ಹೈದರಾಬಾದ್: ಮಾನವ ಇರುವ ಏಕೈಕ ಗ್ರಹವೆಂದರೆ ಅದು ಭೂಮಿ ಮಾತ್ರ. ಇಲ್ಲಿ ಎಲ್ಲ ಜೀವಿಗಳಿಗಿಂತ ಮನುಷ್ಯರೇ ಹೆಚ್ಚಿದ್ದಾರೆ. ಮನುಷ್ಯರನ್ನೂ ಮೀರಿಸುವ ಸಂಖ್ಯೆಯಲ್ಲಿ ಇರುವೆಗಳಿವೆ ಎಂಬುದು ಅಚ್ಚರಿಯ ಸಂಗತಿ.
ನಿಜ, ಇರುವೆಗಳ ನಿಖರ ಮಾಹಿತಿಯನ್ನು ಅರಿಯಲು ಹಾಂಕಾಂಗ್ನ ಸಂಶೋಧಕರು ವಿಶ್ವದಾದ್ಯಂತ 489 ಅಧ್ಯಯನ ನಡೆಸಿದ್ದಾರೆ. ಭೂಮಿ ಮೇಲೆ 20 ಕ್ವಾಡ್ರಿಲಿಯನ್ ಇರುವೆಗಳಿವೆ ಎಂಬುದನ್ನು ಅಂದಾಜಿಸಲಾಗಿದೆ. ಈ ಸಂಶೋಧನೆಯ ವಿವರ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾಗಿವೆ.
ಇರುವೆಗಳ ನಿಖರವಾದ ಸಂಖ್ಯೆಯನ್ನು ಅಂದಾಜು ಮಾಡುವುದು ಅಸಾಧ್ಯವಾದರೂ, ಹಾಂಕಾಂಗ್ನ ಸಂಶೋಧಕರು ಜಗತ್ತಿನಲ್ಲಿರುವ ಇರುವೆಗಳ ಲೆಕ್ಕ ಹಾಕುವ ಸಾಹಸ ಮಾಡಿದ್ದಾರೆ. ಇದಕ್ಕಾಗಿ 489 ಅಧ್ಯಯನಗನ್ನು ನಡೆಸಿ, ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಭೂಮಿಯ ಮೇಲೆ 20 ಕ್ವಾಡ್ರಿಲಿಯನ್ ಇರುವೆಗಳಿವೆ ಎಂದು ಲೆಕ್ಕ ಹಾಕಿದ್ದಾರೆ.( ಒಂದು ಅಂದಾಜಿನ ಅಂದರೆ ಭಾರತೀಯ ಲೆಕ್ಕದಲ್ಲಿ 1ಕೋಟಿ ಲಕ್ಷಗಳಷ್ಟು ಇರುವೆಗಳಿವೆ ಎಂದು ಅಂದಾಜಿಸಲಾಗಿದೆ - 1 Quadrillion is the product of crore and ten crores in Indian numbering system. ie 1,00,00,000 * 10,00,00,000 = 1,00,00,00,00,00,00,000.)
"ಇರುವೆಗಳು ಸರ್ವವ್ಯಾಪಿಯಾಗಿರುವುದರಿಂದ ಭೂಮಿಯ ಮೇಲೆ ಅವುಗಳ ನಿಖರ ಸಂಖ್ಯೆಯನ್ನು ಅಂದಾಜು ಮಾಡುವುದು ಕಷ್ಟ. ಆದಾಗ್ಯೂ, ಪ್ರಪಂಚದ ವಿವಿಧ ಭಾಗಗಳಲ್ಲಿ ಇರುವೆಗಳ ಸಾಂದ್ರತೆಯ ಮೇಲೆ ನಡೆಸಲಾದ 489 ಅಧ್ಯಯನಗಳಿಂದ ಅವುಗಳ ಸಂಖ್ಯೆಯನ್ನು ಅಂದಾಜು ಮಾಡಿದ್ದೇವೆ" ಎಂದು ಸಂಶೋಧಕರ ತಂಡ ಹೇಳಿದೆ.
ಸಂಶೋಧನಾ ತಂಡ ಜಗತ್ತಿನಲ್ಲಿರುವ ಇರುವೆಗಳ ಜೀವರಾಶಿಯನ್ನು ಸಹ ಅಂದಾಜು ಮಾಡಿದೆ. ಕಾಡಿನಲ್ಲಿ ವಾಸಿಸುವ ಪಕ್ಷಿಗಳು ಮತ್ತು ಸಸ್ತನಿಗಳ ಒಟ್ಟು ತೂಕವು ಸುಮಾರು 2 ಮಿಲಿಯನ್ ಟನ್ಗಳಿಷ್ಟಿದ್ದರೆ, ಇರುವೆಗಳ ಜೀವರಾಶಿ ಸುಮಾರು 12 ಮಿಲಿಯನ್ ಟನ್ಗಳಿಷ್ಟಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಒಂದು ಪ್ರದೇಶದಲ್ಲಿ ವಾಸಿಸುವ ಜೀವಿಗಳ ಒಟ್ಟು ಪ್ರಮಾಣ ಅಥವಾ ತೂಕವನ್ನು ಜೀವರಾಶಿ ಎಂದು ಹೇಳಲಾಗುತ್ತದೆ.
ಓದಿ: ಆ್ಯಪಲ್ ಐಫೋನ್ 14 ಕ್ಯಾಮೆರಾದಲ್ಲಿ ದೋಷ.. ಶೀಘ್ರವೇ ಸಮಸ್ಯೆಗೆ ಪರಿಹಾರ: ಕಂಪನಿ