ETV Bharat / science-and-technology

ಮಹಿಳಾ ಉದ್ಯೋಗಿಗೆ ಲಿಂಗ ತಾರತಮ್ಯ; ಗೂಗಲ್​ಗೆ 1.1 ಮಿಲಿಯನ್ ಡಾಲರ್ ದಂಡ - ಗೂಗಲ್​ಗೆ ನ್ಯಾಯಾಧೀಶರು ಆದೇಶಿಸಿದ್ದಾರೆ

ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಯುಎಸ್​ ನ್ಯಾಯಾಲಯ ಗೂಗಲ್​ಗೆ ದಂಡ ವಿಧಿಸಿದೆ.

Google ordered to pay $1.1 mn to female executive over gender discrimination

author img

By ETV Bharat Karnataka Team

Published : Oct 22, 2023, 2:31 PM IST

ಸ್ಯಾನ್ ಫ್ರಾನ್ಸಿಸ್ಕೋ : ಲಿಂಗ ಆಧಾರಿತ ತಾರತಮ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಗೂಗಲ್ ತನ್ನ ಉದ್ಯೋಗಿಯೊಬ್ಬರಿಗೆ 1.1 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಗೂಗಲ್ ಕ್ಲೌಡ್ ಎಂಜಿನಿಯರಿಂಗ್ ನಿರ್ದೇಶಕ ಉಲ್ಕು ರೋವ್ ಎಂಬುವರು ತಮ್ಮ ಮೇಲೆ ಲಿಂಗಾಧಾರಿತ ಅಸಮಾನತೆ ಎಸಗಲಾಗಿದೆ ಎಂದು ಮೊಕದ್ದಮೆ ಹೂಡಿದ್ದರು. ತಮಗಿಂತಲೂ ಕಡಿಮೆ ಅನುಭವ ಹೊಂದಿರುವ ಪುರುಷ ಉದ್ಯೋಗಿಗಳಿಗೆ ತಮಗಿಂತ ಹೆಚ್ಚು ವೇತನ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ದೂರು ಸಲ್ಲಿಸಿದ್ದಕ್ಕಾಗಿ ಕಂಪನಿ ತಮ್ಮ ಬಡ್ತಿಗಳನ್ನು ಕೂಡ ತಡೆಹಿಡಿದಿದೆ ಎಂದು ಅವರು ಹೇಳಿದ್ದರು.

ಈ ಪ್ರಕರಣದಲ್ಲಿ ದಂಡನಾತ್ಮಕ ಹಾನಿ ಮತ್ತು ನೋವು - ಸಂಕಟ ಎರಡೂ ವಿಷಯಗಳಲ್ಲಿ ದಂಡ ಪಾವತಿಸುವಂತೆ ಗೂಗಲ್​ಗೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಬ್ಲೂಮ್​ಬರ್ಗ್ ಲಾ ವರದಿ ಮಾಡಿದೆ. ರೋವ್ ಪ್ರಕರಣದಲ್ಲಿ, ಗೂಗಲ್ ಲಿಂಗ ಆಧಾರಿತ ತಾರತಮ್ಯವನ್ನು ಮಾಡಿದೆ ಎಂದು ನ್ಯಾಯಾಧೀಶರು ನಿರ್ಧರಿಸಿದ್ದಾರೆ. ರೋವ್ ಅವರು 2017 ರಲ್ಲಿ ಗೂಗಲ್​ನಲ್ಲಿ ಕೆಲಸ ಪ್ರಾರಂಭಿಸಿದಾಗ 23 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರು.

ಲೈಂಗಿಕ ಕಿರುಕುಳ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದ ಆರೋಪದಲ್ಲಿ 2018ರಲ್ಲಿ ಸುಮಾರು 20 ಸಾವಿರ ಉದ್ಯೋಗಿಗಳು ಕಂಪನಿಯ ವಿರುದ್ಧ ಭಾರಿ ಪ್ರತಿಭಟನೆ ಮಾಡಿದ್ದರು. ಗೂಗಲ್​ನ ಹಿರಿಯ ಅಧಿಕಾರಿಗಳ ವಿರುದ್ಧ, ವಿಶೇಷವಾಗಿ ಆಂಡ್ರಾಯ್ಡ್ ಸೃಷ್ಟಿಕರ್ತ ಆಂಡಿ ರೂಬಿನ್ ವಿರುದ್ಧ ಲೈಂಗಿಕ ದುರ್ನಡತೆ ಆರೋಪಗಳ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರಕಟವಾದ ಲೇಖನದ ನಂತರ ಈ ಪ್ರತಿಭಟನೆಗಳು ನಡೆದಿದ್ದವು. ನಂತರ ಅವರು ಈ ಆರೋಪಗಳನ್ನು ನಿರಾಕರಿಸಿದ್ದರು.

ಗೂಗಲ್ ವಿಶ್ವದ ಪ್ರಸಿದ್ಧ ಇಂಟರ್ನೆಟ್ ಸರ್ಚ್ ಎಂಜಿನ್ ಆಗಿದ್ದು, ಇದನ್ನು ಮೂಲತಃ ಬ್ಯಾಕ್​ರಬ್ ಎಂದು ಕರೆಯಲಾಗುತ್ತಿತ್ತು. ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಇದನ್ನು 1996 ರಲ್ಲಿ ಸರ್ಚ್ ಎಂಜಿನ್ ಕಂಪನಿಯಾಗಿ ಪ್ರಾರಂಭಿಸಿದರು. 1998ರ ಸೆಪ್ಟೆಂಬರ್ 15 ರಂದು, ಡೊಮೇನ್ google ಡಾಟ್ com ಅನ್ನು ನೋಂದಾಯಿಸಲಾಯಿತು. ಗೂಗಲ್ ಕಂಪನಿಯನ್ನು ಸೆಪ್ಟೆಂಬರ್ 4, 1998 ರಂದು ನೋಂದಾಯಿಸಲಾಯಿತು.

ಸರ್ಚ್ ಎಂಜಿನ್ ಕಂಪನಿಯ ಪ್ರಮುಖ ಉತ್ಪನ್ನವಾಗಿದ್ದರೂ, ಗೂಗಲ್ ಹಾರ್ಡ್​ವೇರ್, ಕ್ಲೌಡ್ ಕಂಪ್ಯೂಟಿಂಗ್, ಜಾಹೀರಾತು, ಸಾಫ್ಟ್​ವೇರ್ ಮತ್ತು ಎಐ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ : ಶೇ 49ರಷ್ಟು ಶಿಕ್ಷಕರಿಗೆ ತಿಳಿದೇ ಇಲ್ಲ ಎಐ, ಬೇಕಿದೆ ತರಬೇತಿ; ಆಕ್ಸ್​ಫರ್ಡ್ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.