ನವದೆಹಲಿ: ಫಿನ್ನಿಶ್ ಮೊಬೈಲ್ ಫೋನ್ ತಯಾರಕ ಸಂಸ್ಥೆ ಹೆಚ್ಎಂಡಿ(HMD) ಕಂಪನಿ ತನ್ನ ಇತ್ತೀಚಿನ ನೋಕಿಯಾ G50 ಸ್ಮಾರ್ಟ್‌ಫೋನ್‌ಗಳಿಗಾಗಿ ಆಂಡ್ರಾಯ್ಡ್ 12 ಅಪ್ಡೇಟ್ ಹೊರ ತಂದಿದೆ.
ಜಿಎಸ್ಎಮ್ ಅರೆನಾ ಪ್ರಕಾರ, ಮೊದಲ ತರಂಗದಲ್ಲಿ ನವೀಕರಣವನ್ನು ಸ್ವೀಕರಿಸುವ ದೇಶಗಳ ಕಂಪನಿಯಿಂದ ಇನ್ನೂ ಈ ಬಗ್ಗೆ ದೃಢೀಕರಣಗೊಂಡಿಲ್ಲ ಆದಾಗ್ಯೂ, ಫಿನ್‌ಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ನೋಕಿಯಾ G50 ಆಂಡ್ರಾಯ್ಡ್ 12 ಅನ್ನು ಸ್ವೀಕರಿಸಿವೆ ಎಂದು ವರದಿಗಳು ಬಹಿರಂಗಪಡಿಸಿವೆ.
ವರದಿಯ ಪ್ರಕಾರ, ನೋಕಿಯಾ G50ನ ಆಂಡ್ರಾಯ್ಡ್ 12 ಅಪ್‌ಡೇಟ್‌ಗೆ 2.09 GB ಡೇಟಾ ಅಗತ್ಯವಿದೆ. ಇದು ಆವೃತ್ತಿ ಸಂಖ್ಯೆ V2.160 ಅನ್ನು ಹೊಂದಿದ್ದು, ನವೆಂಬರ್ 2021 ಆಂಡ್ರಾಯ್ಡ್ ಭದ್ರತಾ ಪ್ಯಾಚ್‌ನೊಂದಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಳವಿನಂಚಿಲ್ಲಿದ್ದ ಮೆಕ್ಸಿಕನ್ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!