ನವದೆಹಲಿ: ಆ್ಯಪಲ್ ವಾಚ್ನ ಹೊಸ ಸೆನ್ಸಾರ್ ಟೆಕ್ನಾಲಜಿಯಿಂದ ಬಳಕೆದಾರರು ಹೃದಯದ ಆರೋಗ್ಯದ ಕುರಿತ ಕ್ಲಿನಿಕ್ಗಳಿಂದ ನೇರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಬಳಕೆದಾರರಿಗೆ ದೈನಂದಿನ ಚಟುವಟಿಕೆಯ ಮೂಲಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಆ್ಯಪಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ವಿಲಿಯಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಹೊಸ ಅ್ಯಪಲ್ ವಾಚ್ ಒಎಸ್ 7 ಆವೃತ್ತಿಯ ಆಪ್ಟಿಕಲ್ ಹಾರ್ಟ್ ಸೆಸನ್ಸಾರ್, ಜಿಪಿಎಸ್ ಮತ್ತು ಅಕ್ಸೆಲೆರೊಮೀಟರ್ ಸೇರಿದಂತೆ ಅನೇಕ ಸೆನ್ಸಾರ್ಗಳು ಹೃದಯದ ಆರೋಗ್ಯದ ಕುರಿತು ಅಂದಾಜು ಮಾಡಿ ಮಾಹಿತಿ ನೀಡುತ್ತದೆ.
- ಬಳಕೆದಾರ ದೈನಂದಿನ ತಾಲೀಮು ಸೇರಿಂದತೆ ಇತರ ಚಟುವಟಿಕೆಗಳನ್ನು ಅಳತೆ ಮಾಡಿ ಹೃದಯದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಆ್ಯಪಲ್ ವಾಚ್ ಒಎಸ್ 7 ಆವೃತ್ತಿ ನೀಡುತ್ತದೆ.
ಈ ಹೊಸ ಆವಿಷ್ಕಾರದಿಂದ, ಕಡಿಮೆ ಕಾರ್ಡಿಯೋ ಫಿಟ್‌ನೆಸ್ ಹೊಂದಿರುವ ಬಳಕೆದಾರರಿಗೆ ವಿಒ 2 ಗರಿಷ್ಠ ಮಟ್ಟ ಅಥವಾ ಆಮ್ಲಜನಕದ ಗರಿಷ್ಠ ಮಟ್ಟವನ್ನು ಅಳೆಯಲು ಆ್ಯಪಲ್ ವಾಚ್ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ಜೀವನ ಕ್ರಮ ಅಳವಡಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದು ಆ್ಯಪಲ್ ಕಂಪನಿ ತಿಳಿಸಿದೆ.