ಮೆಟಾ ಒಡೆತನದ ವಾಟ್ಸ್ಆ್ಯಪ್ ಬಳಕೆದಾರರ ಅನುಕೂಲಕ್ಕಾಗಿ ಇತ್ತೀಚೆಗೆ ಹೊಸ ಅಪ್ಡೇಟ್ ಒಂದನ್ನು ಪರಿಚಯಿಸಿದೆ. ಡೆಸ್ಕ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ವೆಬ್ಸೈಟ್ ಮೂಲಕ ವಾಟ್ಸ್ಆ್ಯಪ್ ಬಳಸುವಾಗ ಸ್ಕ್ರೀನ್ ಲಾಕ್ ಮಾಡುವ ಹೊಸ ವೈಶಿಷ್ಟ್ಯವನ್ನು ಅದು ತಂದಿದೆ. ಇದರಿಂದ ಕಚೇರಿಯಲ್ಲಿ ಅಥವಾ ಬೇರೆಡೆ ವಾಟ್ಸ್ಆ್ಯಪ್ ವೆಬ್ ಬಳಸುವಾಗ ಬಳಕೆದಾರರು ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.
ನಿಮ್ಮ ಕಚೇರಿಯ ಕಂಪ್ಯೂಟರ್ನಲ್ಲಿ ನೀವು ವಾಟ್ಸ್ಆ್ಯಪ್ ಬಳಸುತ್ತಿದ್ದರೆ ಮತ್ತು ವಿರಾಮ ಅಥವಾ ಇತರ ಕಾರಣಗಳಿಗಾಗಿ ಹೊರಗೆ ಹೋಗುವ ಸಂದರ್ಭ ಬಂದಾಗ ವಾಟ್ಸ್ಆ್ಯಪ್ ಲಾಗ್ ಔಟ್ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದಾಗ್ಯೂ, ಪದೇ ಪದೆ ಲಾಗ್ ಇನ್ ಮತ್ತು ಔಟ್ ಆಗುವುದು ಕಿರಿಕಿರಿಯಾಗುತ್ತದೆ ಹಾಗೂ ಮತ್ತೆ ಲಾಗ್ ಇನ್ ಮಾಡಿದಾಗ ಮೆಸೇಜ್ಗಳು ಲೋಡ್ ಆಗಲು ಸಮಯ ಹಿಡಿಯುತ್ತದೆ.
ಈ ಸಮಸ್ಯೆಯನ್ನು ಪರಿಹರಿಸಲು ವಾಟ್ಸ್ಆ್ಯಪ್ ತನ್ನ ವೆಬ್ ಆವೃತ್ತಿಗಾಗಿ ಸ್ಕ್ರೀನ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ಸುರಕ್ಷಿತಗೊಳಿಸಲು ಹೆಚ್ಚು ಅನುಕೂಲಕರವಾಗಿದೆ. ವಾಟ್ಸ್ಆ್ಯಪ್ ಸ್ಕ್ರೀನ್ ಲಾಕ್ ವೈಶಿಷ್ಟ್ಯ ಬಳಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವಾಟ್ಸ್ಆ್ಯಪ್ ವೆಬ್ ಸ್ಕ್ರೀನ್ ಲಾಕ ಮಾಡಲು ಈ ಹಂತಗಳನ್ನು ಅನುಸರಿಸಿ:
- WhatsApp ವೆಬ್ ಗೆ ಲಾಗಿನ್ ಮಾಡಿ
- QR ಕೋಡ್ ಬಳಸಿ web ಡಾಟ್ whatsapp ಡಾಟ್ com ಲಾಗ್ ಇನ್ ಮಾಡುವ ಮೂಲಕ ಪ್ರಾರಂಭಿಸಿ.
- Settings ಗೆ ಹೋಗಿ
- ಮೇಲಿನ ಮೆನುನಲ್ಲಿರುವ ಮೂರು-ಡಾಟ್ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು Settings ಗೆ ನ್ಯಾವಿಗೇಟ್ ಮಾಡಿ.
- ಈಗ Privacy ಕ್ಲಿಕ್ ಮಾಡಿ
- Settings ಮೆನುನಲ್ಲಿ Privacy tab ಅನ್ನು ಹುಡುಕಿ.
- ಇದರಲ್ಲಿ Screen lock ಆಯ್ಕೆಮಾಡಿ
- ಈಗ password ರಚಿಸಿ
- ಪಾಸ್ ವರ್ಡ್ ರಚಿಸಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ. ನಿಮ್ಮ ಪಾಸ್ ವರ್ಡ್ ಅಕ್ಷರಗಳು, ಸಂಖ್ಯೆಗಳು ಮತ್ತು ಸಾಮಾನ್ಯ ವಿರಾಮ ಚಿಹ್ನೆಗಳು ಸೇರಿದಂತೆ 6 ರಿಂದ 128 ಅಕ್ಷರಗಳ ನಡುವೆ ಇರಬೇಕು. ಪಾಸ್ ವರ್ಡ್ Confirm ಮಾಡಿ ಮತ್ತು OK ಕ್ಲಿಕ್ ಮಾಡಿ.
- ಈಗ Set automatic Screen lock ಸೆಟ್ ಮಾಡಿಕೊಳ್ಳಿ
- ಹೆಚ್ಚುವರಿಯಾಗಿ ನೀವು 1 ನಿಮಿಷ, 15 ನಿಮಿಷಗಳು ಅಥವಾ 1 ಗಂಟೆಯಂತಹ ಆಯ್ಕೆಗಳಿಂದ ಸ್ವಯಂಚಾಲಿತ ಸ್ಕ್ರೀನ್ ಲಾಕ್ ಸಮಯವನ್ನು ಆಯ್ಕೆ ಮಾಡಬಹುದು.
ನೀವು ಆಕಸ್ಮಾತ್ ಪಾಸ್ವರ್ಡ್ ಮರೆತರೆ ವಾಟ್ಸ್ಆ್ಯಪ್ ವೆಬ್ ಅನ್ನು ಲಾಗ್ ಔಟ್ ಮಾಡುವ ಮೂಲಕ ಮತ್ತು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತೆ ಲಾಗ್ ಇನ್ ಮಾಡುವ ಮೂಲಕ ಅದನ್ನು ರಿ - ಸೆಟ್ ಮಾಡಬಹುದು. ಹೀಗೆ ಸ್ಕ್ರೀನ್ ಲಾಕ್ ಸೆಟ್ ಮಾಡಿಕೊಂಡರೆ ಬೇರೆಯವರು ನಿಮ್ಮ ಕಂಪ್ಯೂಟರ್ ಬಳಸಿದರೂ ನಿಮ್ಮ ವಾಟ್ಸ್ಆ್ಯಪ್ನ ಮಾಹಿತಿ ಅವರಿಗೆ ಗೋಚರವಾಗುವುದಿಲ್ಲ.
ಇದನ್ನೂ ಓದಿ : ಇನ್ಸ್ಟಾಗ್ರಾಮ್ ರೀಲ್ಸ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ