ಸ್ಯಾನ್ ಫ್ರಾನ್ಸಿಸ್ಕೋ: ಆ್ಯಪಲ್ ಕಂಪನಿ ವಾಚ್‌ನ 8ನೇ ಸೀರಿಸ್ ಶೀಘ್ರದಲೇ ಮಾರುಕಟ್ಟೆಗೆ ಬರಲಿದ್ದು, ಇದರಲ್ಲಿ ಸಂವೇದಕಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ, ಆ ಮೂಲಕ ಈ ವಾಚ್ ಬಳಸುವ ಗ್ರಾಹಕ ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಅಳೆಯಲು ಅನುವು ಮಾಡಿಕೊಡುತ್ತದೆ ಎಂದು ಡಿಜಿಟೈಮ್ಸ್ ಹೇಳಿದೆ.
ಆ್ಯಪಲ್ ಮತ್ತು ಅದರ ಪೂರೈಕೆದಾರರು ಈಗಾಗಲೇ ಕಡಿಮೆ ತರಂಗಾಂತರದ ಅತಿಗೆಂಪು ಸಂವೇದಕಗಳನ್ನು ವಾಚ್‌ನಲ್ಲಿ ಅಳವಡಿಸುವ ಸಂಬಂಧ ಕೆಲಸ ಪ್ರಾರಂಭಿಸಿದ್ದಾರೆ. ಹೊಸ ಸಂವೇದಕ(ಸೆನ್ಸಾರ್)ವನ್ನು ವಾಚ್‌ನ ಹಿಂಭಾಗದಲ್ಲಿ ಸ್ಥಾಪಿಸಲಾಗುವುದು. ಇದು ವಾಚ್ ಧರಿಸಿದವರ ರಕ್ತದಲ್ಲಿನ ಸಕ್ಕರೆ ಮತ್ತು ಗ್ಲೂಕೋಸ್ ಅಂಶವನ್ನು ಅಳೆಯಲು ಅನುವು ಮಾಡಿಕೊಡುತ್ತದೆ. ಇದು ಪ್ರಸ್ತುತ ಆ್ಯಪಲ್ ವಾಚ್ ಮಾದರಿಗಳಲ್ಲಿನ ಪ್ರಸ್ತುತ ವೈಶಿಷ್ಟ್ಯಗಳಿಗೆ ಇದು ಉತ್ತಮ ಸೇರ್ಪಡೆಯಾಗಿದೆ.
ಇತ್ತೀಚೆಗೆ, ಆ್ಯಪಲ್ ವಾಚ್ ಸರಣಿ 6 ರಕ್ತದ ಆಮ್ಲಜನಕ ಸಂವೇದಕವನ್ನು ಸೇರಿಸಿದೆ. ಮುಖ್ಯವಾಗಿ ದೈನಂದಿನ ಚಟುವಟಿಕೆಯನ್ನು ಅಳೆಯುವ ಸಾಮರ್ಥ್ಯ ಹೊಂದಿರುವ ಮೊದಲ ಆ್ಯಪಲ್ ವಾಚ್‌ಗೆ ಹೋಲಿಸಿದರೆ, ಈಗ ಬರುವ ವಾಚ್ ಈಗ ಇಸಿಜಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಮತ್ತು ಕಡಿಮೆ ಹೃದಯ ಬಡಿತಗಳು, ರಕ್ತದ ಆಮ್ಲಜನಕದ ಮಟ್ಟಗಳು ಪತ್ತೆ ಹಚ್ಚುತ್ತದೆ.
ಕ್ಯುಪರ್ಟಿನೊ ಆಧಾರಿತ ಟೆಕ್ ದೈತ್ಯ ಸಂಸ್ಥೆ ಇತ್ತೀಚೆಗೆ ಆ್ಯಪಲ್ ವಾಚ್‌ನ 7 ಸೀರಿಸ್ ಅನ್ನು ಪ್ರಾರಂಭಿಸಿದೆ. ಭಾರತದಲ್ಲಿ, ಆ್ಯಪಲ್ ವಾಚ್ ಸೀರಿಸ್ 7 (41 ಎಂಎಂ) 41,900 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಆದರೆ, ಕ್ಯಾಶ್‌ಬ್ಯಾಕ್ ನಂತರ 38,900 ರೂಪಾಯಿಗೆ ಖರೀದಿಸಬಹುದು. 7 ಸೀರಿಸ್‌ನ (45 ಎಂಎಂ) 44,900 ರೂಪಾಯಿ ಇದ್ದು, ಕ್ಯಾಶ್‌ಬ್ಯಾಕ್ ನಂತರ 41,900 ರೂ. ಗೆ ಖರೀದಿಸಬಹುದು.
ಹೊಸ ಸರಣಿ 7 ಅನ್ನು ಎಲ್ಲ ಹೊಸ ಹಸಿರು, ನೀಲಿ, ಮಿಡ್‌ನೈಟ್, ಸ್ಟಾರ್‌ಲೈಟ್ ಮತ್ತು (ಪ್ರಾಡೆಕ್ಟ್) ಕೆಂಪು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ, ಸ್ಟೇನ್‌ಲೆಸ್ ಸ್ಟೀಲ್ ಮಾದರಿಗಳು ಬೆಳ್ಳಿ, ಗ್ರ್ಯಾಫೈಟ್ ಮತ್ತು ಚಿನ್ನದ ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿ ಲಭ್ಯವಿರುತ್ತವೆ. ಸರಣಿ 7ರಲ್ಲಿ ಗಮನಾರ್ಹವಾಗಿ ಹೆಚ್ಚಿನ ಪರದೆ ಮತ್ತು ತೆಳುವಾದ ಗಡಿಗಳೊಂದಿಗೆ ಮರು-ಇಂಜಿನಿಯರಿಂಗ್ ಆಲ್ವೇಸ್-ಆನ್ ರೆಟಿನಾ ಪ್ರದರ್ಶನವನ್ನು ಹೊಂದಿದೆ.