ETV Bharat / science-and-technology

ನಾಲ್ಕು ನಗರಗಳಿಗೆ ’ಮೂರೂ ಮಗ್ಗಲುಗಳ ನೋಟ‘ ಪರಿಚಯಿಸಿದ ಗೂಗಲ್​.. ಈ ಹೊಸ ವೈಶಿಷ್ಯದ ಬಗ್ಗೆ ತಿಳಿದುಕೊಳ್ಳಿ!

ನಿಮ್ಮ ರಜಾದಿನಗಳನ್ನು ನೀವು ಕಳೆಯಲು ಹೊರಟಿದ್ದರೆ Google ನಕ್ಷೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ವೈಶಿಷ್ಟ್ಯಗಳು ನಿಮ್ಮ ಪ್ರಯಾಣದ ಉದ್ದಕ್ಕೂ ನಿಮಗೆ ಸಹಾಯ ಮಾಡುತ್ತವೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

Immersive View in 4 new cities  Google Maps rolls out Immersive View  Immersive View feature  Google introduce Immersive View feature  ಇಮ್ಮರ್ಸಿವ್ ವ್ಯೂ ಪರಿಚಯಿಸಿದ ಗೂಗಲ್  ನಾಲ್ಕು ನಗರಗಳಿಗೆ ಇಮ್ಮರ್ಸಿವ್ ವ್ಯೂ  ಹೊಸ ವೈಶಿಷ್ಯ ಬಗ್ಗೆ ತಿಳಿದುಕೊಳ್ಳಿ  Google ನಕ್ಷೆ ಹೊಸ ವೈಶಿಷ್ಟ್ಯ  vಪೂರ್ಣ ನ್ಯಾವಿಗೇಷನ್ ಮೋಡ್‌  Google Maps ನಲ್ಲಿ Glanceable directions ವೈಶಿಷ್ಟ್ಯ
ನಾಲ್ಕು ನಗರಗಳಿಗೆ ಇಮ್ಮರ್ಸಿವ್ ವ್ಯೂ ಪರಿಚಯಿಸಿದ ಗೂಗಲ್
author img

By

Published : Jun 17, 2023, 9:43 AM IST

ಸ್ಯಾನ್ ಫ್ರಾನ್ಸಿಸ್ಕೋ: ಮಾನವ ಒಬ್ಬ ಸಂಚಾರಿ ಜೀವಿ. ಆತ ಒಂದು ಸ್ಥಳದಲ್ಲಿ ನಿಲ್ಲಲು ಇಚ್ಛಿಸುವುದಿಲ್ಲ. ಪ್ರವಾಸ ಬೆಳೆಸಿಕೊಳ್ಳವ ಹವ್ಯಾಸ ಸಾಮಾನ್ಯ. ಇದನ್ನು ಗಮನದಲ್ಲಿಟ್ಟುಕೊಂಡು Google Maps ಗಾಗಿ Google ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ಮ್ಯಾಪ್‌ಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸಿದೆ.

Google Maps ನಲ್ಲಿ Glanceable directions ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದೆ. ಲಾಕ್ ಸ್ಕ್ರೀನ್ ಮೂಲಕವೂ ಮಾರ್ಗವನ್ನು ಟ್ರ್ಯಾಕ್ ಮಾಡಲು ಈ ಸೇವೆ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯವನ್ನು ಆನ್ ಮಾಡಿದ ನಂತರ, ಮುಂಬರುವ ಸರದಿ ಅಥವಾ ಆಗಮನದ ಸಮಯದ ಕುರಿತು ಬಳಕೆದಾರರಿಗೆ ಸುಲಭವಾಗಿ ಅಪ್​ಡೇಟ್​ ಒದಗಿಸುತ್ತದೆ.

ಮೊದಲು ಈ ಮಾಹಿತಿಯನ್ನು ಪೂರ್ಣ ನ್ಯಾವಿಗೇಷನ್ ಮೋಡ್‌ನಲ್ಲಿ ಮಾತ್ರ ಒದಗಿಸಲಾಗಿತ್ತು. ಈ ವೈಶಿಷ್ಟ್ಯವನ್ನು ಕೆಲವೇ ತಿಂಗಳುಗಳಲ್ಲಿ ವಿಶ್ವದಾದ್ಯಂತ ಹೊರತರಲಾಗುವುದು. ಇದನ್ನು ವಾಕಿಂಗ್, ಸೈಕ್ಲಿಂಗ್ ಮತ್ತು ಡ್ರೈವಿಂಗ್ ಮೋಡ್‌ಗಳಲ್ಲಿ ನೀಡಲಾಗುವುದು. ಇದು Android ಮತ್ತು iOS ಸಾಧನಗಳಲ್ಲಿ ಲಭ್ಯವಾಗಲಿದೆ.

ಗೂಗಲ್ ಮ್ಯಾಪ್ಸ್‌ನಲ್ಲಿ ಹೊಸ ಸೇವೆಯನ್ನು ಬಿಡುಗಡೆ ಮಾಡಿದೆ. ಲಾಕ್ ಸ್ಕ್ರೀನ್ ಅಥವಾ ಮಾರ್ಗದ ಅವಲೋಕನದಿಂದ ನೇರವಾಗಿ ತಮ್ಮ ಪ್ರಯಾಣದ ಪ್ರಗತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಈ ವೈಶಿಷ್ಟ್ಯವು ಬಳಕೆದಾರರಿಗೆ ಅನುಮತಿಸುತ್ತದೆ. ತಮ್ಮ ಅಂತಿಮ ಸ್ಥಳ ಅಥವಾ ನಿರ್ಧರಿತ ಸ್ಥಳ( ಗಮ್ಯಸ್ಥಾನ) ವನ್ನು ತಲುಪಲು ನಿರ್ದೇಶನಗಳನ್ನು ಸ್ವೀಕರಿಸುವ ಮತ್ತು ವಿನಂತಿಸುವ ಮೂಲಕ, ಬಳಕೆದಾರರು ಅಪ್-ಟು-ಡೇಟ್ ಆಗಮನದ ಅಂದಾಜು ಸಮಯ (ETA) ಮತ್ತು ಮುಂಬರುವ ತಿರುವುಗಳ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ. ಬಳಕೆದಾರರು ಪರ್ಯಾಯ ಮಾರ್ಗವನ್ನು ತೆಗೆದುಕೊಂಡರೆ Google ಸ್ವಯಂಚಾಲಿತವಾಗಿ ನಿಮ್ಮ ಮಾರ್ಗ ಹಾದಿಗಳನ್ನು ಎಲ್ಲ ಮಗ್ಗಲುಗಳಿಂದ ಅಪ್​ಡೇಟ್​ ಮಾಡುತ್ತದೆ.

Google Maps ನಲ್ಲಿನ ಹಿರಿಯ ಉತ್ಪನ್ನ ನಿರ್ವಾಹಕರಾದ ಕ್ರಿಸ್ಟಿನಾ ಟಾಂಗ್ ಈ ಬಗ್ಗೆ ಮಾತನಾಡಿ, ಬಳಕೆದಾರರು ತಾವು ಈಗಾಗಲೇ ಭೇಟಿ ನೀಡಿದ ಸ್ಥಳಗಳನ್ನು ನಿರ್ಗಮಿಸಿ ಮುಂದೆ ಸಾಗಬಹುದು, ಒಂದೇ ಬಾರಿಗೆ ಅನೇಕ ಪ್ರವಾಸಗಳ ಬಗ್ಗೆ ಯೋಜಿಸಬಹುದು ಮತ್ತು ಸಹ ಪ್ರಯಾಣಿಕರೊಂದಿಗೆ ಸೈಟ್‌ಗಳಿಗೆ ಭೇಟಿ ನೀಡಿ ತಮ್ಮ ಇನ್‌ಪುಟ್ ಸಂಗ್ರಹಿಸಬಹುದು. ಅಷ್ಟೇ ಅಲ್ಲ ನೀವು ಇಷ್ಟಪಟ್ಟ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು (ಉದಾಹರಣೆಗೆ ಆಕರ್ಷಣೆಗಳು ಅಥವಾ ಹೋಟೆಲ್‌ಗಳು ) ಎಂದರು.

ಬಳಕೆದಾರರು ತಾವು ಭೇಟಿ ನೀಡಲು ಬಯಸುವ ಸ್ಥಳಗಳನ್ನು ಒಟ್ಟಿಗೆ ನಿರ್ಧರಿಸಬಹುದಾಗಿದೆ. ಅವರು ಮೂರು ಅಥವಾ ಹೆಚ್ಚಿನ ಗಮ್ಯಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು "Directions" ಬಟನ್​ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಭೇಟಿ ನೀಡಬೇಕಾದ ಸ್ಥಳಗಳನ್ನು ನಮೂದಿಸಿ. ಬಳಿಕ Google ನಕ್ಷೆ ಎಲ್ಲಾ ಆಯ್ಕೆಮಾಡಿದ ಸ್ಥಳಗಳನ್ನು ಒಳಗೊಳ್ಳುವ ಕಸ್ಟಮ್ ಮಾರ್ಗವನ್ನು ರಚಿಸುತ್ತದೆ. ಈ ಮಾರ್ಗವನ್ನು ಬಳಕೆದಾರರ ಇತ್ತೀಚಿನ ವಿಭಾಗದಲ್ಲಿ ಸೇವ್​ ಮಾಡುತ್ತದೆ ಎಂದು ಕ್ರಿಸ್ಟಿನಾ ಟಾಂಗ್​ ಅವರು ಹೇಳಿದರು.

ಗೂಗಲ್ ಇತ್ತೀಚೆಗೆ ನಾಲ್ಕು ಹೆಚ್ಚುವರಿ ನಗರಗಳಾದ ಆಮ್‌ಸ್ಟರ್‌ಡ್ಯಾಮ್, ಡಬ್ಲಿನ್, ಫ್ಲಾರೆನ್ಸ್ ಮತ್ತು ವೆನಿಸ್‌ನಲ್ಲಿ ಇಮ್ಮರ್ಸಿವ್ ವ್ಯೂ ಅನ್ನು ಪರಿಚಯಿಸಿದೆ. ಹೆಚ್ಚುವರಿಯಾಗಿ, ಕಂಪನಿಯು ಪ್ರಪಂಚದಾದ್ಯಂತ 500 ಕ್ಕೂ ಹೆಚ್ಚು ಪ್ರಸಿದ್ಧ ಹೆಗ್ಗುರುತುಗಳನ್ನು ಸೇರಿಸಲು ವೈಶಿಷ್ಟ್ಯವನ್ನು ವಿಸ್ತರಿಸುತ್ತಿದೆ. ಸುಧಾರಿತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಇಮ್ಮರ್ಸಿವ್ ವ್ಯೂ ವಿವಿಧ ಸ್ಥಳಗಳ ಬಹುಆಯಾಮದ ದೃಷ್ಟಿಕೋನವನ್ನು ತಯಾರಿಸಲು ತಲ್ಲೀನಗೊಳಿಸುವ ಚಿತ್ರಗಳನ್ನು ಸಂಯೋಜಿಸುತ್ತದೆ. ಅಷ್ಟೇ ಅಲ್ಲ ವಿಶ್ವಾಸಾರ್ಹ ಮಾಹಿತಿಯನ್ನು ಸ್ಕ್ರೀನ್​ ಮೇಲೆ ಪ್ರಸ್ತುತಪಡಿಸುತ್ತದೆ.

ಓದಿ: ಗೂಗಲ್ ರೀಡ್‌ ಮ್ಯಾರಥಾನ್: ದಾಖಲೆ ನಿರ್ಮಿಸಿದ ತಮಿಳುನಾಡಿನ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.