆಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇಲ್ಲದೇ ಸುಗಮವಾಗಿ ಕೊಂಡೊಯ್ಯಲು ಮತ್ತು ನೆರವಾಗಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ (ಐಐಟಿ ಮದ್ರಾಸ್) ಆ್ಯಪ್​ ಒಂದನ್ನು ಬಿಡುಗಡೆ ಮಾಡಿದೆ. ಐಐಟಿ ಮದ್ರಾಸ್ ಸಂಶೋಧಕರು, ಅಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿಗಳು ಮೊಬೈಲ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದ್ದಾರೆ.

OptRoute' Mobile App
ಆಪ್ಟ್‌ರೂಟ್ ಲಾಜಿಸ್ಟಿಕ್ಸ್ ಆ್ಯಪ್​ ನೋಟ

ಆಪ್ಟ್‌ರೂಟ್ ಎಂಬ ಹೆಸರಿನ ಈ ಆ್ಯಪ್ ಈಗ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ. ಪ್ರಸ್ತುತ ಈ ತಂತ್ರಾಂಶ ದೆಹಲಿ, ಚಂಡೀಗಢ, ಕೋಲ್ಕತ್ತಾ, ಇಂದೋರ್, ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ಭಾರತದಾದ್ಯಂತ 21 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಐಐಟಿ ಮದ್ರಾಸ್ ವಿನ್ಯಾಸ ಗೊಳಿಸಿದ 'ಆಪ್ಟ್‌ರೂಟ್ ಲಾಜಿಸ್ಟಿಕ್ಸ್' ನಗರಗಳಲ್ಲಿ ಸರಕುಗಳ ಸಾಗಣೆ ಸರಳಗೊಳಿಸುವ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚಾಲಕ ಮತ್ತು ಗ್ರಾಹಕನ ನಡುವೆ ನೇರ ಸಂಪರ್ಕವನ್ನು ಆ್ಯಪ್​ ಕಲ್ಪಿಸುವುದರಿಂದ ಮಧ್ಯವರ್ತಿಯ ಕಿರಿಕಿರಿ ತಪ್ಪಲಿದೆ. ಅಲ್ಲದೇ ಅಪ್ಲಿಕೇಶನ್ ಯಾವುದೇ ಕಮಿಷನ್ ಅಥವಾ ಆನ್‌ಬೋರ್ಡಿಂಗ್ ಶುಲ್ಕ ನೀಡದೇ ಸರಳ ಸಾಗಣೆ ಮಾಡಬಹುದಾಗಿದೆ. ಗ್ರಾಹಕರು ಮಾಡಿದ ಪಾವತಿಗಳು ನೇರವಾಗಿ ಚಾಲಕರಿಗೆ ಹೋಗುತ್ತವೆ, ಮಧ್ಯವರ್ತಿಗಳನ್ನು ತೊಡೆದುಹಾಕುತ್ತದೆ ಮತ್ತು ಪಾರದರ್ಶಕ ವಹಿವಾಟು ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

ಈ ತಂತ್ರಾಂಶವನ್ನು ಐಐಟಿ ಮದ್ರಾಸ್‌, ಐಐಟಿ ಮದ್ರಾಸ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ.ಎನ್.ಎಸ್. ನಾರಾಯಣಸ್ವಾಮಿ ಮತ್ತು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಅನುಜ್ ಫುಲಿಯಾ ತಯಾರಿಸಿದರು. ಮೆಕ್ಸಿಕೋದ ಕ್ಯಾನ್‌ಕುನ್‌ನಲ್ಲಿ ನಡೆದ 2020ರ ಜೆನೆಟಿಕ್ ಮತ್ತು ಎವಲ್ಯೂಷನರಿ ಕಂಪ್ಯೂಟೇಶನ್ ಸಮ್ಮೇಳನದಲ್ಲಿ ಅಪ್ಲಿಕೇಶನ್‌ನ ಬಗ್ಗೆ ಪ್ರಸ್ತುತ ಪಡಿಸಲಾಗಿತ್ತು.

ಈ ಕುರಿತು ಮಾತನಾಡಿದ ಪ್ರೊ. ನಾರಾಯಣಸ್ವಾಮಿ, "OptRoute ಸರಕು ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಡೊಮೇನ್‌ನಲ್ಲಿ ಚಾಲಕರು ಮತ್ತು ಗ್ರಾಹಕರ ನಡುವಿನ ಸಂಪರ್ಕದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ಮುಖ್ಯವಾಗಿ ಗ್ರಾಹಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ಸರಕಿನ ಭಾರ ಮತ್ತು ವಾಹನದ ಲಭ್ಯತೆ, ಸಾಮರ್ಥ್ಯದ ಬಗ್ಗೆ. ಇವುಗಳನ್ನು ಈ ಆ್ಯಪ್​ನಿಂದ ಸರಿಹೋಗಲಿದೆ. ಅಲ್ಲದೇ ಈ ವ್ಯವಸ್ಥೆ ಸದ್ಯಕ್ಕೆ ಅಸಂಘಟಿತಾವಗಿದೆ. ಈ ಆ್ಯಪ್​ ಮೂಲಕ ಸಂಘಟಿತವಾಗಿ ಬದಲಾಗುವ ಸಾಧ್ಯತೆ ಇದೆ. ಅಲ್ಲದೇ 2022ರ ರಾಷ್ಟ್ರೀಯ ಸರಕು ನೀತಿಗೆ ಸಂಬಂಧಿಸಿದಂತೆ ತಯಾರಿಸಲಾಗಿದೆ" ಎಂದು ತಿಳಿಸಿದರು.

ಆಪ್ಟ್‌ರೂಟ್ ಲಾಜಿಸ್ಟಿಕ್ಸ್​​ನ ಸಹ-ಸಂಸ್ಥಾಪಕರಾದ ಅನುಜ್ ಫುಲಿಯಾ, ಅಪ್ಲಿಕೇಶನ್‌ನ ವಿಶಿಷ್ಟ ವೈಶಿಷ್ಟ್ಯಗಳನ್ನು ತಿಳಿಸಿದರು "ನಾವು ಗ್ರಾಹಕರು ಮತ್ತು ಚಾಲಕರು ಸಂಪರ್ಕ ಹೊಂದಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದೇವೆ. OptRoute ಯಾವುದೇ ಮೂರನೇ ವ್ಯಕ್ತಿಯ ಸೇವೆಗಳನ್ನು ಬಳಸುವುದಿಲ್ಲ, ಮಧ್ಯವರ್ತಿ ಕಡಿತಗೊಳಿಸಲು ಅವಕಾಶ ನೀಡುತ್ತದೆ. ಇದರಿಂದ ಸಾಗಣೆ ವೆಚ್ಚ ಕಡಿಮೆ ಆಗಲಿದೆ. ಹೀಗಾಗಿ ನಮ್ಮ ಸೇವೆಯನ್ನು ಶೂನ್ಯ ಶೇಕಡಾ ಕಮಿಷನ್‌ನೊಂದಿಗೆ ಒದಗಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು.

ಆ್ಯಪ್​ ಬಳಕೆ ಹೇಗೆ?: ಅಪ್ಲಿಕೇಶನ್​ನಲ್ಲಿ ಚಾಲಕ ಮತ್ತು ಗ್ರಾಹಕ ಎಂಬ ಎರಡು ಮೋಡ್​ಗಳು ಇದೆ. ಗ್ರಾಹಕ ಚಾಲಕನಿಗಾಗಿ ಬೇಡಿಕೆಯನ್ನು ಈ ಆ್ಯಪ್​ ಮುಖಾಂತರ ಕಳುಹಿಸಬಹುದು. ಈ ಬೇಡಿಕೆಯನ್ನು ಚಾಲಕ ಆತನ ಪ್ರಯಾಣದ ಅನುಕೂಲಕ್ಕೆ ತಕ್ಕಂತೆ ಸ್ವೀಕರಿಸುತ್ತಾನೆ ಅಥವಾ ತಿರಸ್ಕರಿಸುತ್ತಾನೆ. ಸ್ವೀಕರಿಸಿದಲ್ಲಿ ಆತ ಗ್ರಾಹನ ಬಳಿ ಬಂದು ನೇರವಾಗಿ ಸರಕನ್ನು ತೆಗೆದುಕೊಂಡು ತಲುಪಿಸಬೇಕಾದ ಸ್ಥಳಕ್ಕೆ ಕೊಂಡೊಯ್ಯುತ್ತಾನೆ. ಇಲ್ಲಿ ಕೇವಲ ಸಾಗಣೆ ವೆಚ್ಚವನ್ನು ಚಾಲಕ ಪಡೆಯುತ್ತಾನೆ. ನಡುವೆ ಯಾವುದೇ ಮಧ್ಯವರ್ತಿ ಇರುವುದಿಲ್ಲ. ನೇರವಾಗಿ ಹೇಳುವುದಾದರೆ, ಓಲಾ, ಉಬರ್​ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ.

ಆಪ್ಟ್‌ರೂಟ್ ಲಾಜಿಸ್ಟಿಕ್ಸ್ ಸದ್ಯಕ್ಕೆ ಆ್ಯಂಡ್ರಾಯ್ಡ್​ ​ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಇದನ್ನು ಡೌನ್​ಲೋಡ್​ ಮಾಡಿಕೊಳ್ಳ ಬಹುದಾಗಿದೆ. ವರ್ಷಾಂತ್ಯದ ವೇಳೆಗೆ 500ಕ್ಕೂ ಹೆಚ್ಚು ನಗರಗಳಿಗೆ ಈ ಸೇವೆಗಳನ್ನು ವಿಸ್ತರಿಸುವ ಚಿಂತನೆಯಲ್ಲಿ ಡೆವಲಪರ್​ಗಳು ಇದ್ದಾರೆ. ಪ್ರಸ್ತುತ ಅಪ್ಲಿಕೇಶನ್ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಫರಿದಾಬಾದ್, ಗುರುಗ್ರಾಮ್, ಹೈದರಾಬಾದ್, ಜೈಪುರ, ಲಕ್ನೋ, ಮುಂಬೈ, ಪುಣೆ, ಸೂರತ್ ಮತ್ತು ಇನ್ನೂ ಅನೇಕ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ದಕ್ಷಿಣ ಕೊರಿಯಾದ ವೀಕ್ಷಣಾ ಉಪಗ್ರಹ 'ಅಬ್ಸರ್ವರ್ -1ಎ' ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.