ETV Bharat / science-and-technology

ಅಂಟಾರ್ಟಿಕಾದಲ್ಲಿ ವೇಗವಾಗಿ ಕರಗುತ್ತಿದೆ ಹಿಮರಾಶಿ! ಸಮುದ್ರ ಮಟ್ಟ ಹೆಚ್ಚಳದ ಅಪಾಯ

ಅಂಟಾರ್ಟಿಕಾ ಪೆನಿನ್ಸುಲಾದಲ್ಲಿನ ಹಿಮನದಿಗಳ ಮೇಲೆ ಜಾಗತಿಕ ತಾಪಮಾನದ ಪರಿಣಾಮವನ್ನು ಕಾಣಬಹುದು. ಉಪಗ್ರಹದ ದತ್ತಾಂಶದ ಮೂಲಕ ಈ ಕುರಿತು ಅಧ್ಯಯನ ನಡೆಸಲಾಗಿದೆ.

a-glacier-is-melting-rapidly-in-the-antarctic-peninsula

author img

By

Published : Mar 3, 2023, 12:01 PM IST

ಲಂಡನ್​: ಜಾಗತಿಕ ತಾಪಮಾನದಿಂದ ಹಿಮರಾಶಿ ಕರಗುತ್ತಿದೆ. ಭವಿಷ್ಯದಲ್ಲಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಲಿದ್ದು, ಗಂಭೀರ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂಬ ಕುರಿತು ಈಗಾಗಲೇ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಹೊಸ ಸಂಶೋಧನೆಯೊಂದು ಹೊರಬಂದಿದೆ. ಅಂಟಾರ್ಕ್ಟಿಕಾದಲ್ಲಿ ಹಿಮನದಿಗಳ ಕರಗುವಿಕೆ ಮತ್ತು ಸಮುದ್ರದ ಬೆಚ್ಚಗಿನ ನೀರಿನ ಜೊತೆಗೆ ಬೇಸಿಗೆಯಲ್ಲಿ ಕರಾವಳಿ ಭಾಗಗಳಲ್ಲಿ ನೀರಿನ ವೇಗ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಈ ಹಿಮನದಿಗಳು ಒಂದು ಕಿ.ಮೀ ಉದ್ದಕ್ಕೆ ಹರಿಯುತ್ತವೆ. ಹೊಸ ಸಂಶೋಧನೆಯಲ್ಲಿ ಈ ಋತುಮಾನದ ವೈಪರೀತ್ಯವೂ ಹಿಮನದಿಗಳ ನೀರಿನ ವೇಗ ಹೆಚ್ಚಿಸಿದ್ದು, ಬೇಸಿಗೆಯ ಬಿಸಿಲಿನಿಂದಾಗಿ ಶೇ 22ರಷ್ಟು ವೇಗ ಪಡೆದುಕೊಂಡಿದೆ. ಹವಾಮಾನ ಬದಲಾವಣೆಯು ಹಿಮನದಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸಮುದ್ರ ಮಟ್ಟ ಹೆಚ್ಚಿಸುವ ಆತಂಕವನ್ನು ಸಂಶೋಧನೆ ತಿಳಿಸಿದೆ.

ಲೀಡ್ಸ್​ ವಿಶ್ವವಿದ್ಯಾಲದಯ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದ್ದು, ಇದಕ್ಕಾಗಿ 10 ಸಾವಿರಕ್ಕೂ ಹೆಚ್ಚು ಸ್ಯಾಟಲೈಟ್​ ಇಮೇಜ್​ ಪಡೆಯಲಾಗಿದೆ. ಅಂಟಾರ್ಟಿಕಾದ ಪೆನಿನ್ಸುಲಾದಲ್ಲಿ 2014ರಿಂದ 2021ರವರೆಗೆ ಪಡೆದ ಚಿತ್ರಗಳನುಸಾರ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಅಂಟಾರ್ಟಿಕಾದಲ್ಲಿ ಚಳಿ ಮತ್ತು ಬೇಸಿಗೆ ಕಾಲದಲ್ಲಿ ಹೇಗೆ ಹಿಮನದಿಗಳು ಕರಗುತ್ತಿವೆ ಎಂಬುದನ್ನು ವಿವರಿಸಲಾಗಿದೆ.

ಅಂಟಾರ್ಟಿಕಾದ ಪೆನಿನ್ಸುಲಾ ಅತಿ ಹೆಚ್ಚಿನ ಹಿಮನದಿಗಳನ್ನು ಹೊಂದಿದೆ. 1992 ಮತ್ತು 2017ರಲ್ಲಿ ಈ ಪ್ರದೇಶದಲ್ಲಿ ಹಿಮನದಿಗಳು ಕರಗಿದ ಪರಿಣಾಮ ಜಾಗತಿಕ ಸಮುದ್ರದ ನೀರಿನ ಮಟ್ಟದಲ್ಲಿ 7.6 ಮಿ.ಮಿ ಹೆಚ್ಚಳವಾಗಿದೆ. ಭವಿಷ್ಯದಲ್ಲಿ ಹವಾಮಾನ ಬದಲಾವಣೆಯಿಂದ ಇದು ಹೇಗೆ ಬದಲಾಗಬಹುದು ಎಂಬ ಅನಿಶ್ಚಿತತೆಯ ಮಾದರಿಯನ್ನು ಇದು ಹೊಂದಿದೆ.

ಈ ಸಂಶೋಧನೆ ಕುರಿತು ತಿಳಿಸಿರುವ ಲೇಖಕ ಬೆನ್​ ವಾಲಿಸ್​, ಅಂಟಾರ್ಟಿಕಾದಲ್ಲಿ ಹಿಮನದಿಗಳು ಪರಿಸರಕ್ಕೆ ಎಷ್ಟು ಸೂಕ್ಷ್ಮವಾಗಿವೆ. ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ಪರಿಸರಕ್ಕೆ ತಕ್ಕಂತೆ ಹೊಂದಿಕೆಯಾಗುವ ನಡುವಳಿಕೆ ಹೊಂದಿದೆ ಎಂಬುದನ್ನು ತಿಳಿದಿದ್ದೇವೆ. ಇದೀಗ ಅಂಟಾರ್ಟಿಕಾ ಕೂಡ ಇದೇ ರೀತಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದನ್ನು ಕಾಣಬಹುದು ಎಂದಿದ್ದಾರೆ.

ಭೂಮಿ ಮೇಲೆ ವೇಗವಾಗಿ ತಾಪಮಾನದ ಬದಲಾವಣೆಗೆ ಅಂಟಾರ್ಟಿಕಾದ ಪೆನಿನ್ಸುಲಾ ಸಾಕ್ಷಿಯಾಗಿದೆ. ಇದೇ ರೀತಿ ಕಾರ್ಯನಿರ್ವಹಿಸಿದರೆ ಎಷ್ಟು ಬೇಗ ಬದಲಾವಣೆ ನಡೆಯಬಹುದು ಎಂದು ಮೇಲ್ವಿಚಾರಣೆ ನಡೆಸಬಹುದು. ಹವಾಮಾನ ಬದಲಾವಣೆಗಳಿಂದ ಮಂಜುಗಡ್ಡೆಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗಿದೆ ಎಂದು ಸಂಶೋಧನೆ ಲೇಖಕರಾದ ಡಾ.ಅನ್ನಾ ಹೊಗ್ಗಾ ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಹಿಮ ಕರಗುವುದರಿಂದ ದಕ್ಷಿಣ ಸಾಗರದಲ್ಲಿ ಹಿಮನದಿಗಳ ವೇಗ ಹೆಚ್ಚಾಗುತ್ತಿದೆ. ದಕ್ಷಿಣ ಮಹಾಸಾಗರದ ಬೆಚ್ಚಗಿನ ನೀರು ಚಲಿಸುವ ಹಿಮಗಡ್ಡೆಯ ಮುಂಭಾಗವನ್ನು ಸವೆಸುತ್ತಿದೆ ಎಂಬುದನ್ನು ಉಪಗ್ರಹ ದತ್ತಾಂಶ ತೋರಿಸಿದೆ. ಈ ಅಧ್ಯಯನಕ್ಕೆ ಯುರೋಪಿಯನ್​ ಬಾಹ್ಯಕಾಶ ಸಂಸ್ಥೆ ಮತ್ತು ಯುರೋಪಿಯನ್​ ಕಮಿಷನ್ ಕೊಪರ್ನಿಕಸ್​ ಸೆಂಟಿನೆಲ್​-1 ಉಪಗ್ರಹದ ದತ್ತಾಂಶಗಳ ಮಾಹಿತಿ ಪಡೆಯಲಾಗಿದೆ. ಅಂಟಾರ್ಟಿಕಾದ ಸಂಪೂರ್ಣ ಕರಾವಳಿಯಲ್ಲಿ ಪ್ರತಿವಾರ ಗಮನಿಸಲಾಗಿದೆ.

ಇದನ್ನೂ ಓದಿ: ದಾಖಲೆಯ ಗರಿಷ್ಠ ಮಟ್ಟ ತಲುಪಿದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ.. ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.