ETV Bharat / science-and-technology

Google Update:ಸ್ವಯಂಚಾಲಿತವಾಗಿ ಲೈನ್ ನಂಬರ್ ಸೇರಿಸಲಿದೆ Google Docs - ಈಟಿವಿ ಭಾರತ ಕನ್ನಡ

Google Update: ಗೂಗಲ್​ ಡಾಕ್ಸ್​ನಲ್ಲಿ ಪೇಜ್ ಮೋಡ್​ನಲ್ಲಿ ಇನ್ನು ಮುಂದೆ ಗೂಗಲ್ ಸ್ವಯಂಚಾಲಿತವಾಗಿ ಲೈನ್ ನಂಬರ್​ಗಳನ್ನು ಸೇರಿಸುತ್ತಿದೆ.

Google Docs to now automatically add line numbers

author img

By

Published : Jul 25, 2023, 4:02 PM IST

ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ಡಾಕ್ಸ್​ನಲ್ಲಿ ಲೈನ್ ನಂಬರ್ ಸೇರಿಸುವ ಹೊಸ ವೈಶಿಷ್ಟ್ಯವನ್ನು ಗೂಗಲ್ ಪರಿಚಯಿಸಿದೆ. ಇದು ಪೇಜ್ ಮೋಡ್​ನಲ್ಲಿ ಸೆಟ್ ಮಾಡಲಾದ ಡಾಕ್ಸ್‌ನಲ್ಲಿ ಲೈನ್ ನಂಬರ್​ಗಳನ್ನು ಸ್ವಯಂಚಾಲಿತವಾಗಿ ಪ್ರದರ್ಶಿಸಲಿದೆ. "ಗೂಗಲ್ ಡಾಕ್ಸ್‌ನಲ್ಲಿ ಫಾರ್ಮ್ಯಾಟಿಂಗ್ ಮೇಲೆ ಹೆಚ್ಚಿನ ನಿಯಂತ್ರಣ ನೀಡುವ ಹಿಂದಿನ ಅಪ್‌ಡೇಟ್‌ಗಳ ಜೊತೆಗೆ, ಮುದ್ರಣವಾಗದ ಅಕ್ಷರಗಳನ್ನು ವೀಕ್ಷಿಸುವುದು ಮತ್ತು ಕಂಟೆಂಟ್ ಆರ್ಗನೈಸೇಶನ್ ವರ್ಧನೆಗಳು, ಪೇಜ್ ಮೋಡ್‌ಗೆ ಹೊಂದಿಸಲಾದ ಡಾಕ್ಸ್‌ನಲ್ಲಿ ಲೈನ್ ಸಂಖ್ಯೆಗಳನ್ನು ಪ್ರದರ್ಶಿಸುವ ಸೌಲಭ್ಯಗಳನ್ನು ನಾವು ಪರಿಚಯಿಸುತ್ತಿದ್ದೇವೆ" ಎಂದು ಗೂಗಲ್ ಸೋಮವಾರ ವರ್ಕ್​​ಸ್ಪೇಸ್ ಅಪ್​ಡೇಟ್ಸ್​ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಈ ವೈಶಿಷ್ಟ್ಯವು ಬಳಕೆದಾರರಿಗೆ ಡಾಕ್ಯುಮೆಂಟ್‌ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಪೊಸಿಶನ್​ಗಳನ್ನು ಉಲ್ಲೇಖಿಸುವುದನ್ನು ಸುಲಭಗೊಳಿಸುತ್ತದೆ. ವಿಶೇಷವಾಗಿ ದೀರ್ಘ ಅಥವಾ ಸಂಕೀರ್ಣ ವಿಷಯದ ಮೇಲೆ ಇತರರೊಂದಿಗೆ ಕೆಲಸ ಮಾಡುವಾಗ ಲೈನ್ ನಂಬರಿಂಗ್ ತುಂಬಾ ಉಪಯೋಗವಾಗಲಿದೆ. ಹೊಸ ವೈಶಿಷ್ಟ್ಯವು ಪ್ರಸ್ತುತ ಎಲ್ಲಾ Google Workspace ಗ್ರಾಹಕರು ಮತ್ತು ವೈಯಕ್ತಿಕ ಗೂಗಲ್ ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ ಲಭ್ಯವಿದೆ.

ಡಾಕ್ಸ್ ಅಪ್ಲಿಕೇಶನ್ ಎಡಿಟ್ ಮೋಡ್‌ನಲ್ಲಿ ಪ್ರಾರಂಭ: ಇದಲ್ಲದೇ ಲೈನ್ ನಂಬರ್ ಸೇರಿಸುವ ಆಪ್ಷನ್ ಆ್ಯಡ್ಮಿನ್ ಕಂಟ್ರೋಲ್ ಹೊಂದಿರುವುದಿಲ್ಲ ಎಂದು ಕಂಪನಿ ಹೇಳಿದೆ. ಡಾಕ್ಸ್, ಶೀಟ್‌ಗಳು, ಸ್ಲೈಡ್‌ಗಳು ಮತ್ತು ಡ್ರಾಯಿಂಗ್‌ಗಳ 'ಇಮೇಜ್ ಆಪ್ಷನ್ಸ್​' ಸೈಡ್‌ಬಾರ್‌ನಲ್ಲಿ 'ಆಲ್ಟ್ ಟೆಕ್ಸ್ಟ್' ಆಯ್ಕೆ ಸೇರಿಸುವುದಾಗಿ ಗೂಗಲ್ ಕಳೆದ ವಾರ ಹೇಳಿತ್ತು. ಈ ತಿಂಗಳ ಆರಂಭದಲ್ಲಿ, ಕಂಪನಿಯು ಆಂಡ್ರಾಯ್ಡ್ ಸಾಧನಗಳಲ್ಲಿ ಡಾಕ್ಸ್‌ನಲ್ಲಿ first open experience ವನ್ನು ಪರಿಷ್ಕರಿಸುತ್ತಿದೆ ಎಂದು ಘೋಷಿಸಿತ್ತು. ಪರಿಷ್ಕರಿಸಿದ ಆವೃತ್ತಿಯಲ್ಲಿ ಡಾಕ್ಸ್ ಅಪ್ಲಿಕೇಶನ್ ಎಡಿಟ್ ಮೋಡ್‌ನಲ್ಲಿ ಪ್ರಾರಂಭವಾಗುತ್ತದೆ.

ಗೂಗಲ್ ಡಾಕ್ಸ್, ಮೊದಲ ಬಾರಿಗೆ 2006 ರಲ್ಲಿ ಬಿಡುಗಡೆಯಾಯಿತು. ಇದು ಉಚಿತ ವೆಬ್ - ಆಧಾರಿತ ವರ್ಡ್ ಪ್ರೊಸೆಸರ್ ಆಗಿದ್ದು, ಇದರಲ್ಲಿ ಡಾಕ್ಯುಮೆಂಟ್‌ಗಳನ್ನು ರಚಿಸಬಹುದು, ಎಡಿಟ್ ಮಾಡಬಹುದು ಮತ್ತು ಉಚಿತ ವೆಬ್ ಅಪ್ಲಿಕೇಶನ್‌ಗಳ ಗೂಗಲ್ ಡಾಕ್ಸ್ ಎಡಿಟರ್‌ಗಳ ಸೂಟ್‌ನ ಭಾಗವಾಗಿ ಸಂಗ್ರಹಿಸಬಹುದು. ಕ್ಲೌಡ್ - ಆಧಾರಿತ ಡಾಕ್ಸ್​ ವೇದಿಕೆಯು ಗೂಗಲ್ ಶೀಟ್‌ಗಳು, ಗೂಗಲ್ ಸ್ಲೈಡ್‌ಗಳು, ಗೂಗಲ್ ಡ್ರಾಯಿಂಗ್‌ಗಳು, ಗೂಗಲ್ ಫಾರ್ಮ್‌ಗಳು, ಗೂಗಲ್ ಸೈಟ್‌ಗಳು ಮತ್ತು ಗೂಗಲ್ ಕೀಪ್ ಅನ್ನು ಸಹ ಒಳಗೊಂಡಿದೆ.

ಉಚಿತ ಖಾತೆಯ ಮೂಲಕ ಸಾಫ್ಟ್​ವೇರ್​ ಬಳಸಬಹುದು: ಉಚಿತ ಗೂಗಲ್ ಖಾತೆಯ ಮೂಲಕ ಬಳಕೆದಾರರು ಡಾಕ್ಸ್​ ಸಾಫ್ಟ್​ವೇರ್​ ಅನ್ನು ಬಳಸಬಹುದು. ಡಾಕ್ಸ್​ ಡಾಟ್ ಗೂಗಲ್ ಡಾಟ್ ಕಾಮ್ ಗೆ ಹೋಗಿ ಅಥವಾ ಜಿಮೇಲ್ ಅಥವಾ ಗೂಗಲ್ ಡ್ರೈವ್ ಆನ್‌ಲೈನ್ ಸ್ಟೋರೇಜ್ ಖಾತೆಯಿಂದ ಗೂಗಲ್ ಡಾಕ್ಸ್‌ಗೆ ಪ್ರವೇಶ ಪಡೆಯಬಹುದು. ಗೂಗಲ್ ಡಾಕ್ಸ್ ಮತ್ತು ಮೈಕ್ರೋಸಾಫ್ಟ್ ವರ್ಡ್ ಎರಡನ್ನೂ ವರ್ಡ್ ಪ್ರೊಸೆಸಿಂಗ್‌ಗಾಗಿ ಬಳಸಲಾದರೂ ಎರಡೂ ಅಪ್ಲಿಕೇಶನ್‌ಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ.

ಗೂಗಲ್ ಡಾಕ್ಸ್ ಉಚಿತ ವೆಬ್-ಆಧಾರಿತ ಅಪ್ಲಿಕೇಶನ್ ಆಗಿದೆ. ಆದರೆ ಮೈಕ್ರೊಸಾಫ್ಟ್​ ವರ್ಡ್ Microsoft Office ಸೂಟ್‌ನ ಭಾಗವಾಗಿದೆ. ಇದನ್ನು ಖರೀದಿಸಿ ಮಾತ್ರ ಬಳಸಬಹುದು.

ಇದನ್ನೂ ಓದಿ : ಮಾನವ & AI ಪ್ರತ್ಯೇಕಿಸಲು ಹೊಸ ತಂತ್ರಜ್ಞಾನ; ಏನಿದು Worldcoin?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.