ETV Bharat / science-and-technology

ಹೈಬ್ರಿಡ್ ಮಾದರಿಯ ಉದ್ಯೋಗಗಳು ಮುಂದುವರೆಯಲಿವೆ; ಅಧ್ಯಯನ ವರದಿ

author img

By ETV Bharat Karnataka Team

Published : Nov 23, 2023, 5:49 PM IST

ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವುದು ಮುಂದುವರೆಯಲಿದ್ದು, ಕಂಪನಿಗಳು ಈ ವರ್ಷವೂ ಹೈಬ್ರಿಡ್ ವಿಧಾನದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

Hybrid work here to stay as companies embrace flexibility: Report

ನವದೆಹಲಿ: ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ಪ್ರಗತಿಯು ರಿಮೋಟ್​ ಅಥವಾ ದೂರದಿಂದ ಕೆಲಸ ಮಾಡುವ ವಿಧಾನವನ್ನು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯಸಾಧ್ಯ ಮತ್ತು ತಡೆರಹಿತವಾಗಿಸಿದೆ ಎಂದು ಗುರುವಾರ ವರದಿಯೊಂದು ತಿಳಿಸಿದೆ. ಉದ್ಯೋಗಿಗಳೊಂದಿಗೆ ಆಂತರಿಕವಾಗಿ ಮತ್ತು ಗ್ರಾಹಕರೊಂದಿಗೆ ಬಾಹ್ಯವಾಗಿ ಡಿಜಿಟಲ್ ಮತ್ತು ಭೌತಿಕ ಕೆಲಸದ ಸ್ಥಳದ ಹೊಂದಾಣಿಕೆಗೆ ಸಹಯೋಗ ಸಾಧನಗಳು ಅತ್ಯಗತ್ಯವಾಗಿವೆ.

2023 ರಲ್ಲಿಯೂ ಸಹ, ಕಂಪನಿಗಳು ಹೈಬ್ರಿಡ್ ಮಾದರಿಯ ಉದ್ಯೋಗದ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿವೆ ಎಂದು ಪ್ರಮುಖ ಡೇಟಾ ಮತ್ತು ವಿಶ್ಲೇಷಣಾ ಕಂಪನಿ ಗ್ಲೋಬಲ್ ಡಾಟಾ ವರದಿ ಬಹಿರಂಗಪಡಿಸಿದೆ. ನಿರ್ಮಾಣ, ವಿಮೆ, ಬ್ಯಾಂಕಿಂಗ್ ಮತ್ತು ಪಾವತಿಗಳು, ತಂತ್ರಜ್ಞಾನ ಮತ್ತು ಸಂವಹನ ಮತ್ತು ಔಷಧಿಗಳಂತಹ ಕ್ಷೇತ್ರಗಳು 2023 ರ ಮೂರನೇ ತ್ರೈಮಾಸಿಕದಲ್ಲಿ (ಕ್ಯೂ 3) ಗಮನಾರ್ಹ ಹೈಬ್ರಿಡ್ ಉದ್ಯೋಗ ನೇಮಕಾತಿಗಳನ್ನು ಪ್ರಕಟಿಸಿವೆ ಎಂದು ವರದಿ ಬಹಿರಂಗಪಡಿಸಿದೆ.

"ಕೋವಿಡ್ -19 ನಂತರದ ನೌಕರಿಯ ವಿಧಾನಗಳು ಹೈಬ್ರಿಡ್ ಮತ್ತು ಹೊಂದಿಕೊಳ್ಳುವ ಕೆಲಸದ ಮಾದರಿಗಳತ್ತ ಬದಲಾವಣೆಯಾಗಿವೆ. ಉದ್ಯಮದ ಹೆಚ್ಚಿನ ವಲಯಗಳು ಹೊಂದಿಕೊಳ್ಳುವ ಕೆಲಸದ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ 'ಇನ್-ಆಫೀಸ್' ಉದ್ಯೋಗಗಳ ಜೊತೆಗೆ ಇವು ಕೂಡ ಸಹಜವಾಗಬಹುದು" ಎಂದು ಗ್ಲೋಬಲ್ ಡಾಟಾದ ಬಿಸಿನೆಸ್ ಫಂಡಮೆಂಟಲ್ಸ್ ಅನಾಲಿಸ್ಟ್ ಶೆರ್ಲಾ ಶ್ರೀಪ್ರದಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಹೈಬ್ರಿಡ್ ಕೆಲಸದ ಮಾದರಿಗಳಿಗೆ ಬದಲಾವಣೆಯಾಗುವುದು ಕೇವಲ ಪ್ರವೃತ್ತಿಯಲ್ಲ; ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಕಂಪನಿಗಳಿಗೆ ಇದನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಹೈಬ್ರಿಡ್ ಉದ್ಯೋಗಗಳು ನಾವು ಕೆಲಸ ಮಾಡುವ ವಿಧಾನದಲ್ಲಿ ಆಳವಾದ ಪರಿವರ್ತನೆಯನ್ನು ಸೂಚಿಸುತ್ತವೆ. ಕೋವಿಡ್ -19 ನಂತರದ ಯುಗದಲ್ಲಿ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸುತ್ತವೆ" ಎಂದು ಶ್ರೀಪ್ರದಾ ಹೇಳಿದರು.

ರಿಮೋಟ್ ವರ್ಕ್ ಎಂದರೆ ಉದ್ಯೋಗಿಗಳು ತಮ್ಮ ಕೆಲಸಗಳನ್ನು ಉದ್ಯೋಗದಾತರಿಂದ ನಿರ್ವಹಿಸಲ್ಪಡುವ ಕೇಂದ್ರ ಕಚೇರಿಯನ್ನು ಹೊರತುಪಡಿಸಿ ಬೇರೆ ಸ್ಥಳದಿಂದ ಮಾಡುವ ವಿಧಾನವಾಗಿದೆ. ಉದ್ಯೋಗಿಯ ಮನೆ, ಕೋ-ವರ್ಕ್ ಪ್ಲೇಸ್ ಅಥವಾ ಇತರ ಹಂಚಿಕೆಯ ಸ್ಥಳ, ಖಾಸಗಿ ಕಚೇರಿ ಅಥವಾ ಸಾಂಪ್ರದಾಯಿಕ ಕಾರ್ಪೊರೇಟ್ ಕಚೇರಿ ಕಟ್ಟಡ ಅಥವಾ ಕ್ಯಾಂಪಸ್​ನ ಹೊರಗಿನ ಯಾವುದೇ ಸ್ಥಳದಿಂದ ಉದ್ಯೋಗಿಗಳು ಕೆಲಸ ಮಾಡಬಹುದು. ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಿಮೋಟ್​ ಅಥವಾ ವರ್ಕ್ ಫ್ರಮ್ ಹೋಮ್ ಹೆಚ್ಚು ಪ್ರಾಮುಖ್ಯತೆ ಪಡೆಯಿತು. ಇತ್ತೀಚೆಗೆ ಕಚೇರಿಯಿಂದ ಕೆಲಸ ಮತ್ತು ರಿಮೋಟ್​ ವರ್ಕ್ ಎರಡನ್ನೂ ಒಳಗೊಂಡ ಹೈಬ್ರಿಡ್ ಮಾದರಿಯ ವಿಧಾನ ಜನಪ್ರಿಯವಾಗುತ್ತಿದೆ.

ಇದನ್ನೂ ಓದಿ : ಯೂಟ್ಯೂಬ್​ ವೀಡಿಯೊಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಿದೆ ಗೂಗಲ್ 'ಬಾರ್ಡ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.