ETV Bharat / science-and-technology

ಯೂಟ್ಯೂಬ್​ ವೀಡಿಯೊಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಿದೆ ಗೂಗಲ್ 'ಬಾರ್ಡ್​'

ಯೂಟ್ಯೂಬ್ ವೀಡಿಯೊಗಳ ಬಗ್ಗೆ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಬಾರ್ಡ್​ ಅಪ್ಡೆಟ್​ ಅನ್ನು ಗೂಗಲ್ ಬಿಡುಗಡೆ ಮಾಡಿದೆ.

Google now lets you ask questions about YouTube videos to Bard

author img

By ETV Bharat Karnataka Team

Published : Nov 23, 2023, 4:02 PM IST

ನವದೆಹಲಿ: ಗೂಗಲ್​ ಎಐ ಚಾಟ್​ಬಾಟ್​ ಬಾರ್ಡ್​ ಇನ್ನು ಮುಂದೆ ಯೂಟ್ಯೂಬ್ ಬಗ್ಗೆ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದೆ. ನಿರ್ದಿಷ್ಟ ಯೂಟ್ಯೂಬ್ ವೀಡಿಯೊ ಬಗ್ಗೆ ನೀವು ಬಾರ್ಡ್​ಗೆ ಪ್ರಶ್ನೆ ಕೇಳಬಹುದು ಮತ್ತು ವೀಡಿಯೊದಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಪಡೆಯಬಹುದು. ಗೂಗಲ್ ಈಗಾಗಲೇ ಬಾರ್ಡ್​ನ ಈ ಹೊಸ ಅಪ್ಡೇಟ್ ಬಿಡುಗೆ ಮಾಡಲಾರಂಭಿಸಿದೆ.

"ಬಾರ್ಡ್​ಗೆ ಯೂಟ್ಯೂಬ್ ವೀಡಿಯೊಗಳನ್ನು ಅರ್ಥಮಾಡಿಸುವ ಪ್ರಯತ್ನದಲ್ಲಿ ನಾವು ಮೊದಲ ಹೆಜ್ಜೆಗಳನ್ನು ಇಡುತ್ತಿದ್ದೇವೆ" ಎಂದು ಗೂಗಲ್ ಬಾರ್ಡ್​ನ ಅಪ್ಡೇಟ್​ ಪೇಜ್​ನಲ್ಲಿ ಬರೆಯಲಾಗಿದೆ.

"ಉದಾಹರಣೆಗೆ, ನೀವು ಆಲಿವ್ ಆಯಿಲ್​​ನ ಕೇಕ್ ಅನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ವೀಡಿಯೊಗಳನ್ನು ಹುಡುಕುತ್ತಿದ್ದರೆ, ಮೊದಲ ವೀಡಿಯೊದಲ್ಲಿನ ರೆಸಿಪಿಯಲ್ಲಿ ಎಷ್ಟು ಮೊಟ್ಟೆಗಳನ್ನು ಬಳಸಲಾಗಿದೆ ಎಂದು ನೀವು ಈಗ ಕೇಳಬಹುದು" ಎಂದು ಅದು ವಿವರಿಸಿದೆ. "ಕೆಲ ವೀಡಿಯೊ ಕಂಟೆಂಟ್​ಗಳನ್ನು ಅರ್ಥಮಾಡಿಕೊಳ್ಳಲು ಯೂಟ್ಯೂಬ್ ಎಕ್ಸ್​ಟೆನ್ಷನ್ ಅನ್ನು ವಿಸ್ತರಿಸಲಾಗಿದೆ. ಇದರಿಂದ ನೀವು ಬಾರ್ಡ್​ನೊಂದಿಗೆ ಸಹಜವಾಗಿ ಸಂಭಾಷಣೆ ನಡೆಸಬಹುದು" ಎಂದು ಕಂಪನಿ ಹೇಳಿದೆ.

ಈ ಅಪ್ಡೇಟ್ ಬರುವುದಕ್ಕಿಂತ ಮೊದಲು ಬಾರ್ಡ್ ಯೂಟ್ಯೂಬ್ ಎಕ್ಸ್​ಟೆನ್ಷನ್ ಮೂಲಕ ಕೆಲ ನಿರ್ದಿಷ್ಟ ವೀಡಿಯೊಗಳನ್ನು ಮಾತ್ರ ಹುಡುಕಬಹುದಾಗಿತ್ತು. ಯೂಟ್ಯೂಬ್​ನ ಕಂಟೆಂಟ್​ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವಾಗ ಕಂಟೆಂಟ್​ನ ಸಾರಾಂಶವನ್ನು ಕೂಡ ಹೇಳುವ ಹೊಸ ಬಾರ್ಡ್​ ವೈಶಿಷ್ಟ್ಯಗಳನ್ನು ತಯಾರಿಸಲು ಎರಡು ವಾರಗಳ ಹಿಂದೆ ಯೂಟ್ಯೂಬ್ ಪ್ರಯತ್ನಗಳನ್ನು ನಡೆಸಿತ್ತು. ಸದ್ಯ ಆ ಅಪ್ಡೇಟ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಮತ್ತಷ್ಟು ದೇಶಗಳಲ್ಲಿ ಹದಿಹರೆಯದವರಿಗೆ ಬಾರ್ಡ್ ಲಭ್ಯವಾಗುವಂತೆ ಮಾಡುವುದಾಗಿ ಗೂಗಲ್ ಘೋಷಿಸಿದೆ.

"ತಮ್ಮ ಸ್ವಂತ ಗೂಗಲ್ ಖಾತೆಯನ್ನು ಬಳಸಲು ಕನಿಷ್ಠ ವಯಸ್ಸಿನ ಅಗತ್ಯವನ್ನು ಪೂರೈಸುವ ದೇಶಗಳಲ್ಲಿನ ಹದಿಹರೆಯದವರು ಇಂಗ್ಲಿಷ್​ ಭಾಷೆಯಲ್ಲಿ ಬಾರ್ಡ್ ಅನ್ನು ಬಳಸಲು ಸಾಧ್ಯವಾಗಲಿದೆ. ಕಾಲಾನಂತರದಲ್ಲಿ ಹೆಚ್ಚಿನ ಭಾಷೆಗಳಿಗೆ ಇದನ್ನು ವಿಸ್ತರಿಸಲಾಗುವುದು" ಎಂದು ಗೂಗಲ್​ನ ರೆಸ್ಪಾನ್ಸಿಬಲ್ ಎಐ ವಿಭಾಗದ ಉತ್ಪನ್ನ ಮುಖ್ಯಸ್ಥೆ ತುಳಸಿ ದೋಷಿ ಹೇಳಿದರು.

ಬಾರ್ಡ್ ಇದು ಗೂಗಲ್​ನ ಪ್ರಾಯೋಗಿಕ ಸಂಭಾಷಣಾ ಎಐ ಚಾಟ್ ಬಾಟ್ ಆಗಿದೆ. ಇದು ಚಾಟ್​ ಜಿಪಿಟಿಯಂತೆಯೇ ಕೆಲಸ ಮಾಡುತ್ತದೆ. ಚಾಟ್​ ಜಿಪಿಟಿಗೆ ಹೋಲಿಸಿದರೆ ವೆಬ್​ನಿಂದಲೇ ಮಾಹಿತಿಯನ್ನು ಪಡೆದು ನೀಡುವುದು ಬಾರ್ಡ್​ನ ವ್ಯತ್ಯಾಸವಾಗಿದೆ. ಬಹುತೇಕ ಎಐ ಚಾಟ್​ಬಾಟ್​ಗಳಂತೆ ಬಾರ್ಡ್ ಕೋಡ್ ಬರೆಯಬಹುದು, ಗಣಿತ ಸಮಸ್ಯೆಗಳಿಗೆ ಉತ್ತರಿಸಬಹುದು ಮತ್ತು ನಿಮ್ಮ ಬರವಣಿಗೆಯ ಅಗತ್ಯಗಳಿಗೆ ಸಹಾಯ ಮಾಡಬಹುದು.

ಇದನ್ನೂ ಓದಿ : ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.