ETV Bharat / science-and-technology

ಬ್ಯಾಟರಿಯಲ್ಲಿನ ಸಮಸ್ಯೆಯೇ ವಿದ್ಯುತ್​​ಚಾಲಿತ ವಾಹನಗಳ ಅವಘಡಕ್ಕೆ ಕಾರಣ: ಸರ್ಕಾರದ ಸಮಿತಿ - ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟದ ಮಾರ್ಗಸೂಚಿಗಳನ್ನು ಸರ್ಕಾರ ಶೀಘ್ರದಲ್ಲೇ ಹೊರಡಿಸಲಿದೆ. ಒಂದು ವೇಳೆ ಯಾವುದೇ ಕಂಪನಿಯು ನಿಯಮಗಳಲ್ಲಿ ನಿರ್ಲಕ್ಷ್ಯ ತೋರಿದರೆ, ಭಾರಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಎಲ್ಲ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುತ್ತದೆ ಎಂದು ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

Govt panel finds defect in battery cells in almost all EV fires
ಬ್ಯಾಟರಿಯಲ್ಲಿನ ಸಮಸ್ಯೆಯೇ ವಿದ್ಯುತ್​​ಚಾಲಿತ ವಾಹನಗಳ ಅವಘಡಕ್ಕೆ ಕಾರಣ: ಸರ್ಕಾರದ ಸಮಿತಿ
author img

By

Published : May 6, 2022, 9:37 PM IST

ನವದೆಹಲಿ: ವಿದ್ಯುತ್​​ಚಾಲಿತ ಬೈಕ್ ಮತ್ತು ಸ್ಕೂಟರ್​ಗಳು ಆಗಾಗ ಬೆಂಕಿಗೆ ಆಹುತಿಯಾಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತನಿಖಾ ಸಮಿತಿ ಪ್ರಾಥಮಿಕ ವರದಿಯನ್ನು ನೀಡಿದ್ದು, ವಿದ್ಯುತ್​ ಚಾಲಿತ ದ್ವಿಚಕ್ರವಾಹನಗಳ ಬ್ಯಾಟರಿಗಳಲ್ಲೇ ಸಮಸ್ಯೆ ಇರುವುದಾಗಿ ಸ್ಪಷ್ಟಪಡಿಸಿವೆ. ಈ ವರದಿ ದ್ವಿಚಕ್ರವಾಹನ ತಯಾರಕರನ್ನುಇಕ್ಕಟ್ಟಿಗೆ ಸಿಲುಕಿಸಿದೆ.

ಓಕಿನಾವಾ ಆಟೋಟೆಕ್, ಬೂಮ್ ಮೋಟಾರ್, ಪ್ಯೂರ್ ಇವಿ, ಜಿತೇಂದ್ರ ಇವಿ ಮತ್ತು ಓಲಾ ಎಲೆಕ್ಟ್ರಿಕ್‌ಗೆ ಸೇರಿದ ಇ-ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮತ್ತು ವಾಹನಗಳಲ್ಲಿನ ಬ್ಯಾಟರಿ ಸ್ಫೋಟವಾಗುವ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿತ್ತು.

ತೆಲಂಗಾಣದಲ್ಲಿ ನಿಜಾಮಾಬಾದ್ ಜಿಲ್ಲೆಯಲ್ಲಿ ವಿದ್ಯುತ್​ಚಾಲಿತ ಸ್ಕೂಟರ್​ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧ ಸಾವನ್ನಪ್ಪಿದ್ದು ಮಾತ್ರವಲ್ಲದೇ, ಇಬ್ಬರು ಗಾಯಗೊಂಡಿದ್ದರು. ಪ್ಯೂರ್ ಇವಿ ಕಂಪನಿ ಈ ದ್ವಿಚಕ್ರವಾಹನವನ್ನು ತಯಾರು ಮಾಡಿತ್ತು. ಇದು ಮಾತ್ರವಲ್ಲದೇ ಎಲ್ಲ ಸ್ಕೂಟರ್​ಗಳಲ್ಲೂ ಕೂಡಾ ಬ್ಯಾಟರಿ ಸೆಲ್‌ಗಳು ಮತ್ತು ಬ್ಯಾಟರಿ ವಿನ್ಯಾಸದಲ್ಲಿ ದೋಷಗಳನ್ನು ತಜ್ಞರು ಕಂಡುಕೊಂಡಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ:ತಜ್ಞರು ಈಗ ದ್ವಿಚಕ್ರ ವಾಹನಗಳಲ್ಲಿನ ಬ್ಯಾಟರಿ ಸಮಸ್ಯೆಗಳನ್ನು ಪರಿಹರಿಸಲು ಕಂಪನಿಗಳೊಂದಿಗೆ ಪ್ರತ್ಯೇಕವಾಗಿ ಕೆಲಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ. ಸಮಸ್ಯೆಗಳನ್ನು ನಿವಾರಿಸಲು ವಿಶ್ವದರ್ಜೆಯ ಏಜೆನ್ಸಿಗಳನ್ನು ನಿಯೋಜನೆ ಮಾಡಲಾಗಿದೆ. ನಮ್ಮ ಸ್ವಂತ ತನಿಖೆಯ ಜೊತೆಗೆ, ಮೂಲ ಕಾರಣದ ಬಗ್ಗೆ ಆಂತರಿಕ ಮೌಲ್ಯಮಾಪನವನ್ನು ಮಾಡಲು ಈ ಏಜೆನ್ಸಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಓಲಾ ಎಲೆಕ್ಟ್ರಿಕ್ ಕಂಪನಿ ಐಎಎನ್‌ಎಸ್‌ಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

1441 ವಾಹನಗಳನ್ನ ವಾಪಸ್​ ಪಡೆದ ಓಲಾ: ಓಲಾ ಎಲೆಕ್ಟ್ರಿಕ್ ಕಂಪನಿ ಈಗಾಗಲೇ ಸ್ವಯಂಪ್ರೇರಣೆಯಿಂದ 1,441 ವಾಹನಗಳನ್ನು ತಪಾಸಣೆಗಾಗಿ ವಾಪಸ್ ಪಡೆದಿದೆ. ನಮ್ಮ ಬ್ಯಾಟರಿ ಪ್ಯಾಕ್ ಈಗಾಗಲೇ ನಿಯಮಗಳನ್ನು ಅನುಸರಿಸುತ್ತಿದೆ. ಭಾರತದ ಇತ್ತೀಚಿನ ಮಾನದಂಡವಾದ ಎಐಎಸ್ 156 ಅನ್ನು ಅನುಸರಿಸಲಾಗಿದೆ. ಇದರ ಜೊತೆಗೆ ಯುರೋಪಿಯನ್ ಸ್ಟ್ಯಾಂಡರ್ಡ್ ಇಸಿಇ 136ಗೆ ಅನುಗುಣವಾಗಿ ವಾಹನಗಳನ್ನು ತಯಾರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಮತ್ತೊಂದು ಕಂಪನಿಯಾದ ಓಕಿನಾವಾ ಆಟೋಟೆಕ್ ಈ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿತು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಕಡ್ಡಾಯ ವಿಮೆಗೆ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಮನವಿಯ ಮೇಲೆ ದೆಹಲಿ ಹೈಕೋರ್ಟ್ ಈ ವಾರ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವಿಮಾ ರಕ್ಷಣೆಯ ಹೊರತಾಗಿ, ವಾಹನ ಅಧಿಕ ಬಿಸಿಯಾಗುವಿಕೆ ಮತ್ತು ಬೆಂಕಿ ಅಪಘಾತಗಳನ್ನು ತಪ್ಪಿಸುವ ರೀತಿಯಲ್ಲಿ ತಯಾರಕರು ವಾಹನದಲ್ಲಿ ಅತ್ಯುತ್ತಮ ಬ್ಯಾಟರಿಗಳನ್ನು ತಯಾರಿಸಬೇಕೆಂದು ಹೇಳಲಾಗಿದೆ.

ಶೀಘ್ರದಲ್ಲೇ ಮಾರ್ಗಸೂಚಿ: ವಿದ್ಯುನ್ಮಾನ ವಾಹನಗಳ ತಯಾರಕರಿಗೆ ಎಚ್ಚರಿಕೆ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟದ ಮಾರ್ಗಸೂಚಿಗಳನ್ನು ಸರ್ಕಾರ ಶೀಘ್ರದಲ್ಲೇ ಹೊರಡಿಸಲಿದೆ. ಒಂದು ವೇಳೆ ಯಾವುದೇ ಕಂಪನಿಯು ನಿಯಮಗಳಲ್ಲಿ ನಿರ್ಲಕ್ಷ್ಯ ತೋರಿದರೆ, ಭಾರಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುತ್ತದೆ ಎಂದಿದ್ದರು.

ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಪರಿಹಾರ ಕ್ರಮಗಳನ್ನು ಶಿಫಾರಸುಗಳನ್ನು ಮಾಡಲು ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ವರದಿಗಳ ಆಧಾರದ ಮೇಲೆ ನಾವು ಕಂಪನಿಗಳ ಮೇಲೆ ಅಗತ್ಯ ಆದೇಶಗಳನ್ನು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎರಡು ಆಕಾಶ್ ಪ್ರೈಮ್ ಕ್ಷಿಪಣಿ ವ್ಯವಸ್ಥೆಯ ಎರಡು ರೆಜಿಮೆಂಟ್ ಪಡೆಯಲಿರುವ ಭಾರತೀಯ ಸೇನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.