ವಾಷಿಂಗ್ಟನ್: ಜಗತ್ತಿನ ಟೆಕ್ ದೈತ್ಯ ಸಂಸ್ಥೆ ಆ್ಯಪಲ್ ತನ್ನ ನವೀಕೃತ ಐಪ್ಯಾಡ್ ಏರ್‌ಅನ್ನು ಬಿಡುಗಡೆ ಮಾಡಿದೆ. ಇದು ಟ್ಯಾಬ್ಲೆಟ್‌ಗೆ ಐಪ್ಯಾಡ್ ಪ್ರೊ-ಶೈಲಿಯ ಮರುವಿನ್ಯಾಸವನ್ನು ನೀಡಿದ ಒಂದೂವರೆ ವರ್ಷಗಳ ನಂತರ ಮಾರುಕಟ್ಟೆಗೆ ಬರುತ್ತಿದೆ. ದಿ ವರ್ಜ್ ವರದಿ ಪ್ರಕಾರ, ಹೆಚ್ಚಿನ ವಿನ್ಯಾಸವು ಮೊದಲಿನಂತೆ ಒಂದೇ ಆಗಿದ್ದರೂ, ಹೊಸ ಐಪ್ಯಾಡ್ ಏರ್ ಮಾದರಿಯನ್ನು ವೇಗವಾದ ಎಂ1 ಪ್ರೊಸೆಸರ್‌ನೊಂದಿಗೆ ನವೀಕರಿಸಲಾಗಿದೆ. ಇದು ಮೊದಲು ಆ್ಯಪಲ್‌ನ ಮ್ಯಾಕ್ ಬುಕ್‌ನಲ್ಲಿ ಇತ್ತು.
ವೈ-ಫೈ ಮಾತ್ರ ಇರುವ ಐಪ್ಯಾಡ್ ಏರ್‌ಗಳು 599 ಡಾಲರ್‌ನಿಂದ ಆರಂಭವಾಗುತ್ತವೆ. ಇದು 5ಜಿ ಸಪೋರ್ಟ್ ಇದ್ದು, ಯುಎಸ್‌ಬಿ-ಸಿ ಪೋರ್ಟ್‌ನ 10ಜಿಬಿಪಿಎಸ್ ಡೇಟಾ ವರ್ಗಾವಣೆ ವೇಗದೊಂದಿಗೆ ಎರಡು ಪಟ್ಟು ವೇಗವಾಗಿರುತ್ತದೆ. ವೈ-ಫೈ ಮತ್ತು ಸೆಲ್ಯುಲಾರ್ ಆವೃತ್ತಿಯ ಬೆಲೆ 749 ಡಾಲರ್ ಇದೆ. ಪವರ್ ಬಟನ್‌ನಲ್ಲಿ ಅಂತರ್ನಿರ್ಮಿತ ಟಚ್ ಐಡಿ ಹೊಂದಿರುವ ಟ್ಯಾಬ್ಲೆಟ್, ಬೂದು, ಗುಲಾಬಿ, ನೇರಳೆ, ನೀಲಿ ಹಾಗೂ ಆ್ಯಪಲ್ ಸ್ಟಾರ್ಲೈಟ್ ಎಂದು ಕರೆಯಲ್ಪಡುವ ಚಿನ್ನದ ಬಣ್ಣಗಳಲ್ಲಿ ಮಾರ್ಚ್ 18 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ.
ಹೊಸ ಐಪ್ಯಾಡ್ ಏರ್‌ನ ಹಿಂಬದಿಯ ಕ್ಯಾಮರಾ 12 ಮೆಗಾಪಿಕ್ಸೆಲ್ ಇದೆ. 10.9-ಇಂಚಿನ ಡಿಸ್‌ಪ್ಲೇ, 500 ನಿಟ್ಸ್ ಬ್ರೈಟ್‌ನೆಸ್‌ನಲ್ಲಿ ಗರಿಷ್ಠವಾಗಿದೆ. ಹೆಚ್‌ಡಿಆರ್ ಕೂಡ ಇದೆ. ಆದರೆ ಪ್ರೊಮೋಷನ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಐಪ್ಯಾಡ್ ಏರ್ ಲ್ಯಾಂಡ್‌ಸ್ಕೇಪ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
ಇದನ್ನೂ ಓದಿ: ಗೂಗಲ್‌ನ ಬಹು ನಿರೀಕ್ಷಿತ ಪಿಕ್ಸೆಲ್ 6ಎ ಫೋನ್, ವಾಚ್‌ಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಸಾಧ್ಯತೆ